ನವದೆಹಲಿ: ಹಣಕಾಸು ಸಚಿವ ಪಿಯುಶ್ ಗೋಯಲ್, ನರೇಂದ್ರ ಮೋದಿ ಸರ್ಕಾರದ ಕೊನೆಯ ಬಜೆಟ್ ಮಂಡನೆ ಮಾಡುತ್ತಿದ್ದು, ಚುನಾವಣಾಪೂರ್ವ ಬಜೆಟ್ ಇದಾಗಿರುವುದರಿಂದ ನಿರೀಕ್ಷೆಯಂತೆ ಎಲ್ಲ ವರ್ಗಕ್ಕೂ ಕೊಡುಗೆ ನೀಡುತ್ತಿದ್ದಾರೆ. ಬಜೆಟ್ ಮಂಡನೆ ಆರಂಭಿಸಿದ ಪಿಯೂಷ್ ಗೋಯಲ್, ಕಳೆದ ಐದು ವರ್ಷಗಳಲ್ಲಿ ಭಾರತ ಜಾಗತಿಕವಾಗಿ ಪ್ರಕಾಶಿಸುತ್ತಿದೆ. ಕಳೆದ ಸರ್ಕಾರಗಳಿಗೆ ಹೋಲಿಕೆ ಮಾಡಿದರೆ ಪ್ರಸಕ್ತ ಸರ್ಕಾರ ಹಣದುಬ್ಬರ ನಿಯಂತ್ರಣ ಮಾಡಿದೆ. ಜಿಡಿಪಿಯಲ್ಲಿ ಜಗತ್ತಿನ ಗಮನ ಸೆಳೆದಿದೆ. ಆರ್ಥಿಕ ವಲಯದಲ್ಲಿ ಭಾರತ ಆರನೇ ಸ್ಥಾನದಲ್ಲಿದೆ. ನರೇಂದ್ರ ಮೋದಿ ನೇತೃತ್ವದಲ್ಲಿ ಪಾರದರ್ಶಕ ಆಡಳಿತ ನೀಡಿದ್ದೇವೆ. ನಾವು 2022 ರ ಹೊತ್ತಿಗೆ ನವ ಭಾರತವನ್ನು ರಚಿಸುತ್ತೇವೆ ಎಂದು ಘೋಷಿಸಿದರು. 5 ಲಕ್ಷದವರೆಗೂ ತೆರಿಗೆ ವಿನಾಯಿತಿ ಘೋಷಿಸಿದರು.


COMMERCIAL BREAK
SCROLL TO CONTINUE READING

ಮಧ್ಯಂತರ ಬಜೆಟ್ 2019ರ ಹೈಲೈಟ್ಸ್ ಇಲ್ಲಿದೆ:


  • ಐದು ವರ್ಷಗಳಲ್ಲಿ ಭಾರತ ಜಾಗತಿಕವಾಗಿ ಪ್ರಕಾಶಿಸುತ್ತಿದೆ. 2022ರ ಹೊತ್ತಿಗೆ ನವ ಭಾರತ ನಿರ್ಮಾಣ

  • ನಾವು ಶೀಘ್ರವಾಗಿ ಆರ್ಥಿಕ ಅಭಿವೃದ್ಧಿ ಕಾಣುತ್ತಿರುವ ಆರ್ಥಿಕತೆಗಳಲ್ಲಿ ವಿಶ್ವದ ಆರನೇ ಸ್ಥಾನದಲ್ಲಿದ್ದೇವೆ.

  • ಸಕ್ಕರೆ ಕಾರ್ಖಾನೆಗಳಿಗೆ ಮತ್ತೊಂದು ಪ್ಯಾಕೇಜ್ ನೀಡಲು ಕೇಂದ್ರ ಸರ್ಕಾರದ ಚಿಂತನೆ. ಎಥೆನಾಲ್ ಉತ್ಪಾದನೆಗೆ ಸಕ್ಕರೆ ಕಾರ್ಖಾನೆಗಳಿಗೆ 10 ರಿಂದ 12 ಸಾವಿರ ಕೋಟಿ ರೂ. ಸಾಲ ನೀಡಲು ಕೇಂದ್ರದ ಚಿಂತನೆ.

  • ದಿವಾಳಿ ಹಂತದಲ್ಲಿದ್ದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಪುನಶ್ಚೇತನ.

  • ಹರ್ಯಾಣದಲ್ಲಿ 22 ನೇ ಏಮ್ಸ್ ಆಸ್ಪತ್ರೆ ನಿರ್ಮಾಣ5 ಲಕ್ಷದವರೆಗೂ ತೆರಿಗೆ ವಿನಾಯಿತಿ

  • ರಾಜ್ಯಗಳ ತೆರಿಗೆ ಪ್ರಮಾಣ ಶೇಕಡ 32 ರಿಂದ ಶೇಕಡ 42 ಕ್ಕೆ ಏರಿಕೆ.

  • ರೈತರ ಕಲ್ಯಾಣಕ್ಕಾಗಿ ಅವರ ಆದಾಯವನ್ನು ದ್ವಿಗುಣಗೊಳಿಸಿ ಮತ್ತು 22 ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ್ದೇವೆ

  • ಹೊಸ ಪೆನ್ಷನ್ ಸ್ಕೀಂ ನಿಯಮ ಸಡಲಿಕೆ

  • ಉಡಾನ್ ಯೋಜನೆ ಅಡಿಯಲ್ಲಿ ದೇಶಿಯ ವಿಮಾನ ಹಾರಾಟಕ್ಕೆ ಒತ್ತು

  • ಕೊಲ್ಕತ್ತಾದಿಂದ ವಾರಾಣಾಸಿಗೆ ಜಲಮಾರ್ಗ ನಿರ್ಮಾಣ

  • ತೆರಿಗೆ ಪಾವತಿಗೆ 24 ಗಂಟೆ ಆನ್ಲೈನ್ ಸೇವೆ 

  • ಅಂಗನವಾಡಿ ಕಾರ್ಯಕರ್ತರಿಗೆ ಶೇ. 50 ಆದಾಯ ಹೆಚ್ಚಳ 

  • ರೈತರ ನೆರವಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಘೋಷಣೆ. ರೈತರ ಬ್ಯಾಂಕ್ ಖಾತೆಗೆ ನೇರವಾಗಿ 6,000 ರೂ. ವರ್ಗಾವಣೆ.

  • OROP ಯೋಜನೆಗೆ 35 ಸಾವಿರ ಕೋಟಿ ರೂಪಾಯಿ ಮೀಸಲು.

  • ಶೀಘ್ರದಲ್ಲೇ ಏಳನೇ ವೇತನ ಆಯೋಗದ ಶಿಫಾರಸ್ಸು ಜಾರಿ.

  • ಮೇಕ್ ಇನ್ ಇಂಡಿಯಾ ಅಡಿ 12 ಲಕ್ಷ ಯುವಕರಿಗೆ ಉದ್ಯೋಗ.

  • ಮೊಬೈಲ್ ಡೇಟಾ ಬಳಕೆಯಲ್ಲಿ 50 ಪಟ್ಟು ಹೆಚ್ಚಳ.

  • ಗ್ರಾಮಗಳು ಈಗ ಡಿಜಿಟಲ್ ಗ್ರಾಮಗಳಾಗಿ ಬದಲಾಗಿವೆ.