Stray Dog Attack: ದೆಹಲಿ-ಎನ್‌ಸಿಆರ್ ಪ್ರದೇಶದ ನಿವಾಸಿಗಳ ಮೇಲೆ ಇತ್ತೀಚಿನ ದಿನಗಳಲ್ಲಿ ಬೀದಿನಾಯಿಗಳು ದಾಳಿ ಮಾಡಿ ಕೊಲ್ಲುತ್ತಿದೆ. ಇದರಿಂದಾಗಿ ಜನರು ಹೊರಬರಲು ಭಯಪಡುವಂತಾಗಿದೆ. ಅಷ್ಟೇ ಅಲ್ಲದೆ, ಈ ಬೀದಿನಾಯಿಗಳು ರಸ್ತೆಯಲ್ಲಿ ಒಬ್ಬರೇ ಓಡಾಡುತ್ತಿದ್ದರೆ ಅಥವಾ ಪುಟ್ಟಮಕ್ಕಳ ಮೇಲೆ ಬೇಗನೇ ದಾಳಿ ಇಡುತ್ತವೆ. ಅಂತಹ ಸಂದರ್ಭದಲ್ಲಿ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವುದೇ ಒಂದು ಸಾಹಸವಾಗಿರುತ್ತದೆ. ಇನ್ನು ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಸ್ವತಃ ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ತಿಳಿಯೋಣ.


COMMERCIAL BREAK
SCROLL TO CONTINUE READING

ನಾಯಿಗಳು ದಾಳಿ ಮಾಡುವ ಸಂದರ್ಭದಲ್ಲಿ ಆತ್ಮರಕ್ಷಣೆ ಹೇಗೆ ಮಾಡಿಕೊಳ್ಳಬೇಕು ಎಂಬುದರ ಕುರಿತು ತಿಳಿದುಕೊಳ್ಳಲು, ಜೀ ನ್ಯೂಸ್ ಡಿಜಿಟಲ್ ದೆಹಲಿಯ ಫೈಟಿಂಗ್ ಸ್ಕೂಲ್‌ನಲ್ಲಿ ಮೌಯಿ ಥಾಯ್ ತರಬೇತುದಾರರಾದ ಹಾಸನ್ ಅವರ ಜೊತೆ ಮಾತುಕತೆ ನಡೆಸಿದೆ.


ಇದನ್ನೂ ಓದಿ: Medical Miracle: ಏಳು ತಿಂಗಳು ಕೋಮಾದಲ್ಲಿದ್ದೇ ಮಗುವಿಗೆ ಜನ್ಮ ನೀಡಿದ ‘ಮಹಾತಾಯಿ’


ಬೀದಿನಾಯಿ ದಾಳಿ ಮಾಡಲು ಬಂದರೆ ಏನು ಮಾಡಬೇಕು?


ನೀವು ನಡೆದುಕೊಂಡು ಬರುತ್ತಿರುವ ಸಂದರ್ಭದಲ್ಲಿ ನಾಯಿ ನಿಮ್ಮ ಬಳಿ ಬರುತ್ತಿದ್ದರೆ ಅದರ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಡಿ. ಜೊತೆಗೆ ಅವುಗಳನ್ನು ನೋಡಿ ಹಿಂತಿರುಗಿ ಓಡಬೇಡಿ.


ನಾಯಿ ಕಡಿತದಿಂದ ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳುವುದು?


ನಾಯಿ ಕಡಿತದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಉತ್ತಮ ತಂತ್ರವೆಂದರೆ ನಾಯಿಯ ಕಣ್ಣುಗಳ ಮೇಲೆ ನಿಮ್ಮ ಕೈಯಲ್ಲಿರುವ ವಸ್ತುಗಳನ್ನು ಎಸೆಯಿರಿ. ಅಂದರೆ ನೀವು ಜಾಕೆಟ್ ಅಥವಾ ಸ್ಕಾರ್ಫ್ ಅನ್ನು ಧರಿಸುತ್ತಿದ್ದರೆ, ಅದನ್ನು ಆಕ್ರಮಣಕಾರಿ ನಾಯಿಯ ಮೇಲೆ ಎಸೆಯಿರಿ ಇದರಿಂದ ಅದು ನಿಮ್ಮನ್ನು ನೋಡಲು ಸಾಧ್ಯವುಲ್ಲ. ತಕ್ಷಣವೇ ಅಲ್ಲಿಂದ ತಪ್ಪಿಸಿಕೊಳ್ಳಿ.


ನಿಮ್ಮ ಬಳಿ ಜಾಕೆಟ್ ಇಲ್ಲದಿದ್ದರೆ ಸಾಧ್ಯವಾದರೆ ನಾಯಿಯ ಬಾಯಿಯನ್ನು ಹಿಡಿದುಕೊಳ್ಳಿ ಇದರಿಂದ ಅದು ನಿಮ್ಮನ್ನು ಕಚ್ಚಲು ಸಾಧ್ಯವಾಗುವುದಿಲ್ಲ ಎಂದು ಹಾಸನ್ ಸಲಹೆ ನೀಡಿದ್ದಾರೆ. ಹೆಚ್ಚಿನವರಿಗೆ ಇದು ಕಾರ್ಯಸಾಧ್ಯವಾಗದಿರಬಹುದು ಆದ್ದರಿಂದ ನಾಯಿಯ ಕಣ್ಣುಗಳನ್ನು ಮುಚ್ಚಲು ಬಟ್ಟೆಯನ್ನು ಎಸೆಯುವುದು ಉತ್ತಮ ಆಯ್ಕೆಯಾಗಿದೆ.


ನಾಯಿ ದಾಳಿಯಿಂದ ವ್ಯಕ್ತಿಯನ್ನು ಹೇಗೆ ರಕ್ಷಿಸುವುದು?


“ನಾಯಿ ದಾಳಿಯಿಂದ ಯಾರನ್ನಾದರೂ ರಕ್ಷಿಸಲು ಪ್ರಯತ್ನಿಸುವಾಗ ಖಾಲಿ ಕೈಯಲ್ಲಿ ಹೋಗಬೇಡಿ. ಒಂದು ಬಟ್ಟೆಯನ್ನು ತೆಗೆದುಕೊಳ್ಳಿ. ಅದರಿಂದ ನಾಯಿಯನ್ನು ಓಡಿಸಲು ಪ್ರಯತ್ನಿಸಿ. ಜೊತೆಗೆ ನೀರು ಎರಚಿಸರೂ ಸಹ ಕೆಲವು ನಾಯಿಗಳು ಓಡಿಹೋಗುತ್ತದೆ” ಎಂದು ಅವರು ಹೇಳಿದರು. ಮೊದಲು ನಾಯಿಯ ಮೂಗು ಅಥವಾ ಕಣ್ಣುಗಳನ್ನು ಬಟ್ಟೆಯಿಂದ ಮುಚ್ಚಲು ಪ್ರಯತ್ನಿಸಿ ಏಕೆಂದರೆ ಅವುಗಳು ಅದರ ದುರ್ಬಲ ಅಂಶಗಳಾಗಿವೆ. ಅದರ ಮೇಲೆ ನೀರನ್ನು ಎಸೆಯುವ ಮೂಲಕ ನೀವು ಅದನ್ನು ವಿಚಲಿತಗೊಳಿಸಬಹುದು.


ಆಕ್ರಮಣಕಾರಿ ಬೀದಿನಾಯಿಗಳನ್ನು ಎದುರಿಸುವಾಗ ಏನು ತಪ್ಪಿಸಬೇಕು?


ನಿಮ್ಮ ಮೇಲೆ ನಾಯಿ ಆಕ್ರಮಣ ಮಾಡಲು ಮುಂದಾದರೆ ನೀವು ಪ್ಯಾನಿಕ್ ಆಗಬಾರದು. ಅವುಗಳನ್ನೇ ಗುರಾಯಿಸಿ ನೋಡಬೇಡಿ. ಅಷ್ಟೇ ಅಲ್ಲದೆ ಅಲ್ಲಿಂದ ಓಡಬೇಡಿ. ಬುದ್ಧಿವಂತಿಕೆಯನ್ನು ಪ್ರಯತ್ನಿಸಿ ಈ ಮೇಲೆ ಹೇಳಿರುವ ಕೆಲಸಗಳನ್ನು ಮಾಡಿ.


ಇದನ್ನೂ ಓದಿ: asagulla Crime: ರಸಗುಲ್ಲಕ್ಕಾಗಿ ಬಿತ್ತು ಹೆಣ: ರಣರಂಗವಾಯ್ತು ಮದುವೆ ಮನೆ!!


(ಸೂಚನೆ: ಈ ತಂತ್ರಗಳು ಸ್ವರಕ್ಷಣೆಗಾಗಿ ಮಾತ್ರ ಮತ್ತು ನಿರುಪದ್ರವ ಪ್ರಾಣಿಗಳ ಮೇಲೆ ಬಳಸಲಾಗುವುದಿಲ್ಲ/ಬಳಸಬೇಡಿ)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ