ನವದೆಹಲಿ: ಹಿಜಾಬ್ ವಿವಾದದ ಕುರಿತು ಸೋಮವಾರ ಪ್ರತಿಕ್ರಿಯಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಇಚ್ಛೆಯ ಉಡುಪು ಧರಿಸುವ ಹಕ್ಕಿದೆ ಎಂದು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

"ಯಾರಾದರೂ ತಲೆಯ ಮೇಲೆ ಸ್ಕಾರ್ಫ್ ಅಥವಾ ಹಣೆಯ ಮೇಲೆ ಶ್ರೀಗಂಧದ ಗುರುತು ಹಾಕಿದರೆ, ಅದು ವಿವಾದಾತ್ಮಕ ವಿಷಯವಲ್ಲ ಎಂದು ನಾನು ನಂಬುತ್ತೇನೆ.ಪ್ರತಿಯೊಬ್ಬ ವ್ಯಕ್ತಿಗೂ ಅವರು ಬಯಸಿದ್ದನ್ನು ಧರಿಸುವ ಹಕ್ಕಿದೆ. ಅದಕ್ಕೆ ನಮ್ಮದು ಯಾವುದೇ ಹಸ್ತಕ್ಷೇಪವಿಲ್ಲ.ಅಂತಹ ವಿವಾದದ ಯಾವುದೇ ಘಟನೆಯನ್ನು ನೀವು ನೋಡಿಲ್ಲ. ಬಿಹಾರದಲ್ಲಿ ಇದು ಚರ್ಚೆಯ ವಿಷಯವಾಗಲು ಸಾಧ್ಯವಿಲ್ಲ," ಎಂದು ಅವರು ಹೇಳಿದರು.


ಇದನ್ನೂ ಓದಿ: Covid-19 Latest Update: ಪಶ್ಚಿಮ ಬಂಗಾಳದಲ್ಲಿ ಕೊರೊನಾ ಮಹಾ ವಿಸ್ಫೋಟ, 24 ಗಂಟೆಗಳಲ್ಲಿ 24 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆ, 18 ಸಾವು


ಹಿಜಾಬ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್, ದೇಶವು ಅಂತರ್ಯುದ್ಧದತ್ತ ಸಾಗುತ್ತಿದೆ ಮತ್ತು ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಆಡಳಿತಾರೂಢ ಬಿಜೆಪಿ ಕಾರಣ ಎಂದು ಹೇಳಿದ್ದಾರೆ.


ಇದನ್ನೂ ಓದಿ: Zameer Ahmed : ಕೆಪಿಸಿಸಿಯಿಂದ ಶಾಸಕ ಜಮೀರ್ ಅಹಮದ್ ಗೆ ಬಿಗ್ ಶಾಕ್!


"ಪ್ರಧಾನಿ ನರೇಂದ್ರ ಮೋದಿ ಅವರು ಹಣದುಬ್ಬರ, ನಿರುದ್ಯೋಗ, ಬಡತನ ಮತ್ತು ಇತರ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ.ಅವರು ಯಾವಾಗಲೂ ಮಂದಿರ-ಮಸೀದಿ, ಗಲಭೆ ಮತ್ತು ಧರ್ಮಗಳ ಬಗ್ಗೆ ಮಾತನಾಡುತ್ತಾರೆ.ಬಿಜೆಪಿ ಮತ್ತು ನರೇಂದ್ರ ಮೋದಿಯವರ ಪ್ರಚಾರದಿಂದ ದೇಶದ ಜನರು ಬೇಸತ್ತಿದ್ದಾರೆ," ಎಂದು ಅವರು ಹೇಳಿದರು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.