Citizenship Amendment Act : ಪೌರತ್ವ ತಿದ್ದುಪಡಿ ಕಾಯ್ದೆ 2019(CAA-2019) ಅಡಿಯಲ್ಲಿ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವವರಿಗೆ ಸಹಾಯ ಮಾಡಲು ಶೀಘ್ರದಲ್ಲೇ ಸಹಾಯವಾಣಿಯನ್ನು ಆರಂಭಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದ್ದು, ಅರ್ಜಿದಾರರು  ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಉಚಿತವಾಗಿ ಕರೆ ಮಾಡುವ ಮೂಲಕ ಪಡೆಯಬಹುದು.


COMMERCIAL BREAK
SCROLL TO CONTINUE READING

ಅರ್ಜಿದಾರರು ದೇಶದ ಯಾವುದೇ ಭಾಗದಿಂದಲೂ ಉಚಿತವಾಗಿ ಕರೆ ಮಾಡುವ ಮೂಲಕ CAA-2019 ಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಬಹುದು. ಈ ಸೇವೆ ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ಲಭ್ಯವಿರುತ್ತದೆ' ಎಂಎಚ್‌ಎ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.


ಇದನ್ನು ಓದಿ : ನಟಿ ಪ್ರಿಯಾಂಕ ಚೋಪ್ರಾ ತಂಗಿ ನೋಡಿದ್ದೀರಾ? ಅಂದದಲ್ಲಿ ಬಾಲಿವುಡ್ ಬ್ಯೂಟಿಗಳೂ ಝೀರೋ...


ಮುಸ್ಲಿಮೇತರ ವ್ಯಕ್ತಿಗಳು 6 ವರ್ಷ ಕಾಲ ಅಥವಾ ಅದಕ್ಕೂ ಮೇಲ್ಪಟ್ಟು ಭಾರತದಲ್ಲೇ ವಾಸ ಮಾಡಿದ್ದರೆ ಅಂಥವರಿಗೆ ಪೌರತ್ವ ನೀಡಲಾಗುತ್ತದೆ. ಕ್ರಿಶ್ಚಿಯನ್, ಸಿಖ್, ಬೌದ್ಧ, ಜೈನ್​, ಪಾರ್ಸಿಗಳಿಗೆ ಪೌರತ್ವ ನೀಡಲಾಗುತ್ತದೆ. ಈ ಮೊದಲು 11 ವರ್ಷ ಭಾರತದಲ್ಲೇ ನೆಲೆಸಿದವರಿಗೆ ಪೌರತ್ವ ಪಡೆಯಲು ಅವಕಾಶವಿತ್ತು. ಆದರೆ ತಿದ್ದುಪಡಿ ಮೂಲಕ 11 ವರ್ಷದಿಂದ 5 ವರ್ಷಕ್ಕೆ ಇಳಿಸಲಾಗಿದೆ 


ಇದನ್ನು ಓದಿ : ಣಿರಾಮನ ಜೊತೆ ದಚ್ಚು ಮಡದಿ..! ವಿಜಯಲಕ್ಷ್ಮಿ ದರ್ಶನ್‌ ವಿಡಿಯೋ ವೈರಲ್‌


ಸಂಸತ್ತಿನಲ್ಲಿ ಮಸೂದೆ ಅಂಗೀಕಾರಗೊಂಡ ನಾಲ್ಕು ವರ್ಷಗಳ ನಂತರ, ಲೋಸಭೆ ಚುನಾವಣೆಗೆ ಕೆಲವೇ ದಿನಗಳ ಮುನ್ನ ಕೇಂದ್ರ ಸರ್ಕಾರ ಬಹು ನಿರೀಕ್ಷಿತ ಪೌರತ್ವ ತಿದ್ದುಪಡಿ ಕಾಯ್ದೆ( ಸಿಎಎ) ಅನ್ನು ಜಾರಿಗೊಳಿಸಿ ಕಳೆದ ಸೋಮವಾರ ಆದೇಶ ಹೊರಡಿಸಿದೆ. ಅರ್ಜಿದಾರರು ದೇಶದ ಯಾವುದೇ ಭಾಗದಿಂದಲೂ ಉಚಿತವಾಗಿ ಕರೆ ಮಾಡುವ ಮೂಲಕ CAA-2019 ಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಬಹುದು ಎಂಎಚ್‌ಎ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.