HAL Recruitment 2021 : 8ನೇ ಕ್ಲಾಸ್ ಪಾಸಾದವರಿಗೂ ಹೆಚ್ಎಎಲ್ ನಲ್ಲಿ ಉದ್ಯೋಗಾವಕಾಶ
ಸರ್ಕಾರಿ ಸ್ವಾಮ್ಯದ ಹೆಚ್ಎಯಎಲ್ ನಲ್ಲಿ ಉದ್ಯೋಗ ಪಡೆಯಲು ಸುವರ್ಣಾವಕಾಶ ಒದಗಿ ಬಂದಿದೆ.
ನವದೆಹಲಿ : ಸರ್ಕಾರಿ ಸ್ವಾಮ್ಯದ ಹೆಚ್ಎಯಎಲ್ ನಲ್ಲಿ ಉದ್ಯೋಗ (HAL Recruitment 2021) ಪಡೆಯಲು ಸುವರ್ಣಾವಕಾಶ ಒದಗಿ ಬಂದಿದೆ. ಹೆಚ್ಎಎಎಲ್ ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಅರ್ಜಿ ಸಲ್ಲಿಸಬಯಸುವವರು ಹೆಚ್ಎಎಲ್ ನ ಅಧಿಕೃತ ವೆಬ್‍ಸೈಟ್ hal-india.co.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನವಾಗಿದೆ.
ಅಲ್ಲದೆ ಅರ್ಜಿ ಸಲ್ಲಿಸಬಯಸುವವರು ಹೆಚ್ಎಎಲ್ ನ ಅಧಿಕೃತ ವೆಬ್ಸೈಟ್ https://hal-india.co.in/Career ಮೂಲಕವೂ ಲಾಗಿನ್ ಆಗಿ, ಜೂನ್ 18ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. https://hal-india.co.in/Career ಇದೇ ಲಿಂಕ್ ನಲ್ಲಿ ನೊಟೀಫಿಕೇಶನ್ ಕೂಡಾ ಲಭ್ಯವಾಗಿದ್ದು, ವಿವರಗಳಿಗಾಗಿ ನೋಡಬಹುದಾಗಿದೆ.
ಇದನ್ನೂ ಓದಿ : CBSE 12th Result 2021 : ಜುಲೈ.31ಕ್ಕೆ CBSE 12ನೇ ತರಗತಿ ಫಲಿತಾಂಶ!
ಅರ್ಹತೆಗಳು :
ಟರ್ನರ್, ಫಿಟ್ಟರ್, ಇಲೆಕ್ಟ್ರಿಶಿಯನ್, ಮೆಶಿನಿಷ್ಟ್ ಗ್ರೈಂಡರ್, ಡ್ರಾಫ್ಟ್ಸ್ ಮೆನ್, ಹುದ್ದೆಗಳಿಗೆ ಅರ್ಜಿ (HAL Recruitment 2021) ಆಹ್ವಾನಿಸಲಾಗಿದೆ. ಇದಕ್ಕೆ ಹತ್ತನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಗಳನ್ನು (Exam) ಪಾಸ್ ಮಾಡಿರಬೇಕು. ವೆಲ್ಡರ್, ಶೀಟ್ ಮೆಟಲ್ ವರ್ಕರ್ ಗೆ 8ನೇ ಕ್ಲಾಸ್ ಪಾಸ್ (8th pass)ಆಗಿದ್ದರೂ ಸಾಕು.
ವಯೋಮಾನ :
ಹೆಚ್ ಎಎಲ್ ಹುದ್ದೆಗಳಿಗೆ ಅರ್ಜಿ (HAL Recruitment 2021) ಸಲ್ಲಿಸುವ ಅಭ್ಯರ್ಥಿಗಳು 27 ವರ್ಷ ಮೀರಿರಬಾರದು. ಈ ಹುದ್ದೆಗೆ ಮೀಸಲಾತಿಯೂ ಅನ್ವಯವಾಗುತ್ತದೆ.
ಇದನ್ನೂ ಓದಿ : Cooking Oil Price : ಸಾರ್ವಜನಿಕರಿಗೆ ಸಿಹಿ ಸುದ್ದಿ : ಅಡುಗೆ ಎಣ್ಣೆ ಬೆಲೆಯಲ್ಲಿ ಶೇ.20 ರಷ್ಟು ಇಳಿಕೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.