ದೆಹಲಿಯಲ್ಲಿ ಪೆಟ್ರೋಲ್ ದರ ಹೆಚ್ಚಳದಿಂದ ಮೋದಿ ಮೆಟ್ರೋ ಸವಾರಿ! ಕಾಂಗ್ರೆಸ್ ವ್ಯಂಗ್ಯ
ಗುರುವಾರದಂದು ಟ್ರಾಫಿಕ್ ಜಾಮ್ ತಪ್ಪಿಸಲು ದೆಹಲಿಯಲ್ಲಿ ಮೆಟ್ರೋ ಸವಾರಿಗೆ ಮೊರೆಹೋಗಿದ್ದ ಪ್ರಧಾನಿ ಮೋದಿ ನಡೆಗೆ ಕಾಂಗ್ರೆಸ್ ವ್ಯಂಗವಾಡಿದೆ.
ನವದೆಹಲಿ: ಗುರುವಾರದಂದು ಟ್ರಾಫಿಕ್ ಜಾಮ್ ತಪ್ಪಿಸಲು ದೆಹಲಿಯಲ್ಲಿ ಮೆಟ್ರೋ ಸವಾರಿಗೆ ಮೊರೆಹೋಗಿದ್ದ ಪ್ರಧಾನಿ ಮೋದಿ ನಡೆಗೆ ಕಾಂಗ್ರೆಸ್ ವ್ಯಂಗವಾಡಿದೆ.
ದೆಹಲಿ ಮೆಟ್ರೋದ ಏರ್ ಪೋರ್ಟ್ ಎಕ್ಷ್ಪ್ರೆಸ್ ಮಾರ್ಗದ ಮೂಲಕ 14 ನಿಮಿಷಗಳ ಪ್ರಯಾಣ ಕೈಗೊಂಡಿದ್ದ ಮೋದಿಗೆ ನಡೆಗೆ ಕಾಂಗ್ರೆಸ್ ಟ್ವಿಟ್ಟರ್ ಮೂಲಕ ಕೀಡಿ ಕಾರಿದೆ. ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ದೆಹಲಿ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡಿಸೇಲ್ ದರಗಳು ಪ್ರಧಾನಿ ಮೋದಿಯವರನ್ನು ಮೆಟ್ರೋದಲ್ಲಿ ಪ್ರಯಾಣಿಸುವಂತೆ ಮಾಡಿದೆ ಅಥವಾ ಇದು ಮತ್ತೊಂದು ಚುನಾವಣಾ ಜುಮ್ಲಾ ಎಂದು ಅದು ವ್ಯಂಗವಾಡಿದೆ.
ಇತ್ತೀಚಿಗೆ ಕಾಂಗ್ರೆಸ್ ಪಕ್ಷವು ಮೋದಿ ಸರ್ಕಾರದಲ್ಲಿ ಹೆಚ್ಚುತ್ತಿರುವ ಬೆಲೆ ಏರಿಕೆಯನ್ನು ವಿರೋಧಿಸಿ ಭಾರತ ಬಂದ್ ನೀಡಿತ್ತು.ಕರ್ನಾಟಕ,ಆಂಧ್ರಪ್ರದೇಶ,ಪಶ್ಚಿಮ ಬಂಗಾಳ ರಾಜ್ಯಗಳು ಈ ಬೆಲೆ ಏರಿಕೆ ಹೊರೆಯನ್ನು ತಪ್ಪಿಸುವ ಸಲುವಾಗಿ ತೆರಿಗೆಯನ್ನು ಕಡಿತಗೊಳಿಸಿದ್ದರು.ಅಲ್ಲದೇ ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ತಗೆದುಕೊಳ್ಳದಿರುವ ಬಗ್ಗೆ ಕಿಡಿಕಾರಿದ್ದರು.