ತಮಾಷೆಯಲ್ಲ ! ಈ ಹೆದ್ದಾರಿಯಲ್ಲಿ ಹಾದು ಹೋಗುವ ಪ್ರತಿಯೊಬ್ಬರ ಕಣ್ಣಿಗೂ ಬೀಳುತ್ತದೆಯಂತೆ ದೆವ್ವ !ಹಗಲು ಹೊತ್ತು ಕೂಡಾ ಈ ಹೈ ವೇಯಲ್ಲಿ ಸಾಗಲು ಭಯ ಬೀಳುತ್ತಾರೆ ಜನ
Haunted Roads of India :ನಮ್ಮ ದೇಶದಲ್ಲಿ ದೆವ್ವದ ರಸ್ತೆ ಎಂದೇ ಹೆಸರಾಗಿರುವ ಕೆಲವು ರಸ್ತೆಗಳಿವೆ. ಈ ರಸ್ತೆಗಳಲ್ಲಿ ಸಂಚರಿಸುವ ಪ್ರತಿ ವಾಹನಕ್ಕೂ ದೆವ್ವದ ಅಸ್ತಿತ್ವ ಗೋಚರಿಸುತ್ತದೆಯಂತೆ.
Haunted Roads of India : ಕೆಲವರು ದೆವ್ವ, ಪ್ರೇತ, ಆತ್ಮ ಇವುಗಳ ಬಗ್ಗೆ ನಂಬಿಕೆ ಇಟ್ಟಿರುತ್ತಾರೆ. ಇನ್ನು ಕೆಲವರು ಇವೆಲ್ಲಾ ಕೇವಲ ಕಟ್ಟು ಕತೆ, ಮೂಢ ನಂಬಿಕೆ ಎನ್ನುತ್ತಾರೆ. ಜಗತ್ತಿನಲ್ಲಿ ಒಳ್ಳೆಯದು ಎನ್ನುವುದು ಇದ್ದ ಮೇಲೆ ಕೆಟ್ಟದ್ದು ಕೂಡಾ ಇರಲೇ ಬೇಕು, ಹಾಗಾಗಿ ದೇವರು ಎನ್ನುವ ಕಾಯುವ ಕೈ ಇರುವಾಗ ದೆವ್ವ ಎನ್ನುವ ದುಷ್ಟ ಶಕ್ತಿಯ ಅಸ್ತಿತ್ವ ಕೂಡಾ ಇದ್ದೇ ಇರುತ್ತದೆ ಎನ್ನುವ ವಾದ ಕೂಡಾ ಅನೇಕರದ್ದು. ಈ ಮಧ್ಯೆ, ನಮ್ಮ ದೇಶದಲ್ಲಿ ದೆವ್ವದ ರಸ್ತೆ ಎಂದೇ ಹೆಸರಾಗಿರುವ ಕೆಲವು ರಸ್ತೆಗಳಿವೆ. ಈ ರಸ್ತೆಗಳಲ್ಲಿ ಸಂಚರಿಸುವ ಪ್ರತಿ ವಾಹನಕ್ಕೂ ದೆವ್ವದ ಅಸ್ತಿತ್ವ ಗೋಚರಿಸುತ್ತದೆಯಂತೆ.
ಹೌದು ಇಲ್ಲಿ ನಾವು ಕಳವು ರಸ್ತೆ ಅಥವಾ ಹೆದ್ದಾರಿ ಬಗ್ಗೆ ಹೇಳುತ್ತಿದ್ದೇವೆ. ಈ ಹೆದ್ದಾರಿಯನ್ನು ದೆವ್ವದ ರಸ್ತೆ ಎಂದೇ ಕರೆಯಲಾಗುತ್ತದೆ. ಈ ಹೆದ್ದಾರಿಯಲ್ಲಿ ಸಾಗುವವರು ಇಲ್ಲಿ ದೆವ್ವ ಇದೆ ಎಂದು ಖಡಾ ಖಂಡಿತವಾಗಿ ಹೇಳುತ್ತಾರೆ. ಇದಕ್ಕೆ ಯಾವುದೇ ಪುರಾವೆ ಅಥವಾ ವಿವರಣೆಯಿಲ್ಲದಿದ್ದರೂ, ಜನರು ತಮ್ಮ ಅನುಭವದ ಮೂಲಕ ಈ ರಸ್ತೆಗಳನ್ನು ದೆವ್ವದ ರಸ್ತೆ ಎಂದೇ ಕರೆಯುತ್ತಾರೆ. ಹಗಲಿನಲ್ಲಿಯೂ ಈ ಮಾರ್ಗವಾಗಿ ತೆರಳಲು ಭಯ ಬೀಳುತ್ತಾರೆ.
ಇದನ್ನೂ ಓದಿ : 35 ವರ್ಷ ಬೀದಿ ಗುಡಿಸುತ್ತಿದ್ದವರಿಗೆ ಉಪಮೇಯರ್ ಪಟ್ಟ !ಡೆಪ್ಯುಟಿ ಮೇಯರ್ ಆದ ಬಳಿಕವೂ ಬೀದಿ ಬದಿಯಲ್ಲಿ ತರಕಾರಿ ಮಾರಾಟ !
ದೆಹಲಿ-ಜೈಪುರ ಹೆದ್ದಾರಿ :
ನಂಬಿಕೆಯ ಪ್ರಕಾರ, ದೆಹಲಿ-ಜೈಪುರ ಹೆದ್ದಾರಿಯನ್ನು ಶಾಪಗ್ರಸ್ತವೆಂದು ಹೇಳಲಾಗುತ್ತದೆ. ಈ ರಸ್ತೆಯಲ್ಲಿ ಅನೇಕ ಭಯಾನಕ ಸಂಗತಿಗಳು ಎದುರಾಗುತ್ತವೆ ಎನ್ನುವುದು ಜನ ಮಾತು. ಈ ಹೆದ್ದಾರಿಯಲ್ಲಿ ಹಾದುಹೋದಾಗ, ಕೆಲವು ನಕಾರಾತ್ಮಕ ಶಕ್ತಿ ಮತ್ತು ವಿಚಿತ್ರವಾದ ಸಂಗತಿಗಳು ನಿಮ್ಮನ್ನು ಕಾಡುತ್ತವೆಯಂತೆ.
ರಾಂಚಿ-ಜಮ್ಶೆಡ್‌ಪುರ NH-33 :
ಜಾರ್ಖಂಡ್‌ನ ರಾಜಧಾನಿ ರಾಂಚಿ ಮತ್ತು ಜಮ್‌ಶೆಡ್‌ಪುರವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-33ರಲ್ಲಿ ಅನೇಕ ಅಪಘಾತಗಳು ಸಂಭವಿಸುತ್ತವೆ.ಇಲ್ಲಿ ದೆವ್ವದ ಕಾಟ ಇದೆ ಎನ್ನುವುದೇ ಇಲ್ಲಿನ ಜನರ ನಂಬಿಕೆ. ಈ ಹೆದ್ದಾರಿಯ ಎರಡೂ ಬದಿಗಳಲ್ಲಿ ದೇವಾಲಯವಿದ್ದು, ಯಾವುದೇ ವಾಹನ ಈ ಮೂಲಕ ಹಾಡು ಹೋಗುವಾಗ ಚಾಲಕನು ಎರಡೂ ದೇವಾಲಯಗಳಿಗೆ ಪ್ರಾರ್ಥನೆ ಸಲ್ಲಿಸಿಯೇ ಮುಂದೆ ಸಾಗುತ್ತಾರೆ.
ದೆಹಲಿ ಕ್ಯಾಂಟ್ ರಸ್ತೆ :
ಜನರು ದೆಹಲಿ ಕ್ಯಾಂಟ್ ರೋಡ್ ಅನ್ನು ದೆವ್ವ ಎಂದು ಕರೆಯುತ್ತಾರೆ ಮತ್ತು ಇಲ್ಲಿ ಪ್ರಯಾಣಿಸುವ ಜನರು ಬಿಳಿ ಸೀರೆಯನ್ನು ಧರಿಸಿದ ಮಹಿಳೆಯ ದೆವ್ವ ಈ ರಸ್ತೆಯಲ್ಲಿ ಸಂಚರಿಸುತ್ತದೆ ಎಂದು ಹೇಳುತ್ತಾರೆ. ಈ ರಸ್ತೆಯಲ್ಲಿ ತಿರುಗಾಡುತ್ತಿದ್ದ ಮಹಿಳೆಯೊಬ್ಬರು ಲಿಫ್ಟ್ ಕೇಳಿದ್ದು, ಕಾರನ್ನು ನಿಲ್ಲಿಸುವ ಬದಲು ಕಾರಿನೊಂದಿಗೆ ಓಡಿ ತೊಂದರೆ ಕೊಡುತ್ತಿದ್ದಾರೆ ಎನ್ನಲಾಗಿದೆ. ಆದಾಗ್ಯೂ, ಈ ಬಗ್ಗೆ ಯಾವುದೇ ಪುರಾವೆಗಳಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಮುಂಬೈ-ಗೋವಾ ಹೆದ್ದಾರಿ :
ಮುಂಬೈ-ಗೋವಾ ಹೆದ್ದಾರಿಯಲ್ಲಿರುವ ಕಾಶೆಡಿ ಘಾಟ್ ಅನ್ನು ದೆವ್ವದ ವಾಸ ಸ್ಥಳ ಎಂದು ಕರೆಯುತ್ತಾರೆ. ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾದ ಈ ಸ್ಥಳವು ರಾತ್ರಿಯಲ್ಲಿ ಭಯಾನಕವಾಗಿರುತ್ತದೆ ಎನ್ನುವುದು ಜನರ ಅಭಿಪ್ರಾಯ. ರಾತ್ರಿ ವೇಳೆ ಮಹಿಳೆಯೊಬ್ಬರು ಇಲ್ಲಿ ಹಾದುಹೋಗುವ ವಾಹನಗಳನ್ನು ನಿಲ್ಲಿಸುತ್ತಾರೆಯಂತೆ. ಒಂದು ವೇಳೆ ವಾಹನವನ್ನು ನಿಲ್ಲಿಸದೆ ಹಾದುಹೋಗಲು ಪ್ರಯತ್ನಿಸುವ ಚಾಲಕ ಅಪಘಾತಕ್ಕೆ ಒಳಗಾಗುತ್ತಾರೆಯಂತೆ.
ಸತ್ಯಮಂಗಲಂ ವನ್ಯಜೀವಿ ಅಭಯಾರಣ್ಯ :
ತಮಿಳುನಾಡಿನ ಸತ್ಯಮಂಗಲಂ ವನ್ಯಜೀವಿ ಅಭಯಾರಣ್ಯದ ಮೂಲಕ ಹಾದುಹೋಗುವ ಹೆದ್ದಾರಿಯಲ್ಲೂ ದೆವ್ವದ ಕಾಟ ಇದೆಯಂತೆ. ಈ ಹೆದ್ದಾರಿಯಲ್ಲಿ ವಿಚಿತ್ರ ಧ್ವನಿ ಕೇಳಿ ಬರುತ್ತದೆಯಂತೆ. ಈ ರಸ್ತೆಯಲ್ಲಿ ದೀಪ ಹಾದು ಹೋಗುವಂತೆ ಭಾಸವಾಗುತ್ತದೆಯಂತೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.