ನವದೆಹಲಿ:ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಈಗ ಹನುಮಾನ್ ದಲಿತ ಬುಡಕಟ್ಟು ಸಮುದಾಯಕ್ಕೆ ಸೇರಿದವನು ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ. 


COMMERCIAL BREAK
SCROLL TO CONTINUE READING

ರಾಜಸ್ತಾನದ ಮಲ್ಪುರಾದಲ್ಲಿ ಬಿಜೆಪಿ ಪಕ್ಷದ ಚುನಾವಣಾ ರ್ಯಾಲಿಯೊಂದರಲ್ಲಿ ಭಾಗವಹಿಸಿ ಮಾತನಾಡಿದ ಯೋಗಿ ಆದಿತ್ಯನಾಥ್ "ಹನುಮಾನ ಒಬ್ಬ ಬುಡುಕಟ್ಟು ಸಮುದಾಯಕ್ಕೆ ಸೇರಿದವನು ಕಾಡಿನಲ್ಲಿ ಅಲೆದಾಡುತ್ತಾ ಇದ್ದ ಶೋಷಿತ ಸಮುದಾಯಕ್ಕೆ ಸೇರಿದವನು.ಆದ್ರೆ ಅದೇ ಭಜರಂಗಬಲಿ ಉತ್ತರದಿಂದ ದಕ್ಷಿಣಕ್ಕೆ ಪೂರ್ವದಿಂದ ಪಶ್ಚಿಮಕ್ಕೆ ಇರುವ ಎಲ್ಲ ಭಾರತೀಯ ಸಮುದಾಯಗಳನ್ನು ಕೂಡಿಸಲು ಕೆಲಸ ಮಾಡಿದನು.ಇದೆಲ್ಲವನ್ನು ಅವನು ರಾಮನ ಆಶಯದಂತೆ ಅವನು ನೆರವೆರಿಸಿದನು ಅದ್ದರಿಂದ ನಾವು ಕೂಡ ಆಂಜನೇಯನ ರೀತಿ ನಮ್ಮ ಗುರಿ ಮುಟ್ಟುವವರೆಗೆ ನಿಲ್ಲದೆ  ಸಾಗುತ್ತಲೇ ಇರಬೇಕು" ಎಂದು ಆದಿತ್ಯನಾಥ ಹೇಳಿದ್ದಾರೆ.


ಇನ್ನು ಮುಂದುವರೆದು ಎಲ್ಲ ರಾಮನ ಭಕ್ತರು ಬಿಜೆಪಿಗೆ ಮತವನ್ನು ಹಾಕಬೇಕು,ಯಾರು ರಾವಣನನ್ನು ಆರಾಧಿಸುತ್ತಾರೋ ಅವರೆಲ್ಲರೂ ಕೂಡ ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ಹಾಕುತ್ತಾರೆ ಎಂದು ಅವರು ತಿಳಿಸಿದರು.ಈಗ ರಾಜಸ್ಥಾನದ ಚುನಾವಣೆಯಲ್ಲಿ ಹನುಮನ ಜಾತಿಯನ್ನು ಪ್ರಸ್ತಾಪಿಸುವ ಮೂಲಕ ದಲಿತರ ಮತ್ತು ಬುಡಕಟ್ಟು ಸಮುದಾಯಗಳ ಮತವನ್ನು ಬಿಜೆಪಿಯತ್ತ ಸೆಳೆಯುವ ಪ್ರಯತ್ನವನ್ನು ಯೋಗಿ ಆದಿತ್ಯನಾಥ ಮಾಡಿದ್ದಾರೆ.