ನವದೆಹಲಿ: ಎಲ್ಲಾ ಸಮೀಕ್ಷೆಗಳ ಲೆಕ್ಕಾಚಾರವನ್ನು ತಲೆ ಕೆಳಗಾಗಿಸಿದ ಹರ್ಯಾಣ ವಿಧಾನಸಭಾ ಫಲಿತಾಂಶ ಈಗ ಅತಂತ್ರ ಸ್ಥಿತಿ ತಲುಪಿದೆ.


COMMERCIAL BREAK
SCROLL TO CONTINUE READING

ಇನ್ನೊಂದೆಡೆಗೆ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ 2019 ರಲ್ಲಿ ಜನ ನಾಯಕ್ ಜನತಾ ಪಕ್ಷದ (ಜೆಜೆಪಿ) ದುಶ್ಯಂತ್ ಚೌತಲಾ ಅವರು ನಿರ್ಣಾಯಕ ಪಾತ್ರವಹಿಸಲಿದ್ದಾರೆ. ಹರಿಯಾಣದಲ್ಲಿ ಆಡಳಿತಾರೂಢ ಬಿಜೆಪಿಗೆ ಸರಳ ಬಹುಮತದ ಕೊರತೆಯಿದ್ದರೆ ಆಗ ಅವರು ಕಿಂಗ್ ಮೇಕರ್ ಎಂದು ಸಾಬೀತುಪಡಿಸಬಹುದು.


ಪ್ರಾರಂಭಿಕ ಟ್ರೆಂಡ್ ನಲ್ಲಿ ಆಡಳಿತರೂಡ ಬಿಜೆಪಿ ಬಹುಮತ ಪಡೆಯುವ ಅನುಮಾನ ಹೊಂದಿದೆ. ಹರ್ಯಾಣದಲ್ಲಿ ಸರ್ಕಾರ ರಚಿಸಲು 46 ಸ್ಥಾನಗಳನ್ನು ಪಡೆಯಬೇಕಾಗುತ್ತದೆ. ಆಡಳಿತಾರೂಡ ಬಿಜೆಪಿ 90 ಸದಸ್ಯರ ಹರಿಯಾಣ ವಿಧಾನಸಭೆಯಲ್ಲಿ ಬಹುಮತದ ಕೊರತೆಯನ್ನು ಕಾಣುತ್ತಿದೆ. ಹರಿಯಾಣದಲ್ಲಿ ಸರ್ಕಾರ ರಚಿಸಲು ಒಂದು ಪಕ್ಷಕ್ಕೆ 46 ಸ್ಥಾನಗಳು ಬೇಕಾಗುತ್ತವೆ. ಪ್ರಸ್ತುತ ಬಿಜೆಪಿ 38 ಸ್ಥಾನಗಳಲ್ಲಿ, ಕಾಂಗ್ರೆಸ್ 32 ಸ್ಥಾನಗಳಲ್ಲಿ ಮತ್ತು ಜೆಜೆಪಿ 10 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ.


ದುಶ್ಯಂತ್ ಚೌತಲಾ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಐಎನ್‌ಎಲ್‌ಡಿಯಿಂದ ಹೊರಹಾಕಿದ ನಂತರ ಇದನ್ನು ರಚಿಸಲಾಯಿತು. 2018 ರಲ್ಲಿ ದುಶ್ಯಂತ್ ಚೌತಲಾ ಅವರ ತಂದೆ ಅಜಯ್ ಚೌತಲಾ ಅವರ ಮಾರ್ಗದರ್ಶನದಲ್ಲಿ ಜೆಜೆಪಿಯನ್ನು ರಚಿಸಿದರು, ಅವರು ಭ್ರಷ್ಟಾಚಾರ ಪ್ರಕರಣದಲ್ಲಿ 10 ವರ್ಷಗಳ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.


ವರದಿಗಳ ಪ್ರಕಾರ, ದುಶ್ಯಂತ್ ಅವರು ತಮ್ಮ ಪಕ್ಷವು ಮುಖ್ಯಮಂತ್ರಿಯ ಕುರ್ಚಿಯನ್ನು ನೀಡುವವರೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಆದರೆ ಈಗ ಜೆಜೆಪಿ ಬಿಜೆಪಿ ಅಥವಾ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.


ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ದುಶ್ಯಂತ್ 'ನಾನು ಯಾರೊಂದಿಗೂ ಯಾವುದೇ ಚರ್ಚೆ ನಡೆಸಿಲ್ಲ. ಅಂತಿಮ ಸಂಖ್ಯೆಗಳು ಮುಗಿದ ನಂತರವೇ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಮೂಲಗಳ ಪ್ರಕಾರ, ಚೌತಲಾ ಅವರಿಗೆ ಮುಖ್ಯಮಂತ್ರಿ ಹುದ್ದೆಯನ್ನು ನೀಡಲು ಕಾಂಗ್ರೆಸ್ ಚಿಂತನೆ ನಡೆಸುತ್ತಿದೆ ಮತ್ತು ಭೂಪಿಂದರ್ ಸಿಂಗ್ ಹೂಡಾ ಈಗಾಗಲೇ ಜೆಜೆಪಿ ನಾಯಕನೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.


ದುಶ್ಯಂತ್ ಅವರ ಚುನಾವಣಾ ಅಭಿಯಾನವು ಹೆಚ್ಚಿನ ಉದ್ಯೋಗಾವಕಾಶಗಳ ಭರವಸೆಯೊಂದಿಗೆ ಯುವಕರನ್ನು ಹೆಚ್ಚಾಗಿ ಕೇಂದ್ರೀಕರಿಸಿದೆ ಎನ್ನಲಾಗಿದೆ.