ಶಿಮ್ಲಾ: ಹಿಮಾಚಲ ಪ್ರದೇಶದ ಸ್ಟ್ರಾಂಗ್ ರೂಂನ ಸಿ.ಟಿ.ಟಿ.ವಿಯಲ್ಲಿ ಕೊಠಡಿಯೊಳಗೆ ಹೊಗೆ ಅನ್ನು ಕಂಡ ನಂತರ, ಸೋಮವಾರ ಬೆಳಗ್ಗೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಚುನಾವಣಾ ಅಧಿಕಾರಿಗಳು ಸ್ಟ್ರಾಂಗ್ ರೂಂ ತೆರೆದರು. ಸ್ಟ್ರಾಂಗ್ ರೂಂನಲ್ಲಿ ಬೆಂಕಿ ಕಾಣಿಸಿಕೊಳ್ಳುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳವನ್ನೂ ಅಲ್ಲಿಗೆ ಕರೆಸಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಸ್ಟ್ರಾಂಗ್ ರೂಂ ತೆರೆದ ಬಳಿಕ ಅಲ್ಲಿ ಯಾವುದೇ ರೀತಿಯ ಬೆಂಕಿ ಅಥವಾ ಹೊಗೆ ಇರಲಿಲ್ಲ. ವಾಸ್ತವವಾಗಿ, ಸಿಸಿಟಿವಿಗಳು ನೈಟ್ ಮೂಡ್ ವಿಷನ್ ನಲ್ಲಿದ್ದವು. ಅಲ್ಲದೆ ಸ್ಟ್ರಾಂಗ್ ರೂಂನ ಒಂದು ಮೂಲೆಯಲ್ಲಿ ಹರಡಿದ್ದ ಧೂಳಿನ ಕಣಗಳ ಕಾರಣದಿಂದಾಗಿ ಅದು ಹೊಗೆಯಂತೆ ಕಾಣುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.


ಬಳಿಕ ಸಿಸಿಟಿವಿ ಸೆಟ್ಟಿಂಗ್ ಅನ್ನು ಬದಲಾಯಿಸಿ, ಸ್ಟ್ರಾಂಗ್ ರೂಂ ಅನ್ನು ಮುಚ್ಚಲಾಯಿತು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.


ಇದು ಕಿನ್ನೌರ್ ಜಿಲ್ಲೆಯ ಮುಖ್ಯ ಕೇಂದ್ರವಾಗಿದೆ. ಬಚತ್ ಭವನ್ ನಲ್ಲಿ ಸ್ಟ್ರಾಂಗ್ ರೂಂ ಇದ್ದು, ಇದರಲ್ಲಿ ಮಂದಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕಿನ್ನೌರ್ ವಿಧಾನಸಭಾ ಕ್ಷೇತ್ರದ 126 ಮತದಾನ ಕೇಂದ್ರಗಳ 252 ಎಲೆಕ್ಟ್ರಾನಿಕ್ ಮತದಾನ ಯಂತ್ರಗಳನ್ನು(ಇವಿಎಂ) ಇಡಲಾಗಿದೆ.