ಪಾಟ್ನ: ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭಾನುವಾರ ಕನಿಷ್ಠ 24 ಜನರು ಸಾವನ್ನಪ್ಪಿದ್ದು, ಅತಿವೃಷ್ಟಿಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ನಗರದ ಹಲವೆಡೆ ಮಳೆಯಿಂದಾಗಿ ರೈಲ್ವೆ ಹಳಿಗಳು ಜಲಾವೃತವಾದ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ. 


COMMERCIAL BREAK
SCROLL TO CONTINUE READING

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿ, ಕೇಂದ್ರದಿಂದ ಸಹಾಯ ಕೋರಿದ್ದಾರೆ. ಜತೆಗೆ, ಪಾಟ್ನಾ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆ ಹಾಗೂ ಸ್ಥಳಾಂತರಕ್ಕಾಗಿ ಬಿಹಾರ ಸರ್ಕಾರವು ಭಾರತೀಯ ವಾಯುಪಡೆಯ ಸಹಾಯ ಕೋರಿದೆ.


ನಿರಂತರ ಮಳೆಯಿಂದಾಗಿ ರಸ್ತೆ, ರೈಲು ಸಂಚಾರ ಮತ್ತು ವಿಮಾನ ಕಾರ್ಯಾಚರಣೆಯ ಮೇಲೂ ಪರಿಣಾಮ ಬೀರಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಭಾರತೀಯ ರೈಲ್ವೆ ಈ ರೈಲುಗಳ ಸಂಚಾರವನ್ನು ರದ್ದುಪಡಿಸಿದೆ. 


- 55527/55528 ಜಯನಗರ-ಪಾಟ್ನಾ-ಜಯನಗರ ಕಮಲಾ ಗಂಗಾ ಇಂಟರ್ಸಿಟಿ
- 53232/53231 ದಾನಪುರ-ತಿಲೈಯಾ-ದಾನಾಪುರ ಪ್ರಯಾಣಿಕ
- 53213/53214 ಪಾಟ್ನಾ-ಗಯಾ-ಪಾಟ್ನಾ ಪ್ರಯಾಣಿಕ
- 53211 ಪಾಟ್ನಾ-ಸಸಾರಂ ಪ್ರಯಾಣಿಕ
- 63326/63327 ಪಾಟ್ನಾ-ಇಸ್ಲಾಂಪುರ್-ಪಾಟ್ನಾ ಮೆಮು
- 13007 ಹೌರಾ-ಶ್ರೀ ಗಂಗನಗರ ತೂಫನ್ ಎಕ್ಸ್‌ಪ್ರೆಸ್
- 13401 ಭಾಗಲ್‌ಪುರ-ದಾನಪುರ ಇಂಟರ್ಸಿಟಿ ಎಕ್ಸ್‌ಪ್ರೆಸ್
- 13249 ಪಾಟ್ನಾ-ಭಾಬುವಾ ರೋಡ್ ಎಕ್ಸ್‌ಪ್ರೆಸ್
- 15550 ಪಾಟ್ನಾ-ಜಯನಗರ ಎಕ್ಸ್‌ಪ್ರೆಸ್
- 15125 ಪಾಟ್ನಾ-ಮಾಂಡುಡಿಹ್ ಕಾಶಿ ಜನ ಶತಾಬ್ದಿ ಎಕ್ಸ್‌ಪ್ರೆಸ್
- 13132 ಪಾಟ್ನಾ-ಕೋಲ್ಕತಾ ಎಕ್ಸ್‌ಪ್ರೆಸ್
- 13416 ಪಾಟ್ನಾ-ಮಾಲ್ಡಾ ಟೌನ್ ಎಕ್ಸ್‌ಪ್ರೆಸ್
- 13402 ದಾನಾಪುರ-ಭಾಗಲ್ಪುರ್ ಇಂಟರ್ಸಿಟಿ
- 13134 ವಾರಣಾಸಿ-ಸೀಲ್ಡಾ ಎಕ್ಸ್‌ಪ್ರೆಸ್
-13250 ಭಾಬುವಾ ರಸ್ತೆ-ಪಾಟ್ನಾ ಇಂಟರ್ಸಿಟಿ
- 15126 ಮಾಂಡುಡಿಹ್-ಪಾಟ್ನಾ ಕಾಶಿ ಜನ ಶತಾಬ್ದಿ ಎಕ್ಸ್‌ಪ್ರೆಸ್
- 18621 ಪಾಟ್ನಾ-ಹತಿಯಾ ಎಕ್ಸ್‌ಪ್ರೆಸ್
- 15549 ಜಯನಗರ-ಪಾಟ್ನಾ ಎಕ್ಸ್‌ಪ್ರೆಸ್
- 13122 ಗಾಜಿಪುರ ನಗರ-ಕೋಲ್ಕತಾ ಎಕ್ಸ್‌ಪ್ರೆಸ್


ಇದೇ ವೇಳೆ, ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದ ಪರಿಸ್ಥಿತಿಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಬಿಹಾರದ ಬೇಡಿಕೆಯಂತೆ ಪಾಟ್ನಾದಲ್ಲಿ ಸರ್ಕಾರದ ಹೆಚ್ಚುವರಿ ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ (ಎನ್‌ಡಿಆರ್‌ಎಫ್) ತಂಡಗಳನ್ನು ನಿಯೋಜಿಸಲಾಗಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ್ ರೈ ಹೇಳಿದ್ದಾರೆ.