ನವದೆಹಲಿ: ಯುನೆಸ್ಕೋದ ವಿಶ್ವ ಪರಂಪರೆ ತಾಣದ ಪಟ್ಟಿಯಲ್ಲಿರುವ ಹಂಪಿ ಈಗ ಅಮೇರಿಕಾ ಮೂಲದ ನೂಯಾರ್ಕ್ ಟೈಮ್ಸ್ ಪತ್ರಿಕೆ ಪಟ್ಟಿ ಮಾಡಿರುವ 52 ಜಾಗತಿಕ ಸ್ಥಳಗಳಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ.


COMMERCIAL BREAK
SCROLL TO CONTINUE READING

ವಿಶೇಷವೆಂದರೆ ಭಾರತದ ಒಂದೇ ಒಂದು ತಾಣವು ಮಾತ್ರ ಈ ವರ್ಷದ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದೆ.16 ನೇ ಶತಮಾನದಲ್ಲಿ ಅವನತಿ ಹೊಂದಿದ ವಿಜಯನಗರ ಸಾಮ್ರಾಜ್ಯವಾಗಿದ್ದ ಇಂದಿನ ಹಂಪಿ ತನ್ನ ಶಿಲ್ಪಕಲೆಯ ಮೂಲಕ ಜಾಗತಿಕವಾಗಿ ಗಮನ ಸೆಳೆದಿದೆ. 


ಮೊದಲ ಸ್ಥಾನವನ್ನು ಕೆರೆಬಿಯನ್ ದ್ವೀಪವಾದ ಪೂಯಿರ್ಟೋ ರಿಕೊ ಮೊದಲ ಸ್ಥಾನ ಪಡೆದಿದೆ. ಹಂಪಿ ಬಗ್ಗೆ ವಿವರಣೆ ನೀಡುತ್ತಾ " ಪ್ರವಾಸಿಗರು ಕಮಲಾಪುರದ ಪ್ಯಾಲೇಸ್  ಅಥವಾ ಕಿಷ್ಕಿಂದಾ ಕ್ಯಾಂಪ್ ನಲ್ಲಿನ ಟೆಂಟ್ ನಲ್ಲಿ ಉಳಿದುಕೊಳ್ಳಬಹುದು ಎಂದು ನೂಯಾರ್ಕ್ ಟೈಮ್ಸ್ ಪತ್ರಿಕೆ ತಿಳಿಸಿದೆ. ಸುಮಾರು 26 ಕಿಮಿ ವರೆಗೆ ತುಂಗಭದ್ರಾ ನದಿ ತೀರದಲ್ಲಿ ಹರಡಿರುವ ಹಂಪಿಗೆ  ಹೈದರಾಬಾದ್ ಅಥವಾ ಬಳ್ಳಾರಿ ವಿಮಾನ ನಿಲ್ದಾಣದ ಮೂಲಕ ಇಲ್ಲಿಗೆ ತಲುಪಬಹುದು. 


ಹಂಪಿಗೆ 2016-17 ರ ಅವಧಿಯಲ್ಲಿ 5.35 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ.ಅದರಲ್ಲಿ 38 ಸಾವಿರ ಪ್ರವಾಸಿಗರು ವಿದೇಶಿಗರಾಗಿದ್ದಾರೆ ಎಂದು ತಿಳಿದುಬಂದಿದೆ.