ನವದೆಹಲಿ:ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯಲ್ಲಿ ಭಾರಿ ಇಳಿಕೆ ಮಾಡಿರುವ ತೈಲ ಕಂಪನಿಗಳು ಗಣರಾಜ್ಯೋತ್ಸವ ಸಂದರ್ಭದಂದು ತನ್ನ ಗ್ರಾಹಕರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿವೆ. ಕಳೆದ 15 ದಿನಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 2 ರೂ.ಗಳ ಇಳಿಕೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆಯಲ್ಲಿ ಭಾರಿ ಕುಸಿತ ಉಂಟಾಗುತ್ತಿದ್ದು, ಮುಂಬರುವ ದಿನಗಳಲ್ಲಿಯೂ ಕೂಡ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಮತ್ತೆ ಇಳಿಕೆಯ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ.  ತೈಲ ಮಾರಾಟ ಮಾಡುವ ಕಂಪನಿಗಳು ರವಿವಾರ ಕೂಡ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 0.29ಪೈ-0.32ಪೈಸೆಗಳಷ್ಟು ಇಳಿಕೆ ಮಾಡಿದ್ದು, ಡಿಸೇಲ್ ಬೆಲೆಯಲ್ಲಿಯೂ ಕೂಡ 0.35-0.38 ಪೈಸೆಗಳಷ್ಟು ಇಳಿಕೆ ಮಾಡಿವೆ.  ಕಳೆದ ಒಂದು ತಿಂಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳಲ್ಲಿ ಒಂದು ದಿನದಲ್ಲಿ ಮಾಡಲಾದ ಅತಿ ಹೆಚ್ಚಿ ಇಳಿಕೆ ಇದಾಗಿದೆ.  ಜನವರಿ 11ರ ಬಳಿಕ ಇದುವರೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ ಒಟ್ಟು 2.15 ರೂಪಾಯಿ ಇಳಿಕೆ ಮಾಡಲಾಗಿದೆ. ಇನ್ನೊಂದೆಡೆ ಡಿಸೇಲ್ ಬೆಲೆ ಕೂಡ ಒಟ್ಟು 2. 21ರೂಪಾಯಿ ಇಳಿಕೆಯಾಗಿದೆ. 


COMMERCIAL BREAK
SCROLL TO CONTINUE READING

ಇಂಡಿಯನ್ ಆಯಿಲ್ ವೆಬ್ ಸೈಟ್ ಪ್ರಕಾರ ದೆಹಲಿ, ಕೊಲ್ಕತ್ತಾ, ಮುಂಬೈ ಹಾಗೂ ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಕ್ರಮೇಣವಾಗಿ ರೂ.73.86, ರೂ.76.48, ರೂ. 79.47, ಹಾಗೂ ರೂ.76.71ಕ್ಕೆ ಬಂದು ತಲುಪಿದೆ. ಇದೆ ರೀತಿ ಈ ನಾಲ್ಕು ಮಹಾನಗರಗಳಲ್ಲಿ ಪ್ರತಿ ಲೀಟರ್ ಡಿಸೇಲ್ ಬೆಲೆ ಕ್ರಮವಾಗಿ ರೂ. 66.96, ರೂ.69.32, ರೂ.70.19 ಹಾಗೂ ರೂ.70.73ಕ್ಕೆ ಬಂದು ತಲುಪಿದೆ.


ಜನವರಿ 11 ರಂದು ದೆಹಲಿ, ಕೊಲ್ಕತ್ತಾ, ಮುಂಬೈ ಹಾಗೂ ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಕ್ರಮವಾಗಿ ರೂ.76.01, ರೂ.78.59, ರೂ.81.60 ಹಾಗೂ ರೂ.78.98ಗಳಷ್ಟಿತ್ತು. ಇದೇ ವೇಳೆ ಈ ನಾಲ್ಕೂ ಮಹಾನಗರಗಳಲ್ಲಿ ಪ್ರತಿ ಲೀಟರ್ ಡಿಸೇಲ್ ಬೆಲೆ ಕೂಡ ಕ್ರಮವಾಗಿ ರೂ.69.17, ರೂ.71.54, ರೂ.72.54 ಹಾಗೂ ರೂ.73.10 ಗಳಷ್ಟಿತ್ತು.