Today Weather Update in India: ದೇಶದ ಹಲವು ರಾಜ್ಯಗಳಿಗೆ ಮಳೆರಾಯ ಆಗಮಿಸಿದ್ದಾನೆ, ಈ ಕಾರಣದಿಂದ ಬಿಸಿಲ ಬೇಗೆಗೆ ತತ್ತರಿಸಿದ್ದ ಭೂಮಿಯು ತಂಪಾಗಿದೆ. ಆದರೆ ಕೆಲವೆಡೆ ಮಳೆಯಿಂದಾಗಿ ಜನರು ತೊಂದರೆಗೆ ಸಿಲುಕಿದ್ದು, ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಏಷ್ಯಾಕಪ್ ಗೆದ್ದ ಭಾರತಕ್ಕೆ, ಸೋಲುಂಡ ಶ್ರೀಲಂಕಾಗೆ ಸಿಕ್ಕ ಮೊತ್ತ ಎಷ್ಟು? ಯಾರ ಪಾಲಿಗೆ ಯಾವ ಅವಾರ್ಡ್


ಇನ್ನು ಮಧ್ಯಪ್ರದೇಶದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರೀ ಮಳೆ ಬೀಳಲು ಪ್ರಾರಂಭಿಸಿದ್ದು ಪರಿಸ್ಥಿತಿ ಹತೋಟಿಗೆ ಮೀರಿದೆ. ಇನ್ನೊಂದೆಡೆ ಗುಜರಾತ್‌’ನಲ್ಲಿ ಹವಾಮಾನ ಇಲಾಖೆ ಇಂದು ಅಂದರೆ ಸೆಪ್ಟೆಂಬರ್ 18 ರಂದು ರೆಡ್ ಅಲರ್ಟ್ ಘೋಷಿಸಿದೆ. ಹವಾಮಾನ ಇಲಾಖೆ ಪ್ರಕಾರ ಗುಜರಾತ್ ನಲ್ಲಿ ಸೆಪ್ಟೆಂಬರ್ 19ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ.


ಹವಾಮಾನ ಇಲಾಖೆಯ ಪ್ರಕಾರ, ಇಂದು ಅಂದರೆ ಸೆಪ್ಟೆಂಬರ್ 18 ರಂದು ರಾಷ್ಟ್ರ ರಾಜಧಾನಿ ದೆಹಲಿ-ಎನ್‌’ಸಿಆರ್‌’ನ ಹಲವು ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ತಾಪಮಾನದ ಕುರಿತು ಮಾತನಾಡುವುದಾದರೆ, ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 25 ಡಿಗ್ರಿ ಇರುವ ಸಾಧ್ಯತೆಯಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು ವಿಭಾಗ, ಹರಿಯಾಣ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ.


ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಸೆಪ್ಟೆಂಬರ್ 18 ರಂದು ಉತ್ತರ ಉತ್ತರ ಪ್ರದೇಶದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಇದಲ್ಲದೇ, ಮಿಜೋರಾಂ, ಅಸ್ಸಾಂ, ಮೇಘಾಲಯ, ಮಣಿಪುರದಲ್ಲಿ ಸೆಪ್ಟೆಂಬರ್ 21 ರವರೆಗೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ.


ಮಧ್ಯಪ್ರದೇಶದ 20 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಇಲ್ಲಿಯೂ ಮಳೆಯಿಂದಾಗಿ ಜನತೆಗೆ ತೊಂದರೆ ಎದುರಿಸುತ್ತಿದ್ದಾರೆ. ರಾಜ್ಯದ ಉಜ್ಜಯಿನಿ ಜಿಲ್ಲೆಯಲ್ಲಿ ಕ್ಷಿಪ್ರಾ ನದಿಯ ನೀರಿನ ಮಟ್ಟ ನಿರಂತರವಾಗಿ ಹೆಚ್ಚುತ್ತಿದ್ದು, ಭಾರೀ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತವಾಗಿವೆ. ಈಗಾಗಲೇ ಅನೇಕ ಅಂಗಡಿಗಳು, ಮನೆಗಳು ಜಲಪ್ರವಾಹಕ್ಕೆ ನಲುಗಿಹೋಗಿವೆ. ಸದ್ಯ ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ರಾಜ್ಯದಲ್ಲಿ ರೆಡ್ ಅಲರ್ಟ್ ಘೋಷಿಸಿದೆ.


ಇದನ್ನೂ ಓದಿ: ಏಕದಿನದಲ್ಲಿ 4 ರನ್’ಗೆ 6 ವಿಕೆಟ್ ಕಬಳಿಸಿದ್ದ ಈತನೇ ಭಾರತದ ಬೆಸ್ಟ್ ಬೌಲರ್! ಯಾರು ಗೊತ್ತಾ?


ಕರ್ನಾಟಕ ಹವಾಮಾನ ವರದಿ:


ಇಂದಿನಿಂದ ಮುಂದಿನ 5 ದಿನಗಳ ಕಾಲ ಅಂಡಮಾನ್-ನಿಕೋಬಾರ್ ದ್ವೀಪಗಳು ಮತ್ತು ಕರಾವಳಿ ಕರ್ನಾಟಕದ ಮೇಲೆ ಗುಡುಗು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಜೊತೆಗೆ ಗಂಗಾನದಿ ಪಶ್ಚಿಮ ಬಂಗಾಳ, ದಕ್ಷಿಣ ಒಳ ಕರ್ನಾಟಕ, ಕೇರಳ-ಮಾಹೆ ಮತ್ತು ಲಕ್ಷದ್ವೀಪದಲ್ಲಿ ಭಾರೀ ಮಳೆಯಾಗಲಿದೆ ಎಂದು ತಿಳಿದುಬಂದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.