ನವದೆಹಲಿ: ಬಾಹ್ಯಾಕಾಶ ಯೋಜನೆಗೆ ಸಂಬಂಧಿಸಿದ ಅತ್ಯಂತ ಭಾರವಾದ ಯಂತ್ರೋವೊಂದು ಅಂತಿಮವಾಗಿ ಕೇರಳವನ್ನು ತಲುಪಿತು. ಇದನ್ನು ಸೋಮವಾರ ತಿರುವನಂತಪುರದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ (ವಿಎಸ್‌ಸಿಸಿ) ಸಾಗಿಸಲಾಗಿದೆ.


COMMERCIAL BREAK
SCROLL TO CONTINUE READING

ಈ ಭಾರವಾದ ಯಂತ್ರವನ್ನು ಮಹಾರಾಷ್ಟ್ರದಿಂದ ಕೇರಳಕ್ಕೆ ಟ್ರಕ್‌ನಲ್ಲಿ ಕಳುಹಿಸಲಾಗಿದ್ದು, ಕೇರಳ ತಲುಪಲು ಇದಕ್ಕೆ ಒಂದು ವರ್ಷಕ್ಕಿಂತ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡಿದೆ. ಈ ಅವಧಿಯಲ್ಲಿ ಒಟ್ಟು ನಾಲ್ಕು ರಾಜ್ಯಗಳಿಂದ ಸಂಚರಿಸುವ ಮೂಲಕ ಈ ಯಂತ್ರ ಕೊನೆಗೆ ಭಾನುವಾರ ಕೇರಳಕ್ಕೆ ತಲುಪಿದೆ.


ಈ ಕುರಿತು ಹೇಳಿಕೆ ನೀಡಿರುವ ಮತ್ತು ಯಂತ್ರವನ್ನು ಸಾಗಿಸಿರುವ ಸಿಬ್ಬಂದಿ, " 'ನಾವು ಜುಲೈ 8, 2019 ರಂದು ಮಹಾರಾಷ್ಟ್ರದಿಂದ ನಮ್ಮ ಪ್ರಯಾಣ ಆರಂಭಿಸಿದ್ದೆವು. ಇದೀಗ 4 ರಾಜ್ಯಗಳ ಮೂಲಕ ಒಂದು ವರ್ಷ ಸಂಚರಿಸುವ ಮೂಲಕ ಇದೀಗ ನಾವು ತಿರುವನಂತಪುರಕ್ಕೆ ಬರಲು ಸಾಧ್ಯವಾಗಿದೆ" ಎಂದು ಹೇಳಿದ್ದಾರೆ.


ವಿಎಸ್ಸಿಸಿ ಏರೋಸ್ಪೇಸ್ ಹಾರಿಜಾಂಟಲ್ ಆಟೋಕ್ಲೇವ್ ಯಂತ್ರವನ್ನು ಆದೇಶಿಸಿತ್ತು. ಇದನ್ನು ತೂಕವಿಲ್ಲದೆ ವಸ್ತುಗಳನ್ನು ತಯಾರಿಸಲು ಬಳಸಲಾಗುತ್ತದೆ. ಈ ದೊಡ್ಡ ಯಂತ್ರದ ತೂಕ 70 ಟನ್ ಗಳಷ್ಟಿದ್ದು, ಇದರ ಎತ್ತರ 7.5 ಮೀಟರ್ ಮತ್ತು ಅಗಲ 6.5 ಮೀಟರ್. ಈ ಯಂತ್ರವನ್ನು ಮಹಾರಾಷ್ಟ್ರದ ನಾಸಿಕ್‌ನಲ್ಲಿ ತಯಾರಿಸಲಾಗಿದ್ದು, ಕೇರಳದ ವಿಎಸ್‌ಸಿಸಿಗೆ ಅಧಿಕೃತವಾಗಿ ಹಸ್ತಾಂತರಿಸಿದೆ. 


ಈ ಯಂತ್ರದ ಗಾತ್ರ ಮತ್ತು ತೂಕ ಹೆಚ್ಚಾಗಿರುವ ಕಾರಣ ಇದನ್ನು ಶಿಪ್ ಮೂಲಕ ಸಾಗಿಸಲು ಸಾಧ್ಯವಾಗಿರಲಿಲ್ಲ. ಆದರಿಂದ ಇದನ್ನು ರಸ್ತೆ ಮಾರ್ಗದ ಮೂಲಕ ಸಾಗಿಸಲಾಗಿದೆ.