ನವದೆಹಲಿ:ಕೇಂದ್ರ ಸರ್ಕಾರದ  ಜನಪ್ರಿಯ ಯೋಜನೆಗಳಲ್ಲಿ ಒಂದಾದ ಅಟಲ್ ಪಿಂಚಣಿ ಯೋಜನೆಯಲ್ಲಿ ಮುಂದಿನ ದಿನಗಳಲ್ಲಿ ಕೆಲ ಬದಲಾವಣೆಗಳನ್ನು ಕಾಣಬಹುದಾಗಿದೆ. ಪಿಂಚಣಿ ನಿಧಿ ನಿಯಂತ್ರಕ (ಪಿಎಫ್‌ಆರ್‌ಡಿಎ) ಅಟಲ್ ಪಿಂಚಣಿ ಯೋಜನೆ (ಎಪಿವೈ) ಯಲ್ಲಿ ವಯಸ್ಸಿನ ಮಿತಿಯನ್ನು ಹೆಚ್ಚಿಸಲು ಸೂಚಿಸಿದೆ. ಅಷ್ಟೇ ಅಲ್ಲ ಈ ಯೋಜನೆಯಡಿ ಪ್ರಸ್ತುತ ಇರುವ 40 ವರ್ಷ ಹೂಡಿಕೆಯ ಮಿತಿಯನ್ನು 60 ವರ್ಷಗಳಿಗೆ ಹೆಚ್ಚಿಸಲು ಶಿಫಾರಸ್ಸು ಮಾಡಿದೆ. ಈ ಸರ್ಕಾರಿ ಯೋಜನೆಯಡಿಯಲ್ಲಿ, ಅಸಂಘಟಿತ ವಲಯದ ಉದ್ಯೋಗಿಗಳು ಅಥವಾ ಯಾವುದೇ ಉದ್ಯೋಗಿ ಅಥವಾ ಸ್ವಂತ ಉದ್ಯೋಗ ನಡೆಸುತ್ತಿರುವ ವ್ಯಕ್ತಿ  ಹೂಡಿಕೆ ಮಾಡಬಹುದಾಗಿದೆ. ನೀವು 18 ರಿಂದ 40 ವರ್ಷ ವಯಸ್ಸಿನವರೆಗೆ ಹೂಡಿಕೆ ಮಾಡಬಹುದು.


COMMERCIAL BREAK
SCROLL TO CONTINUE READING

ಪಿಎಫ್‌ಆರ್‌ಡಿಎ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಮತ್ತು ಅಟಲ್ ಪಿಂಚಣಿ ಯೋಜನೆಯನ್ನು ನಿಯಂತ್ರಿಸುತ್ತದೆ. ಪ್ರಾಧಿಕಾರ ಪ್ರಸ್ತುತ ತಿಂಗಳಿಗೆ ಇರುವ 5000 ರೂ.ಗಳ ಪಿಂಚಣಿ ಮಿತಿಯನ್ನು 10,000 ರೂ.ಗೆ ಏರಿಕೆ ಮಾಡಲು ಶಿಫಾರಸ್ಸು ಮಾಡಿದೆ. ಅಟಲ್ ಪಿಂಚಣಿ ಯೋಜನೆಯಡಿ ಕನಿಷ್ಠ ಪಿಂಚಣಿಯನ್ನು  ಕ್ರಮವಾಗಿ 1000 ರೂ., 2000, 3000, 4000 ಮತ್ತು 5000 ರೂ. ಖಾತರಿಪಡಿಸಲಾಗಿದ್ದು, ಇದು 60 ವರ್ಷದ ನಂತರ ಪಿಂಚಣಿದಾರರು ಇದನ್ನು ಪಡೆಯಬಹುದು. ಆದರೆ, ಇದು ನೌಕರರು ತಮ್ಮ ವತಿಯಿಂದ ನೀಡಲಾದ ಪಿಂಚಣಿ ಕೊಡುಗೆಯನ್ನು ಆಧರಿಸಿ ನಿಗದಿಯಾಗುತ್ತದೆ.


ಯೋಜನೆಗೆ ಸಂಬಂಧ ಹೊಂದಿದ  ವ್ಯಕ್ತಿಯು 60 ವರ್ಷಗಳ ಮೊದಲೇ ಮೃತಪಟ್ಟರೆ, ನಂತರ ಅವರ ಪತ್ನಿ ಈ ಯೋಜನೆಯಲ್ಲಿ ಹಣವನ್ನು ಠೇವಣಿ ಇಡುವುದರಿಂದ ಯೋಜನೆಯಲ್ಲಿ ಮುಂದುವರೆಯಬಹುದಾಗಿದ್ದು,60 ವರ್ಷಗಳ ನಂತರ ಪ್ರತಿ ತಿಂಗಳು ಪಿಂಚಣಿ ಸಹ ಪಡೆಯಬಹುದು. ಗಂಡನ ಮರಣದ ನಂತರ ವ್ಯಕ್ತಿಯ ಪತ್ನಿ ತನ್ನ ಪತಿಯ ದೊಡ್ಡ ಮೊತ್ತವನ್ನು ಪಡೆಯಬಹುದು. ಒಂದು ವೇಳೆ ಪತ್ನಿ ಸಹ ಮೃತಪಟ್ಟರೆ, ಆಕೆಯ ನಾಮಿನಿಗೆ ಈ ದೊಡ್ಡ ಮೊತ್ತವನ್ನು ಪಾವತಿಸಲಾಗುತ್ತದೆ.


ಆದಾಯ ತೆರಿಗೆಯ ಸೆಕ್ಷನ್ 80 ಸಿಸಿಡಿ (1 ಬಿ) ಅಡಿಯಲ್ಲಿ ಶ್ರೇಣಿ -1 ಎನ್‌ಪಿಎಸ್ ಖಾತೆಯಲ್ಲಿನ ತೆರಿಗೆ ವಿನಾಯಿತಿ ಮಿತಿಯನ್ನು 1 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂದು ಪಿಂಚಣಿ ನಿಯಂತ್ರಕ ಪ್ರಾಧಿಕಾರ ಸರ್ಕಾರಕ್ಕೆ ತಿಳಿಸಿದೆ ಎಂದು ಲೈವ್‌ಮಿಂಟ್ ವರದಿ ಮಾಡಿದೆ. ಎಲ್ಲಾ ವರ್ಗದ ಚಂದಾದಾರರ ಎನ್‌ಪಿಎಸ್ ಅಡಿಯಲ್ಲಿ, ಶೇಕಡಾ 14 ರಷ್ಟು ತೆರಿಗೆ ಮುಕ್ತ ಕೊಡುಗೆಯನ್ನು ಕೇಂದ್ರ ಸರ್ಕಾರಿ ನೌಕರರು ಪರಿಗಣಿಸಬೇಕು ಎಂದು ಪ್ರಾಧಿಕಾರ ಹೇಳಿದೆ. 2015 ರಲ್ಲಿ ಕೇಂದ್ರ ಸರ್ಕಾರ ಅಟಲ್ ಪಿಂಚಣಿ ಯೋಜನೆಯನ್ನು ಪ್ರಾರಂಭಿಸಿದೆ. ಇದುವರೆಗೆ ಈ ಯೋಜನೆಯಲ್ಲಿನ  ಚಂದಾದಾರರ ಸಂಖ್ಯೆ ಸಂಖ್ಯೆ 2 ಕೋಟಿ ಮೀರಿದೆ.