Video: ಸಂಸತ್ ಆವರಣದಲ್ಲಿ ಕಸ ಗುಡಿಸಿ ಟ್ರೋಲ್ ಗೊಳಗಾದ ಹೇಮಾ ಮಾಲಿನಿ
ಶನಿವಾರದಂದು ಸಂಸತ್ತಿನ ಆವರಣದಲ್ಲಿನ ಸ್ವಚ್ಛ ಭಾರತ್ ಅಭಿಯಾನ್ ದಲ್ಲಿ ಭಾಗವಹಿಸಿದ್ದ ಸಂಸದೆ ಹೇಮಾಮಾಲಿನಿ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಗೆ ಒಳಗಾಗಿದ್ದಾರೆ. ಎಎನ್ಐ ಹಂಚಿಕೊಂಡಿರುವ ಈ ವಿಡಿಯೋ ಈಗ ನೆಟಿಜನ್ ಗಳ ವ್ಯಂಗ್ಯಕ್ಕೆ ಗುರಿಯಾಗಿದೆ.
ನವದೆಹಲಿ: ಶನಿವಾರದಂದು ಸಂಸತ್ತಿನ ಆವರಣದಲ್ಲಿನ ಸ್ವಚ್ಛ ಭಾರತ್ ಅಭಿಯಾನ್ ದಲ್ಲಿ ಭಾಗವಹಿಸಿದ್ದ ಸಂಸದೆ ಹೇಮಾಮಾಲಿನಿ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಗೆ ಒಳಗಾಗಿದ್ದಾರೆ. ಎಎನ್ಐ ಹಂಚಿಕೊಂಡಿರುವ ಈ ವಿಡಿಯೋ ಈಗ ನೆಟಿಜನ್ ಗಳ ವ್ಯಂಗ್ಯಕ್ಕೆ ಗುರಿಯಾಗಿದೆ.
ಸಂಸತ್ತಿನ ಆವರಣದಲ್ಲಿನ ಈ ಸ್ವಚ್ಛತಾ ಅಭಿಯಾನದಲ್ಲಿ ರಾಜ್ಯ ಹಣಕಾಸು ಸಚಿವ ಅನುರಾಗ್ ಠಾಕೂರ್ ಕೂಡ ಭಾವಹಿಸಿದ್ದರು. ಇದೇ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಇವರನ್ನು ಸುತ್ತುವರೆದಿದ್ದಾರೆ. ಕೆಲವು ಚದುರಿದ ಒಣ ಎಲೆಗಳನ್ನು ಮಾತ್ರ ಗುಡಿಸಿ ಕೇವಲ ಫೋಟೋ ಗೆ ಪೋಜು ನೀಡುತ್ತಿದ್ದಾರೆ ಎಂದು ವ್ಯಂಗ್ಯ ಮಾಡಲಾಗಿದೆ.
ಸಂಜೀವಿ ಸಡಗೋಪನ್ ಎನ್ನುವವರು ಸಂಸತ್ತಿನ ಆವರಣದ ಬದಲು ರಸ್ತೆಗೆ ಇಳಿದು ಅಲ್ಲಿನ ತಾಜ್ಯ ಕಸವನ್ನು ಸ್ವಚ್ಛಗೊಳಿಸಬೇಕೆಂದು ಹೇಳಿದ್ದಾರೆ. ಇನ್ನು ಮುಂದುವರೆದು ಅವರು ಪೇಪರ್ ಕಪ್ ನಿಂದ ಹಾಕಿ ಹಾಡುವಂತೆ ಈ ದೃಶ್ಯ ಕಾಣುತ್ತಿದೆ ಎಂದು ಕುಟುಕಿದ್ದಾರೆ. ವರ್ಷಾ ಎನ್ನುವವರು ಇದು ನವೀಲಿನ ಗರಿಯಲ್ಲ ಕಸಬರಿಗೆ ಎಂದು ಹೇಳಿದ್ದಾರೆ. ಜನ್ನಿ ಭಟ್ ಅವರು' ಹೇಮಾಮಾಲಿನಿಯವರ ಈ ಸ್ವಚ್ಛತಾ ಅಭಿಯಾನದ ಕೊಡುಗೆ ವಿವೇಕ್ ಒಬೆರಾಯ್ ಭಾರತೀಯ ಸಿನಿಮಾಗೆ ನೀಡಿದ ಕೊಡುಗೆಗೆ ಸಮ' ಎಂದು ಟ್ವೀಟ್ ಮಾಡಿದ್ದಾರೆ.