ವಿಜಯನಗರಂ: ಆಂಧ್ರಪ್ರದೇಶದ ಪೂರ್ವ ಕರಾವಳಿಯಲ್ಲಿ ಭಾರಿ ಮಳೆಯಾಗಿದ್ದು, ವಿಜಯನಗರಂ ನಗರದಲ್ಲಿ ಗುರುವಾರ ರೈಲು ಕಾರ್ಯಾಚರಣೆ ಸ್ಥಗಿತಗೊಂಡಿದೆ. ಭಾರೀ ಮಳೆಯಿಂದಾಗಿ ಕೆಲವು ರೈಲುಗಳನ್ನು ರದ್ದುಪಡಿಸಲಾಗಿದೆ.


COMMERCIAL BREAK
SCROLL TO CONTINUE READING

ನಗರದ ಹಲವೆಡೆ ಗುಡುಗು ಸಹಿತ ಮಳೆಯಾಗಿದ್ದು, ಅಲ್ಲಲ್ಲಿ ನೀರು ನಿಂತು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಭಾರತೀಯ ರೈಲ್ವೆ ಪ್ರಕಟಣೆಯ ಪ್ರಕಾರ, ಹಳಿಗಳಲ್ಲಿ ನೀರು ನಿಂತಿರುವುದರಿಂದ 58526, 58525 ಮತ್ತು 22820 ಸಂಖ್ಯೆಯ ರೈಲುಗಳನ್ನು ರದ್ದುಪಡಿಸಲಾಗಿದೆ.


ಈ ರೈಲುಗಳು ವಿಶಾಖಪಟ್ಟಣಂ ಜಂಕ್ಷನ್‌ನಿಂದ ಭುವನೇಶ್ವರದ ನಡುವೆ ಚಲಿಸುತ್ತವೆ. ಅಲ್ಲದೆ,  ಭುವನೇಶ್ವರ-ವಿಶಾಖಪಟ್ಟಣಂ ಇಂಟರ್ಸಿಟಿ ಎಕ್ಸ್‌ಪ್ರೆಸ್ ಸಂಚಾರವನ್ನು ಶ್ರೀಕಾಕುಲಂನಲ್ಲಿ ಸ್ಥಗಿತಗೊಳಿಸಲಾಗಿದೆ. ಹವಾಮಾನ ವೈಪರಿತ್ಯದಿಂದಾಗಿ ವಿಶಾಖಪಟ್ಟಣಂನಿಂದ ಭುವನೇಶ್ವರಕ್ಕೆ ಹಿಂದಿರುಗುವ ರೈಲು ರದ್ದುಗೊಂಡಿದೆ.


ಆಂಧ್ರಪ್ರದೇಶದ ಹೊರತಾಗಿ, ಕರಾವಳಿ ಮತ್ತು ಕರ್ನಾಟಕದ ಉತ್ತರ ಭಾಗಗಳಲ್ಲಿ, ಸಿಕ್ಕಿಂ, ಅಸ್ಸಾಂ, ಮೇಘಾಲಯ, ಮಧ್ಯ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗಿದೆ.