Haryana Election Result 2024 : ಹರಿಯಾಣ ಚುನಾವಣೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಇಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಅನಿರೀಕ್ಷಿತ ಗೆಲುವು ಸಾಧಿಸಿದೆ. ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎಷ್ಟು ಬಲಿಷ್ಠವಾಗಿದೆ ಎಂಬುದಕ್ಕೆ ಹರಿಯಾಣ ಚುನಾವಣೆ ಉದಾಹರಣೆಯಂತಾಗಿದೆ. ಹರಿಯಾಣದಲ್ಲಿ ಗೆಲ್ಲುವುದು ಕಷ್ಟ ಎಂದು ತಿಳಿದ ಬಿಜೆಪಿ ಹಲವು ಯೋಜನೆಗಳನ್ನು ರೂಪಿಸಿ ಯಶಸ್ವಿಯಾಗಿದೆ. 


COMMERCIAL BREAK
SCROLL TO CONTINUE READING

ಹರಿಯಾಣದಲ್ಲಿ ಭಾರೀ ಸೋಲು ಎದುರಿಸುವ ಆತಂಕದಲ್ಲಿದ್ದ ಬಿಜೆಪಿ ಕೆಲ ಬದಲಾವಣೆ ಮಾಡಿಕೊಂಡು ಕಣ್ಣಕ್ಕಿಳಿಯಿತು. ಮನೋಹರ್ ಲಾಲ್ ಖಟ್ಟರ್ ಬದಲಿಗೆ ನಯಾಬ್ ಸಿಂಗ್ ಸೈನಿ ಬಂದರು. ಮನೋಹರ್ ಲಾಲ್ ಖಟ್ಟರ್ ಯಾವುದೇ ಪ್ರಚಾರ ಪೋಸ್ಟರ್ ಅಥವಾ ಬ್ಯಾನರ್‌ಗಳಲ್ಲಿ ಕಾಣಲೇ ಇಲ್ಲ. ಕೊನೆಗೆ ಈ ಪ್ಲಾನ್ ಬಿಜೆಪಿಗೆ ವರ್ಕೌಟ್‌ ಆಯಿತು. ಸೈನಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡುವ ಮೂಲಕ ಬಿಜೆಪಿ ಒಬಿಸಿ ಸಮುದಾಯದ ಮನವೊಲಿಸಿತು. 


ಇದನ್ನೂ ಓದಿ: ಹೊಸ ಕಾಶ್ಮೀರ ಮನವೊಲಿಕೆ ಮಾಡುವಲ್ಲಿ ವಿಫಲವಾಯ್ತಾ ಬಿಜೆಪಿ! ಗಡಿಯಲ್ಲಿನ ಸೋಲಿಗೆ ಕಾರಣವಾಗಿದ್ದೇ ಈ ಅಂಶಗಳು?


ಶತಾಯಗತಾಯ ಹರಿಯಾಣ ಚುನಾವಣೆ ಗೆಲ್ಲುವ ಗುರಿಯಿಟ್ಟಿದ್ದ ಬಿಜೆಪಿ ಎದುರು ಕಾಂಗ್ರೆಸ್‌ ತಂತ್ರ ರೂಪಿಸುವಲ್ಲಿ ವಿಫಲವಾಯಿತು. ಚುನಾವಣೆ ಮುಗಿಯುವವರೆಗೂ ಒಗ್ಗಟ್ಟಿನಿಂದ ಕೆಲಸ ಮಾಡುವುದು ಕಾಂಗ್ರೆಸ್ ಪಕ್ಷಕ್ಕೆ ಕಷ್ಟಕರವಾಗಿತ್ತು. ಭೂಪಿಂದರ್ ಸಿಂಗ್ ಹೂಡಾ ಮತ್ತು ಕುಮಾರಿ ಸೆಲ್ಜಾ ಇಬ್ಬರು ನಾಯಕರ ನಡುವೆ ಪೈಪೋಟಿ ಇತ್ತು. ಇದು ಬಿಜೆಪಿ ಪಕ್ಷಕ್ಕೆ ಸಹಾಯ ಮಾಡಿತು. ಆಮ್ ಆದ್ಮಿ ಪಕ್ಷವು ಚುನಾವಣೆಯಲ್ಲಿ ಯಾವುದೇ ಸ್ಥಾನಗಳನ್ನು ಗೆಲ್ಲಲಿಲ್ಲ ಆದರೆ 1.78% ಮತಗಳನ್ನು ಗಳಿಸಿತು. 


75 ವರ್ಷ ಮೇಲ್ಪಟ್ಟ ಹಿರಿಯ ನಾಯಕರತ್ತ ಗಮನ ಹರಿಸುವುದನ್ನು ಕಾಂಗ್ರೆಸ್ ನಿಲ್ಲಿಸಬೇಕು ಎಂಬುದು ಜನರ ಅಭಿಪ್ರಾಯ.  ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ನಿಜವಾಗಿಯೂ ಬಯಸಿದರೆ, ಕಿರಿಯ ನಾಯಕರನ್ನು ಹುಡುಕಬೇಕಾಗಿದೆ. ಹರಿಯಾಣದಲ್ಲಿ ಕಾಂಗ್ರೆಸ್ ಗೆ ದೊಡ್ಡ ಹಿನ್ನಡೆ ತಂದಿದ್ದೆ ಆಂತರಿಕ ವೈಮನಸ್ಸು. 


ಇದನ್ನೂ ಓದಿ: Election Result 2024: ಚೊಚ್ಚಲ ಚುನಾವಣಾ ʼಕುಸ್ತಿʼಯಲ್ಲಿ ಭರ್ಜರಿ ಜಯಭೇರಿ ಬಾರಿಸಿದ ವಿನೇಶ್ ಫೋಗಟ್ ಹೇಳಿದ್ದೇನು?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.