ಅಪ್ಪ... ಈ ಒಂದು ಜೀವ ನೂರಾನೆಯ ಬಲ ನೀಡುತ್ತದೆ. ಸದಾ ಗದರುವ, ಶಿಸ್ತಿನ ಸಿಪಾಯಿಯಂತೆ ವರ್ತಿಸುವ ಅಪ್ಪ ಅಂದರೆ ಅದೊಂದು ಜೀವ ಮಾತ್ರವಲ್ಲ ಭಾವನೆ. ಅಪ್ಪ ಅಂದರೆ ಆಸರೆ, ಅಪ್ಪ ಅಂದರೆ ಪ್ರೀತಿ, ಅಪ್ಪ ಅಂದರೆ ಗಾಂಭೀರ್ಯ. ಅಪ್ಪ ಅನ್ನೋದೆ ಒಂದು ಪ್ರಪಂಚ. ಹುಟ್ಟಿದ ಮರುಕ್ಷಣದಿಂದಲೇ ಮಗುವಿನ ಜವಾಬ್ದಾರಿ ಹೊರುವ ತಂದೆ, ಅವರು ಜೀವನದಲ್ಲಿ ಒಳ್ಳೆಯ ಕೆಲಸ ಹಿಡಿದು ತಮ್ಮ ಕಾಲ ಮೇಲೆ ನಿಲ್ಲುವವರೆಗೂ ಅವರ ಬೆನ್ನೆಲುಬಾಗಿರುತ್ತಾನೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅಗ್ನಿವೀರರಿಗೆ ಸರ್ಕಾರಿ ಈ ಉದ್ಯೋಗಗಳಲ್ಲಿ ಶೇ.10 ರಷ್ಟು ಮೀಸಲಾತಿ'


ಪುಟ್ಟ ಪುಟ್ಟ ಕೈ, ಕಾಲು.. ಆ ಪಿಳಿ ಪಿಳಿ ಕಣ್ಣಲ್ಲಿ ತನ್ನ ನೋವನ್ನು ಮರೆಯುತ್ತ, ಮಕ್ಕಳಿಗಾಗಿಯೇ ಬದುಕನ್ನು ಮುಡಿಪಾಗಿಡುವ ತಂದೆ. ಕೈ ಬೆರಳು ಹಿಡಿದು ನಡೆಯುವುದನ್ನು ಕಲಿಸಿ, ಸೈಕಲ್‌ ತುಳಿಯುವಾಗ ಹಿಂದೆ ಸೀಟು ಹಿಡಿದುಕೊಂಡು ಬರುವ ಅಪ್ಪ, ಬೈಕ್‌ ಹೊಡೆಯಲು ಕಲಿಸಿ, ಓದು ಕಲಿಸಿ ಮಕ್ಕಳನ್ನು ವಿದ್ಯಾವಂತನನ್ನಾಗಿ ಮಾಡುತ್ತಾನೆ. ಅಮ್ಮನೊಟ್ಟಿಗೆ ಇರುವ ಆ ಸಲುಗೆ ಎಂದೆಂದಿಗೂ ಅಪ್ಪನ ಜೊತೆ ಬರಲು ಸಾಧ್ಯವಿಲ್ಲ. ಆದರೆ ಅಪ್ಪ ಅಂದ್ರೆ ಅದು ನೂರಾನೆಯ ಬಲ. ಅಪ್ಪನ ಮೇಲಿರುವ ಆ ಪ್ರೀತಿ ಎಂದೆಂದಿಗೂ ಕಡಿಮೆ ಆಗುವುದಿಲ್ಲ. ಎಲ್ಲಾ ಕಷ್ಟಗಳನ್ನ ತನ್ನ ಮಡಿಲಿಗೆ ಹಾಕಿಕೊಂಡು ತನ್ನವರಿಗಾಗಿ, ಮನೆಗಾಗಿ, ಮಕ್ಕಳಿಗಾಗಿ ಶ್ರಮಿಸುವ ಏಕೈಕ ಜೀವ ಅಪ್ಪ. 


ಅಪ್ಪನ ನಿಷ್ಕಲ್ಮಷ ಪ್ರೀತಿಗೆ ಯಾವುದೇ ರಿಪ್ಲೇಸ್‌ಮೆಂಟ್‌ ಇಲ್ಲ. ಅಪ್ಪ ಅಂದರೆ ಹಾಗೆ. ಮಕ್ಕಳ ನೆರಳಾಗಿ, ಕಷ್ಟಗಳಿಗೆ ಪರಿಹಾರವಾಗಿ, ಬಿದ್ದಾಗಿ ಮೇಲೆತ್ತುವ ಕೈ ಯಾಗಿ, ಜೀವನದಲ್ಲಿ ಕುಗ್ಗಿದಾಗಿ ಬಲ ನುಡಿ ಮುನ್ನಡೆಸುವ ಗುರುವಾಗಿ, ಸಂತೋಷವನ್ನು ಮಾತ್ರ ಮಕ್ಕಳ ಪಾಲಿಗೆ ಕೊಡುವ ರಿಯಲ್‌ ಹೀರೋ. ಒಳ್ಳೆ ಕೆಲಸಗಳಲ್ಲಿ ಕೈ ಜೋಡಿಸುವ, ಕೆಟ್ಟ ಕೆಲಸಗಳನ್ನು ಮಾಡಿದಾಗ ಬೈದು, ತಿದ್ದಿ, ತಿಳಿ ಹೇಳುವ ಗುರು ಅಪ್ಪ. ಹೀಗಾಗಿ ಜಗತ್ತಿನಲ್ಲಿ ಅಪ್ಪನಿಗೆ ಮಹತ್ವದ ಸ್ಥಾನವಿದೆ. ಪ್ರೀತಿ ಮತ್ತು ಕಾಳಜಿಯುಳ್ಳ ಅಪ್ಪನ ಮಹತ್ವವನ್ನು ನೆನೆಯಲು ಗೌರವಿಸಲು ಜೂನ್ ಮೂರನೇ ಭಾನುವಾರದಂದು ವಿಶ್ವ ತಂದೆಯಂದಿರ ದಿನವನ್ನು ಆಚರಿಸಲಾಗುತ್ತದೆ. 


ಕಷ್ಟಗಳನ್ನು ತನ್ನ ಪಾಲಿಗಿಟ್ಟುಕೊಂಡು ಸಂತೋಷ ಮಾತ್ರ ಹಂಚುವ ಕಣ್ಣಿಗೆ ಕಾಣುವ ದೇವರು ತಂದೆ. ರಾತ್ರಿ ಹಗಲೆನ್ನದೆ ಕುಟುಂಬಕ್ಕಾಗಿ ದುಡಿಯುವ ಅಪ್ಪ ತನಗಾಗಿ ಏನಿಲ್ಲದಿದ್ದರೂ ಮಕ್ಕಳಿಗಾಗಿ ಎಲ್ಲವನ್ನೂ ಮಾಡುತ್ತಾನೆ. ಅದರಲ್ಲೂ ಹೆಣ್ಣುಮಕ್ಕಳಿಗಂತೂ ಅಪ್ಪ ಎಂದರೆ ಜೀವ. ಅವಳ ಪಾಲಿನ ಮೊದಲ ಹೀರೋ ಆತ. ಮಗಳನ್ನು ಕಣ್ಣ ರೆಪ್ಪೆಯಲ್ಲಿಟ್ಟು ಕಾಪಾಡಿ, ಪೋಷಿಸುವ ಅಪ್ಪ ಮಗಳಿಗಾಗಿ ಜೀವನವನ್ನೇ ಮುಡಿಪಾಗಿಡುತ್ತಾನೆ. ಏನು ಅರಿಯದ ವಯಸ್ಸಿನಲ್ಲಿ ಅಪ್ಪನನ್ನು ತುಂಬಾ ಪ್ರೀತಿಸ್ತೀವಿ. ಎಲ್ಲಾ ಅರಿತ ವಯಸ್ಸಿನಲ್ಲಿ ಅವರ ಮೇಲೆ ಕೋಪ ಮಾಡಿಕೊಳ್ತೀವಿ. ಆದರೆ ಅಪ್ಪ ಹಾಗೆ ಮಾಡಲ್ಲ. ತನ್ನ ಮಗಳನ್ನು ಅವಳು ದೊಡ್ಡವಳಾಗಿ, ಅವಳಿಗೆ ಮಗುವಾಗಿ, ವಯಸ್ಸಾದರೂ ಮಗುವಿನ ರೀತಿಯಲ್ಲಿಯೇ ಪ್ರೀತಿಸುತ್ತಾರೆ. 


ಅಂತಹ ತ್ಯಾಗಮಯಿ, ಕರುಣಾಮಯಿ, ಕುಟುಂಬಕ್ಕಾಗಿ ಎಲ್ಲವನ್ನೂ ತ್ಯಜಿಸುವ ಕರ್ಣನಂತಹ ತಂದೆಗೆ ಈ ದಿನವನ್ನು ಮುಡುಪಾಗಿಡಲಾಗಿದೆ. ಹರೆಯದ ವಯಸ್ಸಿನಲ್ಲಿ ಮಕ್ಕಳಿಗೆ ಅಪ್ಪ ಹಿಟ್ಲರ್‌ನಂತೆ ಕಾಣುವುದು ಸಹಜ. ತನ್ನ ಮಕ್ಕಳು ಎಲ್ಲಾದರೂ ದಾರಿ ತಪ್ಪಿಯಾರು ಎಂದು ತಂದೆ ಅವರಿಗೆ ಕಟ್ಟುಪಾಡುಗಳನ್ನು ವಿಧಿಸುತ್ತಾನೆ. ಮಗನಿಗೆ ತಂದೆ ಆದರ್ಶ. ಮಗಳಿಗೆ ತಂದೆಯೇ ಸರ್ವಸ್ವ. ಮಗ ತನ್ನ ತಂದೆಯಂತೇ ತಾನಾಗಲು ಬಯಸಿದರೆ, ಮಗಳು ತಾನು ವರಿಸುವ ವರನಲ್ಲಿ ತಂದೆಯನ್ನು ಕಾಣುತ್ತಾಳೆ. ಪ್ರತಿಯೊಬ್ಬರ ಜೀವನದಲ್ಲಿ ತಂದೆ ಪಾತ್ರ ಅತ್ಯಂತ ಮಹತ್ವದ್ದು. 


ವಿಶ್ವ ಅಪ್ಪಂದಿರ ದಿನದ ಮಹತ್ವ:


ಈ ದಿನವನ್ನು ಆಚರಿಸುವ ಹಿಂದೆ ಒಂದು ಇತಿಹಾಸವಿದೆ. ಯುನೈಟೆಡ್​ ಸ್ಟೇಟ್​ನಲ್ಲಿ ಭೀಕರವಾದ ಅಪಘಾತ ನಡೆಯಿತು. 1908 ಜುಲೈ 5ರಂದು ಪಶ್ಚಿಮ ವರ್ಜೀನಿಯಾದಲ್ಲಿ ನಡೆದ ಅಪಘಾತದಲ್ಲಿ ನೂರಾರು ಪುರುಷರು ಮೃತಪಟ್ಟರು. ಅಮೆರಿಕದ ಅಂತರ್ಯುದ್ಧದ ಅನುಭವಿ ವಿಲಿಯಂ ಜಾಕ್ಸನ್ ಸ್ಮಾರ್ಟ್ ಅವರ ಪುತ್ರಿ ಸೊನೊರಾ ಸ್ಮಾರ್ಟ್ ಡಾಡ್ ಅಪಘಾತದಲ್ಲಿ ಮರಣಹೊಂದಿದವರ ನೆನಪಿಗಾಗಿ ಭಾನುವಾರ ಗೌರವ ಸೂಚಿಸಿದರು. ಆ ಬಳಿಕ ತಂದೆಯ ದಿನದ ಪರಿಕಲ್ಪನೆಯನ್ನು ಸ್ಥಾಪಿಸುವ ಕುರಿತು ಯೋಜಿಸಿದರು. ಸೋನೊರಾಳ ತಾಯಿ ತನ್ನ ಆರನೇ ಮಗುವಿಗೆ ಜನ್ಮ ನೀಡುವಾಗ 16 ನೇ ವಯಸ್ಸಿನಲ್ಲಿ ನಿಧನರಾದರು. ತನ್ನ ತಂದೆಯೊಂದಿಗೆ, ಸೋನೋರಾ ತನ್ನ ಕಿರಿಯ ಸಹೋದರರನ್ನು ಬೆಳೆಸಿದಳು. ತನ್ನ ಅಪ್ಪನ ಮೇಲಿನ ಗೌರವದಿಂದ, ಅವಳು ಸ್ಪೋಕೇನ್ ಮಂತ್ರಿ ಮೈತ್ರಿಕೂಟವನ್ನು ಸಂಪರ್ಕಿಸಿ, ತನ್ನ ತಂದೆಯ ಜನ್ಮದಿನವಾದ ಜೂನ್ 5 ನ್ನು ತಂದೆಯ ದಿನವೆಂದು ಗುರುತಿಸಲು ಮನವಿ ಮಾಡಿದಳು. 


ಇದನ್ನೂ ಓದಿ: ಯುವ ನಟ ಸತೀಶ್ ವಜ್ರ ಕೊಲೆ ಪ್ರಕರಣ: ಬಾಮೈದ ಸೇರಿ ಇಬ್ಬರ ಬಂಧನ


ಆಗ ಮಂತ್ರಿ ಮೈತ್ರಿಕೂಟ ತಿಂಗಳ ಮೂರನೇ ಭಾನುವಾರದಂದು ಅಪ್ಪಂದಿರ ದಿನವನ್ನು ಆಚರಿಸಲು ನಿರ್ಧರಿಸಿದರು. ನಂತರ ಕೆಲವೇ ವರ್ಷಗಳಲ್ಲಿ ತಂದೆಯ ದಿನವು ಜನಪ್ರಿಯವಾಯಿತು. ಅಧ್ಯಕ್ಷ ಲಿಂಡನ್ ಬಿ. ಜಾನ್ಸನ್ 1966 ರಲ್ಲಿ ಅಧ್ಯಕ್ಷೀಯ ಘೋಷಣೆಗೆ ಸಹಿ ಹಾಕಿ, ಜೂನ್ ಮೂರನೇ ಭಾನುವಾರವನ್ನು ತಂದೆಯ ದಿನವೆಂದು ಆಚರಣೆಗೆ ಅಧಿಕೃತವಾಗಿ ಘೋಷಿಸಿದರು. ಅಂದಿನಿಂದ ಪ್ರತಿ ವರ್ಷ ಜೂನ್‌ ಮೂರನೇ ಭಾನುವಾರವನ್ನು ತಂದೆಯಂದಿರ ದಿನವನ್ನಾಗಿ ಆಚರಿಸಲಾಗುತ್ತಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.