ಚಂಡೀಗಢ: ಹರಿಯಾಣ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ಇದಕ್ಕೆ 'ಸಂಕಲ್ಪ ಪತ್ರ' ಎಂದು ಹೆಸರಿಸಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಮತ್ತು ಲಕ್ಷಾಂತರ ಯುವಕರಿಗೆ ಕೌಶಲ್ಯ ತರಬೇತಿ ನೀಡುವ ಮೂಲಕ ಉದ್ಯೋಗ ಕಲ್ಪಿಸುವುದು ಸೇರಿದಂತೆ ಅನೇಕ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.


COMMERCIAL BREAK
SCROLL TO CONTINUE READING

ಚಂಡೀಗಢದಲ್ಲಿ ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು 'ಸಂಕಲ್ಪ ಪತ್ರ'ವನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಜೆ.ಪಿ.ನಡ್ಡಾ ಅವರು ಹರಿಯಾಣ ವಿಧಾನಸಭಾ ಚುನಾವಣೆಯ 'ಸಂಕಲ್ಪ ಪತ್ರ'ವನ್ನು ಇಂದು ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕ ಅಭಿಪ್ರಾಯದ ಆಧಾರದ ಮೇಲೆ ಇದನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.


'ಮನೋಹರ್ ಜಿ ಕಳೆದ ಐದು ವರ್ಷಗಳಲ್ಲಿ ಹರಿಯಾಣದ ಚಿತ್ರಣವನ್ನು ಬಲಪಡಿಸಿದ್ದಾರೆ. ಅವರು ಹರಿಯಾಣದ ರಾಜಕೀಯ ಸಂಸ್ಕೃತಿಯನ್ನು ಬದಲಾಯಿಸಿದ್ದಾರೆ. ಇಂದು ಹರಿಯಾಣವು ಭ್ರಷ್ಟಾಚಾರ ಮುಕ್ತವಾಗಿದೆ, ಅಭಿವೃದ್ಧಿ-ಶ್ರೀಮಂತವಾಗಿದೆ ಮತ್ತು ಮನೋಹರ್ ಜಿ ಇಲ್ಲಿ ಪಾರದರ್ಶಕ ಸರ್ಕಾರವನ್ನು ನೀಡುವ ಕೆಲಸವನ್ನು ಮಾಡಿದ್ದಾರೆ' ಎಂದು ಜೆ.ಪಿ.ನಡ್ಡಾ ಹೊಗಳಿದರು.


ಹರಿಯಾಣ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಪ್ರಮುಖ ಭರವಸೆಗಳು:
- 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿ.
- ಟ್ಯೂಬ್‌ವೆಲ್ ಶಿಫ್ಟಿಂಗ್ ನೀತಿಯನ್ನು ಸಿದ್ಧಪಡಿಸುವ ಭರವಸೆ.
- ರಾಜ್ಯದಲ್ಲಿ ದೊಡ್ಡ ಡೈರಿಗಳಿಗೆ ಪ್ರಚಾರ ನೀಡಲಾಗುವುದು
- ರಾಜ್ಯದ ಎಲ್ಲಾ ಪ್ರಾಣಿಗಳನ್ನು(ಹಾಲು ನೀಡುವ ಹಸು, ಎಮ್ಮೆ) ವಿಮೆಯ ವ್ಯಾಪ್ತಿಗೆ ಒಳಪಡಿಸಲಾಗುತ್ತದೆ
- ಗುರುತಿನ ಟ್ಯಾಗ್ ನೀಡುವ ಮೂಲಕ ಎಲ್ಲಾ ಪ್ರಾಣಿಗಳ ID ಯನ್ನು ಖಚಿತಪಡಿಸಿಕೊಳ್ಳುವುದು.
- ಯುವ ಜನತೆಯ ಅಭಿವೃದ್ಧಿ ಮತ್ತು ಸ್ವ ಉದ್ಯೋಗ ಎಂಬ ಹೊಸ ಸಚಿವಾಲಯವನ್ನು ರಚಿಸಲಾಗುವುದು.
- 500 ಲಕ್ಷ ಕೋಟಿ ಖರ್ಚು ಮಾಡುವ ಮೂಲಕ 25 ಲಕ್ಷ ಯುವಕರಿಗೆ ಕೌಶಲ್ಯ ತರಬೇತಿ ನೀಡಲಾಗುವುದು.