Reservation In Private Sector - ಈ ರಾಜ್ಯದಲ್ಲಿ ಖಾಸಗಿ ವಲಯಕ್ಕೂ ಕಾಲಿಟ್ಟಿದೆ ಮೀಸಲಾತಿ
Reservation In Private Sector - ರಾಜ್ಯದ ರಾಜ್ಯಪಾಲರಾಗಿರುವ ಸತ್ಯದೇವ್ ನಾರಾಯಣ್ ಆರ್ಯ (Governor Satyadev Narayan Arya) ಅವರು ಈ ಕುರಿತಾದ ಮಸೂದೆಗೆ ಅನುಮೋದನೆ ನೀಡಿದ ಬಗ್ಗೆ ಸ್ವತಃ ಸಿಎಂ ಮನೋಹರ್ ಲಾಲ್ ಖಟ್ಟರ್ (Manoharlal Khattar) ಮಾಹಿತಿ ನೀಡಿದ್ದಾರ. ಸರ್ಕಾರ ಈ ಕುರಿತು ಅಧಿಸೂಚನೆ ಹೊರಡಿಸಿದೆ ಮತ್ತು ಈ ಕಾನೂನು ತಿಂಗಳಿಗೆ 50 ಸಾವಿರ ರೂಪಾಯಿಗಳವರೆಗೆ ಸಂಬಳ ಇರುವ ನೌಕರಿಗಳಿಗೆ (Jobs) ಅನ್ವಯಿಸಲಿದೆ.
ಚಂಡಿಗಡ್: Reservation In Private Sector - ಖಾಸಗಿ ಉದ್ಯೋಗಗಳಲ್ಲಿ ಮೀಸಲಾತಿಗೆ ಸಂಬಂಧಿಸಿದ ಮಸೂದೆಗೆ ಹರಿಯಾಣದಲ್ಲಿ ಅನುಮೋದನೆ ನೀಡಲಾಗಿದೆ. ಇದರ ಅಡಿಯಲ್ಲಿ ಇದೀಗ ಖಾಸಗಿ ಉದ್ಯೋಗಗಳಲ್ಲಿ ಶೇಕಡಾ 75 ರಷ್ಟು ಮೀಸಲಾತಿ (Reservation In Private Jobs) ನೀಡಲಾಗುವುದು. ಈ ಬಗ್ಗೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮಾಹಿತಿ ನೀಡಿದ್ದಾರೆ. ಮಸೂದೆಯನ್ನು ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಅನುಮೋದಿಸಿದ್ದಾರೆ ಎಂದು ಸ್ವತಃ ಸಿಎಂ ಖಟ್ಟರ್ ಹೇಳಿದ್ದಾರೆ. ರಾಜ್ಯಪಾಲರ ಅನುಮೋದನೆಯೊಂದಿಗೆ ರಾಜ್ಯ ಸರ್ಕಾರ ಕೂಡ ತನ್ನ ಅಧಿಸೂಚನೆಯನ್ನು ಹೊರಡಿಸಿದೆ. ಇದಕ್ಕೂ ಮೊದಲು ಖಾಸಗಿ ಉದ್ಯೋಗಗಳಲ್ಲಿ ಮೀಸಲಾತಿ (Reservation) ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿತ್ತು ಎಂದು ಖಟ್ಟರ್ ಹೇಳಿದ್ದಾರೆ.
ಈ ರಾಜ್ಯದಲ್ಲಿ ಇನ್ನು ಮುಂದೆ ಖಾಸಗಿ ವಲಯದ ಉದ್ಯೋಗಳಲ್ಲಿ ಸ್ಥಳೀಯರಿಗೆ ಶೇ 75 ರಷ್ಟು ಮೀಸಲಾತಿ
ಹೊಸಬರನ್ನು ನೇಮಿಸುವಂತಿಲ್ಲ
ಈ ಮಾಹಿತಿಯನ್ನು ಸರ್ಕಾರಕ್ಕೆ ನೀಡುವವರೆಗೆ, ಇದೀಗ ಖಾಸಗಿ ಕಂಪನಿಗಳಿಗೆ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೂ, ಕಾನೂನಿನ ಪ್ರಕಾರ, ಕಂಪನಿಯ ಮಾಲೀಕರು ಬಯಸಿದರೆ, ಅವರು ಒಂದು ಜಿಲ್ಲೆಯಿಂದ ಶೇ.10ಕ್ಕೂ ಹೆಚ್ಚು ಜನರನ್ನು ನೇಮಕ ಮಾಡುವುದನ್ನು ನಿಷೇಧಿಸಬಹುದು.
ಇದನ್ನೂ ಓದಿ-ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಿದಾಗಲೇ ಸಾಮಾಜಿಕ ನ್ಯಾಯ ಅನುಷ್ಠಾನಗೊಳ್ಳಲು ಸಾಧ್ಯ-ಸಿದ್ಧರಾಮಯ್ಯ
ವಿನಾಯ್ತಿ ಕೂಡ ಒದಗಿಸಲಾಗಿದೆ
ಕಂಪನಿಯ ಒಂದು ಹುದ್ದೆಗೆ ಬೇಕಾಗಿರುವ ಅನುಭವಿ ಸಿಗದಿದ್ದರೆ, ಕಂಪನಿ ಈ ಮೀಸಲಾತಿ ಕಾನೂನಿ ಅಡಿಯಲ್ಲಿ ವಿನಾಯ್ತಿ ಕೂಡ ಪಡೆಯಬಹುದು. ಆದರೆ, ಇದಕ್ಕಾಗಿ ಕಂಪನಿಯು ಜಿಲ್ಲಾ ಜಿಲ್ಲಾಧಿಕಾರಿ ಅಥವಾ ಉನ್ನತ ಅಧಿಕಾರಿಗಳಿಂದ ಅನುಮತಿ ಪಡೆಯಬೇಕಾಗುತ್ತದೆ. ಕಾನೂನನ್ನು ಅನುಷ್ಠಾನಗೊಳಿಸುವುದರ ಜೊತೆಗೆ, ಕಂಪನಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಿತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ. ಎಸ್‌ಡಿಎಂ ಮತ್ತು ಉನ್ನತ ಅಧಿಕಾರಿಗಳಿಗೆ ಕಾನೂನಿನ ಅನುಷ್ಠಾನದ ಬಗ್ಗೆ ತನಿಖೆ ನಡೆಸುವ ಹಕ್ಕಿದೆ ಮತ್ತು ಅವರು ಕಂಪನಿಯ ಆವರಣಕ್ಕೂ ಹೋಗಲು ಸಾಧ್ಯವಾಗಲಿದೆ. ಇದೇ ವೇಳೆ ಈ ಕಾನೂನು ಮುಂದಿನ ಹತ್ತು ವರ್ಷಗಳವರೆಗೆ ಜಾರಿಯಲ್ಲಿರಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ- ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮರಾಠರಿಗೆ ಮೀಸಲಾತಿ, ಸುಪ್ರೀಂಕೋರ್ಟ್ ನಿಂದ ತಡೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.