Heat Stroke: ಮುಂಗಾರು ಆರಂಭದ ನಂತರ ದೇಶದ ಹಲವು ರಾಜ್ಯಗಳು ಬಿಸಿಲಿನ ತಾಪದಿಂದ ಮುಕ್ತಿ ಪಡೆದಿವೆ, ಆದರೆ, ಉತ್ತರ ಪ್ರದೇಶದಲ್ಲಿ ಮಾತ್ರ ಬಿಸಿಲುಬೇಗೆ ಮುಂದುವರೆದಿದೆ. ರಾಜ್ಯದ ಅಜಂಗಢ ಜಿಲ್ಲೆಯ ಕುರಿತು ಹೇಳುವುದಾದರೆ, ಅಲ್ಲಿ ಆಕಾಶದಿಂದ ಬೆಂಕಿ ಬೀಳುತ್ತಿದೆ ಎಂದರೆ ತಪ್ಪಾಗಲಾರದು. ಮಾಧ್ಯಮ ವರದಿಗಳ ಪ್ರಕಾರ, ಕಳೆದ 12 ಗಂಟೆಗಳಲ್ಲಿ 10 ಹೆಚ್ಚು ಜನರು ಬಿಸಿಲಿನ ಹೊಡೆತಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೊಂದೆಡೆ ಬಿಸಿಲಿನ ತಾಪಕ್ಕೆ ಅಸ್ವಸ್ಥರಾದ ಹಲವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.


COMMERCIAL BREAK
SCROLL TO CONTINUE READING

ಸೋಮವಾರ ರಾತ್ರಿ ಅಜಂಗಢ ಜಿಲ್ಲಾ ಆಸ್ಪತ್ರೆಯಲ್ಲಿ 10 ಜನರು ಬಿಸಿಲಿನ ಹೊಡೆತದಿಂದ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ಮಾಹಿತಿಯನ್ನು ನೀಡಿವೆ. ಈ ಸಂದರ್ಭದಲ್ಲಿ, ತೀವ್ರ ಜ್ವರ ಮತ್ತು ಶಾಖದ ಹೊಡೆತದಿಂದ ಎರಡು ಡಜನ್‌ಗೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಜಿಲ್ಲಾ ಆಸ್ಪತ್ರೆಯ ರಿಜಿಸ್ಟರ್‌ನಲ್ಲಿ ಈ ಜನರ ದಾಖಲೆ ಸಿಕ್ಕಿಲ್ಲ. ಇದರೊಂದಿಗೆ ಜನರು ವಾಂತಿ ಮತ್ತು ಜ್ವರದ ದೂರುಗಳೊಂದಿಗೆ ಆಸ್ಪತ್ರೆಯನ್ನು ತಲುಪುತ್ತಿದ್ದಾರೆ.


ಮತ್ತೊಂದೆಡೆ, ಬಲಿಯಾ ಜಿಲ್ಲಾ ಆಸ್ಪತ್ರೆಯಲ್ಲಿ ಇನ್ನೂ 11 ರೋಗಿಗಳು ಸಾವನ್ನಪ್ಪಿದ ನಂತರ, ಐದು ದಿನಗಳಲ್ಲಿ ಸಾವಿನ ಸಂಖ್ಯೆ 68 ಕ್ಕೆ ಏರಿಕೆಯಾಗಿದೆ. ಬಲಿಯಾ  ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಇನ್ನೂ 11 ರೋಗಿಗಳು ಸೋಮವಾರ ಮೃತಪಟ್ಟಿದ್ದಾರೆ. ಇದರೊಂದಿಗೆ ಕಳೆದ ಐದು ದಿನಗಳಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟವರ ಸಂಖ್ಯೆ 68ಕ್ಕೆ ಏರಿಕೆಯಾಗಿದೆ. ಈ ಕುರಿತು ಮಾಹಿತಿ ನೀಡಿರುವ ಬಲಿಯಾ ಮುಖ್ಯ ವೈದ್ಯಾಧಿಕಾರಿ (ಸಿಎಂಒ) ಜಯಂತ್ ಕುಮಾರ್, 'ಕಳೆದ 24 ಗಂಟೆಗಳಲ್ಲಿ ಒಟ್ಟು 178 ಹೊಸ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದು, ಅವರಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ಅವರು ಹೇಳಿದ್ದಾರೆ.


ಆದರೆ ಭಾನುವಾರದವರೆಗೆ ಜಿಲ್ಲೆಯಲ್ಲಿ ಕೇವಲ ಇಬ್ಬರು ಮಾತ್ರ ಬಿಸಿಲ ತಾಪದಿಂದ ಸಾವನ್ನಪ್ಪಿದ್ದಾರೆ ಎಂದು ಕುಮಾರ್ ಹೇಳಿದ್ದಾರೆ. ಸಾವಿಗೆ ನಿಖರವಾದ ಕಾರಣದ ಬಗ್ಗೆ ಪ್ರತಿಕ್ರಿಯಿಸಲು ಸಿಎಂಒ ನಿರಾಕರಿಸಿದೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಮಧ್ಯೆ, ಜಿಲ್ಲಾಸ್ಪತ್ರೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಬಿಸಿಲಿನ ಹೊಡೆತಕ್ಕೆ ಹೆಚ್ಚಿನ ಸಂಖ್ಯೆಯ ಸಾವುಗಳು ಸಂಭವಿಸಿರುವುದಕ್ಕೆ ಕಾರಣ ತಿಳಿಯಲು ಲಖನೌದಿಂದ ಜಿಲ್ಲೆಗೆ ಕಳುಹಿಸಲಾದ ಆರೋಗ್ಯ ಇಲಾಖೆ ತಂಡ ಸೋಮವಾರ ವಿವಿಧ ಪ್ರದೇಶಗಳ ಪರೀಶೀಲನೆ ನಡೆಸಿದೆ.


ಇದನ್ನೂ ಓದಿ-PM Modi US Visit: ಎರಡು ಡಜನ್ ಗೂ ಅಧಿಕ ದಿಗ್ಗಜರ ಜೊತೆಗೆ ಮೋದಿ ಭೇಟಿ, ಟ್ವಿಟ್ಟರ್ ಮಾಲೀಕ ಎಲಾನ್ ಮಸ್ಕ್ ಜೊತೆಗೂ ಭೇಟಿ


ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ (ಸಿಎಂಎಸ್) ಎಸ್.ಕೆ ಯಾದವ್. ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಸಂಖ್ಯೆ 400 ದಾಟಿದೆ ಎಂದು ಯಾದವ್ ಹೇಳಿದ್ದಾರೆ. ಕಳೆದ ಕೆಲ ದಿನಗಳಿಂದ ಜಿಲ್ಲಾಸ್ಪತ್ರೆ ಹೊರತುಪಡಿಸಿ ಜಿಲ್ಲೆಯ ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿದೆ ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.


ಇದನ್ನೂ ಓದಿ-New RAW Chief: ಭಾರತದ ಗುಪ್ತಚರ ಸಂಸ್ಥೆ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ ನೂತನ ಮುಖ್ಯಸ್ಥರಾಗಿ ಆಯ್ಕೆಯಾಗಿರುವ ರವಿ ಸಿನ್ಹಾ ಯಾರು?


ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಿಸಿಲಿನ ತಾಪ ಮತ್ತು ಶಾಖದ ಅಲೆಗಳ ಹಾನಿಯನ್ನು ತಡೆಯಲು ಕಾಂಕ್ರೀಟ್ ವ್ಯವಸ್ಥೆ ಮಾಡುವ ಅಧಿಕಾರಿಗಳ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ಸೋಮವಾರ ನಿಗದಿಪಡಿಸಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಸೋಮವಾರ ನಡೆದ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಬಿಸಿಗಾಳಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ ಮತ್ತು ಅಗತ್ಯ ಮಾರ್ಗಸೂಚಿಗಳನ್ನು ನೀಡಿದ್ದಾರೆ ಎಂದು ರಾಜ್ಯ ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಬಿಸಿಲಿನ ತಾಪ ಮತ್ತು ಬಿಸಿಲಿನ ತಾಂಡವ ಮುಂದುವರಿದಿದ್ದು, ಹಳ್ಳಿ ಅಥವಾ ನಗರದಲ್ಲಿ ಅನಗತ್ಯ ವಿದ್ಯುತ್ ಕಡಿತ ಮಾಡಬಾರದು ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ. ಅಗತ್ಯ ಬಿದ್ದರೆ ಹೆಚ್ಚುವರಿ ವಿದ್ಯುತ್ ಖರೀದಿಸುವ ವ್ಯವಸ್ಥೆ ಮಾಡುವಂತೆ ಸೂಚಿಸಿದ ಅವರು, ಟ್ರಾನ್ಸ್ ಫಾರ್ಮರ್ ಗಳು ಸುಟ್ಟುಹೋಗುವುದು, ತಂತಿಗಳು ಬೀಳುವುದು ಮುಂತಾದ ಸಮಸ್ಯೆಗಳನ್ನು ತಡಮಾಡದೆ ಪರಿಹರಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ