ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ 2020 ರ ಎಲ್ಲಾ 70 ಸ್ಥಾನಗಳಿಗೆ ಆರಂಭಿಕ ಪ್ರವೃತ್ತಿಗಳು ಬಂದಿವೆ. ಬೆಳಿಗ್ಗೆ 10 ಗಂಟೆವರೆಗೆ ಎಎಪಿ 48 ಸ್ಥಾನಗಳಲ್ಲಿ ಮುಂದಿದ್ದರೆ, ಬಿಜೆಪಿ 22 ಸ್ಥಾನಗಳಲ್ಲಿ ಮುಂದಿದೆ. ಕಾಂಗ್ರೆಸ್ ಖಾತೆಯನ್ನೇ ತೆರೆದಿಲ್ಲ. ಬೆಳಿಗ್ಗೆ 10 ಗಂಟೆಯವರೆಗೆ ಇರುವ ಪ್ರವೃತ್ತಿಗಳ ಪ್ರಕಾರ, ದೆಹಲಿಯ ಹೈಪ್ರೊಫೈಲ್ ಕ್ಷೇತ್ರಗಳಲ್ಲಿ ಯಾವ ಕ್ಷೇತ್ರದಲ್ಲಿ, ಯಾವ ಪಕ್ಷ ಮುನ್ನಡೆ ಕಾಯ್ದುಕೊಂಡಿದೆ ಎಂದು ನಾವು ನಿಮಗೆ ಹೇಳುತ್ತಿದ್ದೇವೆ.


COMMERCIAL BREAK
SCROLL TO CONTINUE READING

ನವದೆಹಲಿ ವಿಧಾನಸಭಾ ಸ್ಥಾನದಲ್ಲಿ ಬಿಜೆಪಿಯಿಂದ ಸುನೀಲ್ ಕುಮಾರ್ ಯಾದವ್ ಕಣದಲ್ಲಿದ್ದಾರೆ. ಕಾಂಗ್ರೆಸ್ ರೋಮೇಶ್ ಸಬರ್ವಾಲ್ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಮಾಡಿದೆ. ಅದೇ ಸಮಯದಲ್ಲಿ ದೆಹಲಿ ಮುಖ್ಯಮಂತ್ರಿ ಮತ್ತು ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಮತ್ತೆ ಆಮ್ ಆದ್ಮಿ ಪಕ್ಷದಿಂದ (ಎಎಪಿ) ಕಣದಲ್ಲಿದ್ದಾರೆ. ಇದೀಗ ಅರವಿಂದ್ ಕೇಜ್ರಿವಾಲ್ ಇಲ್ಲಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮತದಾನದ ನಂತರ ಬಂದ ನಿರ್ಗಮನ ಸಮೀಕ್ಷೆ ಬಗ್ಗೆ ಪ್ರತಿಕ್ರಿಯಿಸಿದ್ದ ಸುನಿಲ್ ಯಾದವ್ ದೆಹಲಿಯಲ್ಲಿ ಬಿಜೆಪಿ ಸರ್ಕಾರ ರಚನೆಯಾಗದಿದ್ದರೆ ತಾವು ಎಂದಿಗೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು.


- ಎಎಪಿ ಅಭ್ಯರ್ಥಿ ರಾಘವ್ ಚಾಧಾ ರಾಜಿಂದರ್ ನಗರ ಸ್ಥಾನದಿಂದ ಮುನ್ನಡೆ ಸಾಧಿಸುತ್ತಿದ್ದಾರೆ.


- ಹರಿ ನಗರ ಸ್ಥಾನದಿಂದ ಬಿಜೆಪಿ ಅಭ್ಯರ್ಥಿ ಟಿಜಿಂದರ್ ಪಾಲ್ ಸಿಂಗ್ ಹಿಂದುಳಿದಿದ್ದಾರೆ.


- ಎಎಪಿ ಅಭ್ಯರ್ಥಿ ಅತೀಶಿ ಕಲ್ಕಾಜಿ ವಿಧಾನಸಭಾ ಸ್ಥಾನದಿಂದ ಹಿಂದುಳಿದಿದ್ದಾರೆ.


- ಪಾಟ್‌ಪರ್ಗಂಜ್ ಸ್ಥಾನದಿಂದ ದೆಹಲಿಯ ಉಪಮುಖ್ಯಮಂತ್ರಿ ಮತ್ತು ಎಎಪಿ ಅಭ್ಯರ್ಥಿ ಮನೀಶ್ ಸಿಸೋಡಿಯಾ ಮುನ್ನಡೆ ಸಾಧಿಸುತ್ತಿದ್ದಾರೆ.


- ಮಾಲ್ವಿಯಾ ನಗರ ಸ್ಥಾನದಿಂದ ಎಏಪಿ ಅಭ್ಯರ್ಥಿ ಸೋಮನಾಥ ಭಾರತೀಯ ಮುನ್ನಡೆ ಸಾಧಿಸಿದ್ದಾರೆ.


- ಬಿಜೆಪಿ ಅಭ್ಯರ್ಥಿ ವಿಜೇಂದರ್ ಗುಪ್ತಾ ರೋಹಿಣಿ ಸ್ಥಾನದಿಂದ ಹಿಂದುಳಿದಿದ್ದಾರೆ.


- ತಮ್ಮ ಹೇಳಿಕೆಗಳ ಬಗ್ಗೆ ನಿರಂತರ ಚರ್ಚೆಯಲ್ಲಿರುವ ಬಿಜೆಪಿ ಅಭ್ಯರ್ಥಿ ಕಪಿಲ್ ಮಿಶ್ರಾ ಅವರು ಮಾಡೆಲ್ ಟೌನ್‌ನಿಂದ ಸ್ಪರ್ಧಿಸಿದರು. ಅವರು ಈ ಸ್ಥಾನದಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ.


- ಕಾಂಗ್ರೆಸ್ ಅಭ್ಯರ್ಥಿ ಅಲ್ಕಾ ಲಂಬಾ ಚಾಂದನಿ ಚೌಕ್‌ನಿಂದ ಹಿಂದುಳಿದಿದ್ದಾರೆ. ಮತದಾನದ ದಿನ ಎಎಪಿ ಕಾರ್ಯಕರ್ತನೊಬ್ಬನಿಗೆ ಕಪಾಳಮೋಕ್ಷ ಮಾಡಲು ಅವರು ಪ್ರಯತ್ನಿಸಿದರು.


- ಗ್ರೇಟರ್ ಕೈಲಾಶ್‌ನಿಂದ, ಎಎಪಿ ಅಭ್ಯರ್ಥಿ ಸೌರಭ್ ಭರದ್ವಾಜ್‌ ಮುಂದಿದ್ದೀರಿ.


- ಬಿಜೆಪಿ ಅಭ್ಯರ್ಥಿ ಓಂ ಪ್ರಕಾಶ್ ಶರ್ಮಾ ವಿಶ್ವಾಸ್ ನಗರ ಸ್ಥಾನದಿಂದ ಮುನ್ನಡೆ ಸಾಧಿಸುತ್ತಿದ್ದಾರೆ.