ಗುರಗಾಂವ್ : ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯುವು ದೇಶದಲ್ಲಿ ಸಧ್ಯ ತಾಂಡವಾಡುತ್ತಿದೆ, ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಸೋಮವಾರ ಹರಿಯಾಣ ರಾಜ್ಯ ಸರ್ಕಾರದಿಂದ  ಬಿಪಿಎಲ್ ಕಾರ್ಡ್(BPL Card) ಹೊಂದಿದವರಿಗೆ ತಲಾ 5000 ರೂ. ಘೋಷಿಸಿದೆ.


COMMERCIAL BREAK
SCROLL TO CONTINUE READING

ಈ ಕುರಿತು ಮಾತನಾಡಿದ ಸಚಿವ ಅನಿಲ್ ವಿಜ್(Anil Vij), ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅವರ ಜೀವನೋಪಾಯ ಸ್ಥಗಿತಗೊಂಡಿರುವುದರಿಂದ 5000 ರೂ.ಗಳನ್ನು ನೀಡಲು ನಿರ್ಧರಿಸಲಾಗಿದೆ ಮತ್ತು ಅವರು ಕೋವಿಡ್ ಮಧ್ಯೆ ಪ್ರತ್ಯೇಕವಾಗಿ ಇರಬೇಕಾಗಿದೆ. ಆದ್ದರಿಂದ ಅವರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದರು ಎಂದರು.


ಇದನ್ನೂ ಓದಿ : Twitter : ಕೊರೋನಾ ಸಂಕಷ್ಟಕ್ಕೆ ಮಿಡಿದ ಟ್ವಿಟರ್ : ಭಾರತಕ್ಕೆ ₹ 110 ಕೋಟಿ ಆರ್ಥಿಕ ನೆರವು!


ಮೇ 10 ರಿಂದ ಮೇ 17 ರವರೆಗೆ ಒಂದು ವಾರದಲ್ಲಿ ಕೊರೋನಾ(Corona) ಎಚ್ಚರಿಕೆ ಕುರಿತು ಸರ್ಕಾರ ‘ಸುರಕ್ಷಿತ್ ಹರಿಯಾಣ’ ಎಂಬ ಯೋಜನೆ ಘೋಷಿಸಲಾಗಿದೆ. “ಕಳೆದ ವಾರದ ಲಾಕ್‌ಡೌನ್‌ನ ನಿಯಮಗಳಿಗೆ ಹೆಚ್ಚುವರಿ ನಿಯಮಗಳನ್ನು ಸೇರಿಸಲಾಗಿದೆ ಮತ್ತು ಅದು ಮುಂದುವರಿಯುತ್ತದೆ. ಮದುವೆ ಮತ್ತು ಅಂತ್ಯಕ್ರಿಯೆಗಳಲ್ಲಿ ಸಹ 11 ಕ್ಕೂ ಹೆಚ್ಚು ಜನರನ್ನು ಒಟ್ಟುಗೂಡಿಸುವುದನ್ನು ನಿಷೇಧಿಸಲಾಗಿದೆ. ಯಾವುದೇ ಮೆರವಣಿಗೆಗಳನ್ನು ಅನುಮತಿ ಇಲ್ಲ ಎಂದು ಹೇಳಿದ್ದಾರೆ.


ಇದನ್ನೂ ಓದಿ : Coronavirus: ಭಾರತದ ಕರೋನಾ ಪರಿಸ್ಥಿತಿ ಬಗ್ಗೆ WHO ವಿಜ್ಞಾನಿ ಕಳವಳ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.