ಜಾಮ್ನಗರ್:  ಶುಕ್ರವಾರ ನಡೆದ ಚುನಾವಣಾ ರ್ಯಾಲಿಯಲ್ಲಿ ಬಹಿರಂಗವಾಗಿ ಕಪಾಳಮೋಕ್ಷವಾದ ನಂತರ ಈಗ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ತಮ್ಮ ಜೀವಕ್ಕೆ ಬೆದರಿಕೆ ಇದೆ. ಆದ್ದರಿಂದ ಪೊಲೀಸರು ಸೂಕ್ತ ರಕ್ಷಣೆ ಒದಗಿಸಬೇಕೆಂದು ಕೇಳಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಜಾಮ್ ನಗರದ ಎಸ್ಪಿಗೆ ಬರೆದಿರುವ ಪತ್ರದಲ್ಲಿ ಹಾರ್ದಿಕ್ ಪಟೇಲ್ ರ್ಯಾಲಿ ಸಂದರ್ಭದಲ್ಲಿ ಸಮಾಜಘಾತುಕ ಶಕ್ತಿಗಳು ತಮ್ಮ ಮೇಲೆ ದಾಳಿ ಮಾಡಬಹುದು ಆದ್ದರಿಂದ ರಕ್ಷಣೆ ನೀಡಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.


"ನಾನು ಏಪ್ರಿಲ್ 21 ರಂದು ಬೆಳಿಗ್ಗೆ 9 ಗಂಟೆಗೆ ಜಾಮ್ನಗರ್ ದ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಪ್ರದರ್ಶನವನ್ನು ನಡೆಸಲಿದ್ದೇನೆ. ನನ್ನ ವೈಯಕ್ತಿಕ ಮೂಲಗಳ ಮಾಹಿತಿ ಪ್ರಕಾರ ಸಮಾಜಘಾತುಕ ಶಕ್ತಿಗಳು ನನ್ನ ಕಾರಿನ ಮೇಲೆ ದಾಳಿ ನಡೆಸಬಹುದು. ಆದ್ದರಿಂದ, ಜಾಮ್ನಗರ್ ಜಿಲ್ಲೆಯ ನನ್ನ ಉಪಸ್ಥಿತಿಯಲ್ಲಿ ನನಗೆ ಸಾಕಷ್ಟು ಪೊಲೀಸ್ ಭದ್ರತೆಯನ್ನು ನೀಡಬೇಕೆಂದು ಮನವಿ ಮಾಡುತ್ತೇನೆ 'ಎಂದು ಪತ್ರದ ಮೂಲಕ ವಿನಂತಿಸಿಕೊಂಡಿರೆ.


ಸುರೇಂದ್ರನಗರ್ ದಲ್ಲಿ ನಡೆದ ಜನ ಆಕ್ರೋಶ ಸಭೆಯಲ್ಲಿ ವ್ಯಕ್ತಿಯೊಬ್ಬನು ಹಾರ್ದಿಕ್ ಪಟೇಲ್ ಅವರಿಗೆ ಕಪಾಳ ಮೋಕ್ಷ ಮಾಡಿದ್ದನು. ಈ ಹಿನ್ನಲೆಯಲ್ಲಿ ಈಗ ಮುಂಜಾಗೃತವಾಗಿ ಅವರು ಪೋಲಿಸ್ ರಕ್ಷಣೆ ಕೋರಿ ಪತ್ರ ಬರೆದಿದ್ದಾರೆ.