ನವದೆಹಲಿ: ಮುಂಬೈ 26/11ರ ಉಗ್ರರ ದಾಳಿ ವೇಳೆ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಮೃತಪಟ್ಟು 11 ವರ್ಷಗಳಾಗುತ್ತಾ ಬಂತು. ಈಗ ಇದೇ ಮೊದಲ ಬಾರಿಗೆ ತಮ್ಮ ತಂದೆಯ ಸಾವಿನ ಕುರಿತಾಗಿ ಪುತ್ರಿ ನವರೆ ಮೌನ ಮುರಿದ್ದಾರೆ.


COMMERCIAL BREAK
SCROLL TO CONTINUE READING

ಇತ್ತೀಚಿಗೆ ಮಾಲೆಗಾಂ ಬಾಂಬ್ ಸ್ಪೋಟದಲ್ಲಿ ಆರೋಪಿಯಾಗಿದ್ದ ಪ್ರಗ್ಯಾ ಸಾಧ್ವಿ ಸಿಂಗ್ ಠಾಕೂರ್ ಅವರು ತಂದೆ ಹೇಮಂತ್ ಕರ್ಕರೆ ಕುರಿತಾಗಿ ನೀಡಿದ ಹೇಳಿಕೆ ವಿಚಾರವಾಗಿ ಆಂಗ್ಲ ಪತ್ರಿಕೆಗೆ ನೀಡಿರುವ ಸಂದರ್ಶನವೊಂದರಲ್ಲಿ ಪುತ್ರಿ ನವರೆ ಮಾತನಾಡುತ್ತಾ" ಆಕೆ (ಸಾಧ್ವಿ) ಗೆ ಅಥವಾ ಆಕೆಯ ಹೇಳಿಕೆಗೆ ನಾನು ಮಹತ್ವ ಕೊಡಲು ಹೋಗುವುದಿಲ್ಲ. ಅವರು(ತಂದೆ) ಮಾದರಿಯಾಗಿದ್ದವರು ಆದ್ದರಿಂದ ಅವರ ಹೆಸರನ್ನು ಗಣತೆಯಿಂದ ಗಣನೆಗೆ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.


ಇನ್ನು ಮುಂದುವರೆದು ಪುತ್ರಿ ನವರೆ " ಅವರು ನಮಗೆ ಭಯೋತ್ಪಾಧನೆಗೆ ಯಾವುದೇ ಧರ್ಮವಿಲ್ಲ ಎಂದು ಹೇಳಿದ್ದರು.ಯಾವ ಧರ್ಮ ಕೂಡ ಇನ್ನೊಬ್ಬನನ್ನು ಕೊಲ್ಲಿರಿ ಎಂದು ಹೇಳುವುದಿಲ್ಲ. ಒಂದು ವೇಳೆ ಇದ್ದರೆ ಅಂತ ಸಿದ್ಧಾಂತವು ಸೋಲಬೇಕು. ಅವರು ತಮ್ಮ 24 ವರ್ಷಗಳ ಪೋಲಿಸ್ ಜೀವನದಲ್ಲಿ ಎಲ್ಲರಿಗೂ ಅವರು ಸಹಾಯ ಮಾಡಿದ್ದಾರೆ. ತಮ್ಮ ಸಾವಿನಲ್ಲಿಯೂ ಕೂಡ ಅವರು ತಮ್ಮ ನಗರವನ್ನು ಹಾಗೂ ದೇಶವನ್ನು ರಕ್ಷಿಸಲು ಮುಂದಾಗಿದ್ದರು. ಅವರು ತಮ್ಮ ಸಮವಸ್ತ್ರವನ್ನು ಇಷ್ಟಪಟ್ಟಿದ್ದರು. ತಮ್ಮ ಜೀವ ಹೋಗುವ ಮೊದಲು ನಮ್ಮ ಮುಂದೆ ಇಟ್ಟಿದ್ದರು.ಅದೆಲ್ಲವನ್ನು ಎಲ್ಲರೂ ಸ್ಮರಿಸಬೇಕು ಎಂದರು. 


ಇತ್ತಿಚೆಗೆ ಮಾಲೆಗಾಂ ಸ್ಪೋಟದಲ್ಲಿ ಆರೋಪಿಯಾಗಿದ್ದ ಪ್ರಗ್ಯಾ ಸಿಂಗ್ ತಮ್ಮ ಶಾಪದಿಂದ ಕರ್ಕರೆ ಮುಂಬೈ ದಾಳಿಯಲ್ಲಿ ಸಾವನ್ನಪ್ಪಿದರು ಎಂದು  ಹೇಳಿಕೆ ನೀಡಿದ್ದರು.ಈ ಹೇಳಿಕೆಗೆ ದೇಶದೆಲ್ಲೆಡೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಈಗ ಪುತ್ರಿ ಕೊನೆಗೂ ತಮ್ಮ ತಂದೆ ಕುರಿತಾಗಿ ಸಾಧ್ವಿ ನೀಡಿರುವ ಹೇಳಿಕೆ ಕುರಿತಾಗಿ ಮೌನ ಮುರಿದ್ದಾರೆ. ಸದ್ಯ ಕರ್ಕರೆ ಪುತ್ರಿ ನವರೆ (38) ಮೂರು ಮಕ್ಕಳು ಹಾಗೂ ಪತಿಯೊಂದಿಗೆ ಅಮೇರಿಕಾದಲ್ಲಿ ನೆಲೆಸಿದ್ದಾರೆ.