ಬೆಂಗಳೂರು: ಫೆಬ್ರವರಿ 2019 ರಲ್ಲಿ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ 2019ರ ಉಸ್ತುವಾರಿಯನ್ನು ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ ವಹಿಸಿಕೊಳ್ಳಲಿದೆ ಎಂದು ಏರ್ ಮಾರ್ಷಲ್ ಆರ್ ಕೆ ಸಿಂಗ್ ಬದೌರಿಯಾ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಭಾನುವಾರ ನಗರದಲ್ಲಿದ್ದ ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ಏರ್ ಫೋರ್ಸ್ ಟೆಕ್ನಿಕಲ್ ಕಾಲೇಜಿನಲ್ಲಿ (ಎಎಫ್ಟಿಸಿ) ಮಾಧ್ಯಮವನ್ನು ಭೇಟಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ ಕೆ ಸಿಂಗ್ ಬದೌರಿಯಾ, ಪ್ರಸ್ತುತ ಡಿಇಒವನ್ನು ಮರುರಚನೆ ಮಾಡಲಾಗಿದ್ದು, ಮುಂದಿನ ವರ್ಷ ಫೆಬ್ರವರಿಯಲ್ಲಿ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ ಪ್ರದರ್ಶನದ ಉಸ್ತುವಾರಿಯನ್ನು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ಎಎಲ್) ನೋಡಿಕೊಳ್ಳಲಿದೆ ಎಂದರು.


ಡಿಫೆನ್ಸ್ ಎಕ್ಸಿಬಿಷನ್ ಆರ್ಗನೈಸೇಶನ್ ಈ ಹಿಂದೆ ಈವೆಂಟ್ ಆಯೋಜಿಸಿತ್ತು. ಆದಾಗ್ಯೂ, ಈ ಸಮಯದಲ್ಲಿ, ಕೆಲಸವನ್ನು ತೆಗೆದುಕೊಳ್ಳಲು HAL ಅನ್ನು ಕೇಳಲಾಯಿತು. ಏರೋ ಇಂಡಿಯಾ 2019 ಫೆಬ್ರವರಿ 20-24 ರ ನಡುವೆ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದೆ.