ಕಾಂಗ್ರೆಸ್ ಪ್ರಣಾಳಿಕೆ: ಬಡವರಿಗೆ ಡಬಲ್ ಬೆಡ್‌ರೂಂ ಮನೆ, ಉಚಿತ ವಿದ್ಯುತ್ & 25 ಲಕ್ಷದವರೆಗೆ ಉಚಿತ ಚಿಕಿತ್ಸೆ!
Haryana Assembly Elections 2024: ಹರಿಯಾಣ ಚುನಾವಣೆಗೂ ಮುನ್ನ ಪ್ರಣಾಳಿಕೆ ಘೋಷಿಸಿರುವ ಕಾಂಗ್ರೆಸ್ ಪಕ್ಷವು ರಾಜ್ಯದ ಜನರಿಗೆ 7 ಭರವಸೆಗಳನ್ನು ನೀಡಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಉದಯಭಾನ್ ಮಾತನಾಡಿ, ಹರಿಯಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದರೆ 500 ರೂ.ಗೆ ಗ್ಯಾಸ್ ಸಿಲಿಂಡರ್ ಮತ್ತು 300 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು ಎಂದು ಹೇಳಿದ್ದಾರೆ.
Haryana Assembly Elections: ಹರಿಯಾಣ ವಿಧಾನಸಭೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಪಕ್ಷವು ರಾಜ್ಯದ ಜನರಿಗೆ ಭರ್ಜರಿ ಕೊಡುಗೆಗಳನ್ನು ಘೋಷಿಸಿದೆ. ʼ7 ಭರವಸೆಗಳು-ದೃಢ ಉದ್ದೇಶಗಳು' ಎಂಬ ಘೋಷಣೆಯೊಂದಿಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. 7 ಗ್ಯಾರೆಂಟಿಗಳ ಪೈಕಿ 300 ಯೂನಿಟ್ ಉಚಿತ ವಿದ್ಯುತ್, ಜಾತಿ ಗಣತಿ, ಎಂಎಸ್‌ಪಿ ಖಾತರಿ ಕಾನೂನು ಸೇರಿದಂತೆ ಹಲವು ದೊಡ್ಡ ಘೋಷಣೆಗಳು ಸೇರಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಹರಿಯಾಣದ ವೀಕ್ಷಕ, ರಾಜಸ್ಥಾನದ ಮಾಜಿ ಸಿಎಂ ಅಶೋಕ್ ಗೆಹ್ಲೋಟ್, ಅಜಯ್ ಮಾಕನ್, ಪಂಜಾಬ್ ವಿಪಕ್ಷ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಉಪಸ್ಥಿತರಿದ್ದರು. ಹರ್ಯಾಣ ಕಾಂಗ್ರೆಸ್ ರಾಜ್ಯಾಧ್ಯಕ್ಷ ಚೌಧರಿ ಉದಯಭಾನ್, ಮಾಜಿ ಸಿಎಂ ಭೂಪೇಂದ್ರ ಹೂಡಾ ಮತ್ತು ಮಾಜಿ ಶಾಸಕಿ ಗೀತಾ ಭುಕ್ಕಲ್ ಕೂಡ ವೇದಿಕೆಯಲ್ಲಿ ಕಾಣಿಸಿಕೊಂಡರು.
ಇದನ್ನೂ ಓದಿ: ರಾಹುಲ್ ಗಾಂಧಿಯವರನ್ನು ಮುಗಿಸಲು ಬಿಜೆಪಿ ಸಂಚು ನಡೆಸುತ್ತಿದೆ: ಸಿಎಂ ಸಿದ್ದರಾಮಯ್ಯ
7 ಭರವಸೆಗಳು ಮತ್ತು ದೃಢ ಉದ್ದೇಶಗಳೊಂದಿಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ
1. ಪ್ರತಿ ಕುಟುಂಬಕ್ಕೂ ಸಂತೋಷ: 300 ಯೂನಿಟ್ ಉಚಿತ ವಿದ್ಯುತ್ ಮತ್ತು 25 ಲಕ್ಷದವರೆಗೆ ಉಚಿತ ಚಿಕಿತ್ಸೆ
2. ಬಡವರಿಗೆ ಸೂರು: 100 ಗಜ ನಿವೇಶನದಲ್ಲಿ 3.5 ಲಕ್ಷ ರೂ. ವೆಚ್ಚದ ಡಬಲ್ ಬೆಡ್‌ರೂಂ ಮನೆ
3. ಮಹಿಳೆಯರಿಗೆ ಪ್ರತಿ ತಿಂಗಳು 2000 ರೂ. ಹಾಗೂ 500 ರೂ.ಗೆ ಗ್ಯಾಸ್ ಸಿಲಿಂಡರ್
4. ರೈತರಿಗೆ ಸಮೃದ್ಧಿ MSPಯ ಕಾನೂನು ಖಾತರಿ ಮತ್ತು ತಕ್ಷಣದ ಬೆಳೆ ಪರಿಹಾರ
5. ಸಾಮಾಜಿಕ ಭದ್ರತೆ ಬಲವರ್ಧನೆ: ವೃದ್ಧಾಪ್ಯ ವೇತನ 6000 ರೂ., ಅಂಗವಿಕಲರ ಪಿಂಚಣಿ 6000 ರೂ., ವಿಧವಾ ಪಿಂಚಣಿ 6000 ರೂ. ಮತ್ತು ಹಳೆಯ ಪಿಂಚಣಿ ಯೋಜನೆ (OPS) ಮರುಸ್ಥಾಪಿಸಲಾಗುವುದು.
Nipah virus: ವಿದ್ಯಾರ್ಥಿನಿ ಸಾವಿನ ನಂತರ ಕೇರಳದಲ್ಲಿ ಎಚ್ಚರಿಕೆ, ಈ ಲಕ್ಷಣಗಳು ಕಾಣಿಸಿಕೊಂಡರೆ ಎಚ್ಚರ!
ಹರ್ಯಾಣ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಚೌಧರಿ ಉದಯ್‌ಭಾನ್ ಮಾತನಾಡಿ, ಕಾಂಗ್ರೆಸ್ ಆಡಳಿತದಲ್ಲಿ ಹಲವು ವಿಷಯಗಳಲ್ಲಿ ಹರಿಯಾಣ ಮೊದಲ ಸ್ಥಾನದಲ್ಲಿತ್ತು. ಈಗ ಕಾಂಗ್ರೆಸ್ ಮತ್ತೊಮ್ಮೆ ಹರಿಯಾಣವನ್ನು ನಂಬರ್ 1 ಮಾಡುತ್ತದೆ. ನಾವು ಹರಿಯಾಣ ಜನತೆಗೆ 7 ಭರವಸೆಗಳನ್ನು ನೀಡುತ್ತಿದ್ದು, ಅವುಗಳನ್ನು ಈಡೇರಿಸುತ್ತೇವೆ. ಹರಿಯಾಣದ ಮಹಿಳೆಯರ ಸಬಲೀಕರಣಕ್ಕಾಗಿ 500 ರೂ.ಗೆ ಸಿಲಿಂಡರ್ ನೀಡಲಾಗುವುದು, ಮನೆಯ ಯಜಮಾನಿಯರಿಗೆ ಪ್ರತಿತಿಂಗಳು 2,000 ರೂ. ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಅಕ್ಟೋಬರ್ ೫ರಂದು ಹರಿಯಾಣ ವಿಧಾನಸಭೆಚುನಾವಣೆ ನಡೆಯಲಿದ್ದು, ಅಕ್ಟೋಬರ್ ೮ರಂದು ಫಲಿತಾಂಶ ಪ್ರಕಟವಾಗಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.