ನವ ದೆಹಲಿ: ಸಾವಿರಾರು ಪ್ರಯಾಣಿಕರು ತತ್ಕಾಲ್ ನಲ್ಲಿ ರೈಲ್ವೆ ಟಿಕೆಟ್ ಕಾಯ್ದಿರಿಸಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗುವುದಿಲ್ಲ. ಆದರೆ, ತತ್ಕಾಲ್ ವಿಭಾಗದಲ್ಲಿ ಟ್ರಾವಲ್ ಏಜೆಂಟ್ಗಳು ಹೀಗೆ ರೈಲ್ವೆ ಟಿಕೆಟ್ಗಳನ್ನು ಕಾಯ್ದಿರಿಸುತ್ತಾರೆ ಎಂಬುದರ ಬಗ್ಗೆ ನಿಮಗೆ ಬಹಳಷ್ಟು ಬಾರಿ ಅಚ್ಚರಿಯಾಗಿರಬೇಕಲ್ಲವೇ? 


COMMERCIAL BREAK
SCROLL TO CONTINUE READING

ಆದರೆ ಇದೆಲ್ಲಾ ಕಾರ್ಯಯೋಜಿತ ಎಂದು ಇತ್ತೀಚಿನ ತನಿಖೆಯೊಂದು ಬಹಿರಂಗಪಡಿಸಿದೆ. ಸಿಬಿಐ ನ ಸಾಫ್ಟ್ ವೇರ್ ಪ್ರೋಗ್ರಾಮರ್ ಅಜಯ್ ಗಾರ್ಗ್ ಈ ಅಕ್ರಮ ರೈಲ್ವೆ ಟಿಕೆಟ್ ಬುಕ್ಕಿಂಗ್ ಸಾಫ್ಟ್ ವೀರ್ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದು, ಇದರಿಂದ ಏಜೆಂಟ್ಗಳು ಕೇವಲ ಒಂದೇ ಕ್ಲಿಕ್ನಲ್ಲಿ ನೂರಾರು ರೈಲ್ವೆ ಟಿಕೆಟ್ ಬುಕ್ ಮಾಡಬಹುದಾಗಿದೆ. 


ತತ್ಕಾಲ್ ಟಿಕೆಟ್ ಬುಕ್ಕಿಂಗ್ ದೂರು
ತತ್ಕಾಲ್ ಕೋಟಾದಡಿಯಲ್ಲಿ ಮುಂದಿನ ದಿನದ ಪ್ರಯಾಣಕ್ಕಾಗಿ ಎಸಿ ಟಿಕೆಟ್ ಬುಕ್ಕಿಂಗೆ ಬೆಳಿಗ್ಗೆ 10 ಗಂಟೆಗೆ ಮತ್ತು ನಾನ್ ಎಸಿ ವಿಭಾಗದ ಟಿಕೆಟ್ಗಳಿಗೆ ಬೆಳಿಗ್ಗೆ 11 ಗಂಟೆಗೆ ಬುಕಿಂಗ್ ಆರಂಭವಾಗುತ್ತದೆ. ಈ ಕೋಡಿಯಲ್ಲಿ, ಪ್ರತಿ ಭೋಗಿಯಲ್ಲಿ ನಿರ್ದಿಷ್ಟ ನಿರ್ದಿಷ್ಟ ಸಂಖ್ಯೆಯ ಸೀಟುಗಳನ್ನು ರೈಲ್ವೇಯವರು ತುರ್ತಾಗಿ ಟಿಕೆಟ್ ಅಗತ್ಯವಿರುವ ಪ್ರಯಾಣಿಕರಿಗೆ ಪ್ರೀಮಿಯಂನಲ್ಲಿ ಮಾರಾಟ ಮಾಡಲಾಗುತ್ತದೆ. 


ಆದರೆ ಪ್ರಯಾಣಿಕರ ಸಾಮಾನ್ಯವಾಗಿ ದೂರುವುದೆಂದರೆ, ಪ್ರತಿ ಬಾರಿ ಟಿಕೆಟ್ ತತ್ಕಾಲ್ನಲ್ಲಿ ಟಿಕೆಟ್ ಬುಕ್ ಮಾಡಲು ಹೋದಾಗ ಕೆಲವೇ ನಿಮಿಷಗಳಲ್ಲಿ ಟಿಕೆಟ್ಗಳು ಮಾರಾಟವಾಗಿಬಿಡುತ್ತವೆ. ವೆಬ್ಸೈಟ್ನಲ್ಲಿ ವಿವರಗಳನ್ನು ತುಂಬುವುದರೊಳಗಾಗಿ ಬುಕಿಂಗ್ ತಿರಸ್ಕರಿಸಲ್ಪಡುತ್ತದೆ ಅಥವಾ ನಿರೀಕ್ಷಿತ-ಪಟ್ಟಿ ಮಾಡಿದ ಟಿಕೆಟ್ ಅನ್ನು ಪಡೆದುಕೊಳ್ಳುತ್ತಾರೆ. 


ಮತ್ತೊಂದೆಡೆ ಕೆಲವು ಟ್ರಾವೆಲ್ ಏಜೆಂಟ್ಗಳು ರೈಲ್ವೆ ದರಕ್ಕಿಂತ ಹೆಚ್ಚಿನ ಹಣ ಪಡೆದು ಖಚಿತ ಟಿಕೆಟ್ಗಳನ್ನು ನೀಡುತ್ತಾರೆ. 


ತತ್ಕಾಲ್ ಟಿಕೆಟ್ ಮೀಸಲಾತಿ ವ್ಯವಸ್ಥೆ ನೀತಿ ಬದಲಾವಣೆ
ಗಾರ್ಗ್ ಮತ್ತು ಆತನ ಆಪ್ತ ಅನಿಲ್ ಗುಪ್ತಾ ಈ ಅಕ್ರಮ ಬುಕಿಂಗ್ ಸಾಫ್ಟ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಏಜೆಂಟರಿಗೆ ಭಾರೀ ಬೆಲೆಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. 


ತಂತ್ರಾಂಶದ ಮೂಲಕ, ಗ್ಯಾಗ್ ಏಜೆಂಟರು ಬುಕ್ ಮಾಡಿದ ಟಿಕೆಟ್ಗಳ ಸ್ಟೇಟ್ಮೆಂಟ್ಗಳನ್ನು ಇರಿಸಿಕೊಳ್ಳುವ ಮೂಲಕ ಪ್ರತಿ ಟಿಕೆಟ್ನಲ್ಲಿಯೂ ಹೆಚ್ಚುವರಿಯಾಗಿ ಹಣ ಹೇಳಲು ಆರಂಭಿಸಲಾಯಿತು. 


ಒಮ್ಮೆ ಏಜೆಂಟ್ ಕಂಪ್ಯೂಟರ್ಗಳಲ್ಲಿ ಸ್ಥಾಪಿಸಲಾದ ತಂತ್ರಾಂಶವು ಮರುಕಳಿಸುವ ಪಾವತಿಗಳನ್ನು ಖಚಿತಪಡಿಸಿಕೊಳ್ಳಲು ಗಾರ್ಗ್ನ ಬಳಕೆದಾರ ಹೆಸರು ಮತ್ತು ಪಾಸ್ವರ್ಡ್ ಗಳನ್ನು ಕಾಲಕಾಲಕ್ಕೆ ಬದಲಾಯಿಸಿದ. 


ಗಾರ್ಗ್ ಅವರ ಕಾರ್ಯಾಚರಣೆಗಳನ್ನು ಸುಲಭಗೊಳಿಸಲು ಭಾರತೀಯ ಮತ್ತು ವಿದೇಶಿ ಸರ್ವರ್ಗಳ ಸಂಕೀರ್ಣ ಸರಪಳಿ, ಆನ್ಲೈನ್ ​​ಮುಖವಾಡ ಮತ್ತು ಕ್ರಿಪ್ಟೋಕೂರ್ನ್ಸಿಗಳನ್ನು ಬಳಸಿದರು.


ಈ ಸಾಫ್ಟ್ವೇರ್ ನಿಂದಾಗಿ ತತ್ಕಾಲ್ ಬುಕಿಂಗ್ ಪ್ರಾರಂಭವಾಗುವ ಮೊದಲೇ ಬಳಕೆದಾರರು ತಮ್ಮ ವಿವರಗಳನ್ನು ಭಾರ್ತಿ ಮಾಡಲು ಅವಕಾಶವಿದ್ದು, ಸ್ವಯಂಚಾಲಿತವಾಗಿ IRCTC ಪೋರ್ಟಲ್ ನಲ್ಲಿ ಫೀಡ್ ಆಗುವುದರಿಂದ ಈ ಸಾಫ್ಟ್ವೇರ್ ನಲ್ಲಿ ಪಿಎನ್ಆರ್ ಅತ್ಯಂತ ವೇಗವಾಗಿ ಜನ್ರೀತ್ ಆಗಿ ಟಿಕೆಟ್ ಬುಕ್ ಆಗುವಂತೆ ಮಾಡುತ್ತದೆ. 


ಐಆರ್ಟಿಟಿಸಿ ಕ್ಯಾಪ್ಚಾವನ್ನು ಹಾದುಹೋಗುವ ಮೂಲಕ, ಫಾರ್ಮ್ ಸ್ವಯಂ ತುಂಬುವಿಕೆಯ ಮೂಲಕ, ಯುಎಸ್-ಆಧಾರಿತ ಸರ್ವರ್ನ ಸಹಾಯದಿಂದ ಹಲವು ಲಿಂಕ್ಗಳನ್ನು ಹೊಂದಿರುವ ಅನೇಕ ಐಡಿಗಳೊಂದಿಗೆ ಲಾಗಿನ್ ಮಾಡುವ ಮೂಲಕ ಪ್ರಾಕ್ಸಿ IP ವಿಳಾಸಗಳನ್ನು ಒದಗಿಸುತ್ತದೆ. ಇದು ಬಳಕೆದಾರರಿಗೆ ನಿಯಮಗಳು ಮತ್ತು ನಿಬಂಧನೆಗಳನ್ನೂ ಮೀರಿ ಮೋಸದಿಂದ ಕಂಪ್ಯೂಟರ್ ನೆಟ್ವರ್ಕ್ಗೆ ಅನಧಿಕೃತ ಪ್ರವೇಶವನ್ನು ಪಡೆಯಲು ಅನುಮತಿಸುತ್ತದೆ. 


ಬಿಟ್ಕೊಯ್ನ್ಗಳು, ಹವಾಲಾ ಮಾರ್ಗಗಳ ಬಳಕೆ
ತನ್ನ ಸಿಸ್ಟಮ್ ಅನ್ನು ಬಳಸಿಕೊಂಡು ಟಿಕೆಟ್ಗಳನ್ನು ಬುಕ್ ಮಾಡಿದ ಟ್ರಾವೆಲ್ ಏಜೆಂಟರಿಂದ ಹಣವನ್ನು ಬಿಟ್ಕೋಯಿನ್ಗಳಲ್ಲಿ ಮತ್ತು ಹವಾಲಾ ಚಾನೆಲ್ಗಳ ಮೂಲಕ ಸಂಗ್ರಹಣೆ ಮಾಡಲಾಗುತ್ತಿತ್ತು. ಅಂತ 10 ಏಜೆಂಟರು - ಜಾನ್ಪುರದಿಂದ ಏಳು ಮತ್ತು ಮುಂಬೈಯ ಮೂವರು ಈ ಕಾಯದಲ್ಲಿ ಸಂಪರ್ಕ ಹೊಂದಿರುವುದಾಗಿ ಗುರುತಿಸಲಾಗಿದೆ.


ಗಾರ್ಗ್ 2007 ಮತ್ತು 2011 ರ ನಡುವೆ IRCTC ಯೊಂದಿಗೆ ಕಾರ್ಯನಿರ್ವಹಿಸಿದ್ದರು. 2012 ರಲ್ಲಿ ಸಿಬಿಐಗೆ ಸೇರ್ಪಡೆಯಾದ ನಂತರ ಅವರು ಐಆರ್ಟಿಟಿಸಿ ಟಿಕೆಟ್ ತಂತ್ರಾಂಶದ ದುರ್ಬಲತೆಯನ್ನು ಬಳಸಿಕೊಳ್ಳಲಾರಂಭಿಸಿದರು.


ಸಿಬಿಐ ಗಾರ್ಗ್, ಗುಪ್ತಾ ಅವರನ್ನು ಬಂಧಿಸಿ ತನ್ನ ಕುಟುಂಬ ಸದಸ್ಯರು ಮತ್ತು ಟ್ರಾವೆಲ್ ಏಜೆಂಟರು ಸೇರಿದಂತೆ ಇತರ 13 ಜನರ ವಿರುದ್ಧ ಪ್ರಕರಣ ದಾಖಲಿಸಿದೆ.