ನವದೆಹಲಿ: ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯ ಟಾಲಂಡಿ ಗ್ರಾಮದಲ್ಲಿ ಭಾರೀ ಹಿಮಪಾತ ಉಂಟಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ. ಹಿಮಪಾತದ ವೀಡಿಯೋವನ್ನು ಎಎನ್ಐ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿದ್ದು, ಹಿಮಪಾತ ಎಷ್ಟು ಭಯಾನಕವಾಗಿದೆ ಎಂಬುದನ್ನು ನೀವೂ ಸಹ ವೀಕ್ಷಿಸಿ...



COMMERCIAL BREAK
SCROLL TO CONTINUE READING

ಹಿಮಪಾತವಾಗುತ್ತಿದ್ದಂತೆಯೇ ಗಾಳಿಯಲ್ಲಿ ಬಿಳಿ ಹೊಗೆಯಂತೆ ಕಾಣಿಸಿಕೊಂಡು ಆಕಾಶವೆಲ್ಲಾ ಶ್ವೇತವರ್ಣಕ್ಕೆ ತಿರುಗಿತ್ತು. ಅಲ್ಲದೆ, ಹಿಮಪಾತದಿಂದ ಜನಜೀವನ ಅಸ್ತವ್ಯಸ್ತವಾದ ಹಿನ್ನೆಲೆಯಲ್ಲಿ ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 


ಹಿಮಾಚಲ ಪ್ರದೇಶದ ಅನೇಕ ಭಾಗಗಳಲ್ಲಿ, ಮಾರ್ಚ್ ತಿಂಗಳಿನಲ್ಲಿ ಹಿಮಪಾತವಾಗುತ್ತದೆ. ಅನೇಕ ಪ್ರದೇಶಗಳಲ್ಲಿ ಹಿಮಪಾತದಿಂದಾಗಿ, ಕನಿಷ್ಠ ತಾಪಮಾನ ಕುಸಿಯುತ್ತಿದೆ. ಶಿಮ್ಲಾದಲ್ಲಿ ಕನಿಷ್ಠ 0.2 ಡಿಗ್ರಿ ಮತ್ತು ಗರಿಷ್ಠ ಏಳು ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ ಶಿಮ್ಲಾದಲ್ಲಿ 24 ಸೆಂಟಿಮೀಟರ್ ಹಿಮ ಮತ್ತು 31.3 ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.