ಜೈಪುರ: ರಾಜಸ್ಥಾನದ ಹಲವು ಭಾಗಗಳಲ್ಲಿ ತಾಪಮಾನ  50 ಡಿಗ್ರಿ ಸೆಲ್ಸಿಯಸ್ ತಲುಪಬಹುದು ಎಂದು ಹವಾಮಾನ ಇಲಾಖೆ ಶನಿವಾರದಂದು ತಿಳಿಸಿದೆ.


COMMERCIAL BREAK
SCROLL TO CONTINUE READING

 ಹವಾಮಾನ ತಜ್ಞ  ಚೇತನ್ ಶರ್ಮಾ ಎಎನ್ಐ ಗೆ ಪ್ರತಿಕ್ರಿಯಿಸಿ "ರಾಜಸ್ಥಾನದ ಹಲವು ಭಾಗಗಳಲ್ಲಿ ತಾಪಮಾನವು 47-50 ಡಿಗ್ರಿ ಸೆಲ್ಸಿಯಸ್ ಏರಬಹುದೆಂದು ತಿಳಿಸಿದ್ದಾರೆ.


ಮೇ ಮತ್ತು ಜೂನ್ ತಿಂಗಳಲ್ಲಿ ಜೈಪುರದಲ್ಲಿ 45 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಇರಲಿದೆ. ಇದರ ಜೊತೆಗೆ ಬಿಕನೇರ್, ಚುರು ಜಿಲ್ಲೆಗಳಲ್ಲಿ ಹೆಚ್ಚಳವಾಗಿದೆ ಎಂದು ಶರ್ಮಾ ತಿಳಿಸಿದ್ದಾರೆ. ರಾಜಸ್ತಾನದಲ್ಲಿ ಈಗಾಗಲೇ ಬಿಸಿಗಾಳಿ ಬೀಸುತ್ತಿದ್ದು ಅಜ್ಮೇರ್, ಬಿಕಾನೆರ್, ಜೋಧಪುರ ಮತ್ತು ಕೋಟಾ ಭಾಗದಲ್ಲಿ  ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.


ಮೇ 2 ಮತ್ತು 3 ರಂದು ರಾಜಸ್ಥಾನದ ಪೂರ್ವ ಭಾಗದಲ್ಲಿ ಧೂಳಿನ ಚಂಡಮಾರುತದಿಂದ ಕನಿಷ್ಠ 36 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಸುಮಾರು 200 ಜನ ಗಾಯಗೊಂಡಿದ್ದಾರೆ ಎನ್ನಲಾಗಿದೆ