ಇತ್ತೀಚೆಗೆ ಭಾರತದ ಷೇರು ಮಾರುಕಟ್ಟೆಯಲ್ಲಿ ಕುಸಿತ ಕಂಡುಬಂದಿದ್ದು, ಇದಕ್ಕೆ ಪೂರಕ ಎನ್ನುವಂತೆ ಈಗ ಹಿಂಡನ್ ಬರ್ಗ್ ರಿಸರ್ಚ್ ಸಂಸ್ಥೆ ಬಹಿರಂಗಪಡಿಸಿರುವ ವರದಿಯಲ್ಲಿ ಅದಾನಿ ಗ್ರೂಪ್ ಹಾಗೂ ಭಾರತೀಯ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾಗಿರುವ ಸೆಬಿ ಹೆಸರು ಇದರಲ್ಲಿ ತಳುಕು ಹಾಕಿಕೊಂಡಿರುವುದು ಶೇರು ಮಾರುಕಟ್ಟೆಯಲ್ಲಿ ಹೊಸ ಬಿರುಗಾಳಿಯನ್ನು ಎಬ್ಬಿಸಿದೆ.


COMMERCIAL BREAK
SCROLL TO CONTINUE READING

ಸೆಬಿಯ ಮುಖ್ಯಸ್ಥೆ ಮಾಧಬಿ ಪುರಿ ಬುಚ್ ಹಾಗೂ ಅವರ ಪತಿ ಧವಲ್ ಬುಚ್ ಅವರು ಅದಾನಿ ಸಮೂಹದ ಜೊತೆಗೆ ನಂಟು ಹೊಂದಿದ್ದಾರೆ ಎಂದು ಹಿಂಡೆನ್‌ಬರ್ಗ್ ರಿಸರ್ಚ್‌ ಆರೋಪಿಸಿದೆ.ಈ ಆರೋಪಗಳನ್ನು ಅವರು ಅಲ್ಲಗಳೆದರೂ ಕೂಡ ಇದು ಈಗ ಶೇರು ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬಿರಿದೆ.ಆಗಸ್ಟ್ 12 ರ ಬೆಳಿಗ್ಗೆ, ಅದಾನಿ ಗ್ರೂಪ್‌ನ ಷೇರುಗಳು ಶೇ 7% ರಷ್ಟು ಕುಸಿದಿವೆ.ದಿನದ ಅಂತ್ಯದ ವೇಳೆಗೆ ಷೇರುಗಳು ಸಣ್ಣ ಪ್ರಮಾಣದಲ್ಲಿ ಚೇತರಿಸಿಕೊಂಡಿದ್ದರು ಸಹ ಇದು ಹೂಡಿಕೆದಾರರ ವಿಶ್ವಾಸವನ್ನು ಗಳಿಸುವಲ್ಲಿ ವಿಫಲವಾಗಿವೆ.ಇದರಿಂದಾಗಿ 530 ಬಿಲಿಯನ್ ರೂ.ಗಳಷ್ಟು ನಷ್ಟವಾಗಿದೆ ಎನ್ನಲಾಗಿದೆ. ಇದನ್ನು ವಿಸ್ತೃತವಾಗಿ ನೋಡಿದಾಗ ಅದಾನಿ ಗ್ರೂಪ್ ನ 10 ಶೇರುಗಳಿಗೆ 16.7 ಟ್ರಿಲಿಯನ್ ಅಥವಾ ಸುಮಾರು $198.89 ಬಿಲಿಯನ್ ನಷ್ಟು ನಷ್ಟವಾಗಿದೆ ಎನ್ನಲಾಗಿದೆ.


ಇದನ್ನೂ ಓದಿ: ಭೂಕುಸಿತ ತಡೆಗೆ ಶೀಘ್ರವೇ ಹೊಸ ನೀತಿ ಜಾರಿ-ಸಚಿವ ಕೃಷ್ಣ ಬೈರೇಗೌಡ


ಅದಾನಿ ಸಮೂಹದ ಕುರಿತಾಗಿ ಹಿಂಡೆನ್‌ಬರ್ಗ್ ರಿಸರ್ಚ್ ನೀಡಿರುವ ವರದಿ ಕೋಲಾಹಲ ಎಬ್ಬಿಸಿರುವ ನಡುವೆಯೇ ಅರ್ಥಶಾಸ್ತ್ರಜ್ಞ ಪ್ರೊ.ವಿಕಾಸ್ ಸಿಂಗ್ ಅವರು ಭವಿಷ್ಯದ ಬಿಕ್ಕಟ್ಟುಗಳಿಂದ ಸಣ್ಣ ಹೂಡಿಕೆದಾರರನ್ನು ರಕ್ಷಿಸಲು ಹಲವು ಮಾರ್ಗೋಪಾಯಗಳನ್ನು ಇಲ್ಲಿ ವಿವರಿಸಿದ್ದಾರೆ.


ಪೂರ್ವಭಾವಿ ಎಚ್ಚರಿಕೆ ವ್ಯವಸ್ಥೆ: ಮಾರುಕಟ್ಟೆಯಲ್ಲಿನ ಅಕ್ರಮಗಳನ್ನು ಗುರುತಿಸುವ ನಿಟ್ಟಿನಲ್ಲಿ ಪೂರ್ವಭಾವಿ ವಿಚಾರಣೆ


ವರ್ಧಿತ ಬಹಿರಂಗಪಡಿಸುವಿಕೆಯ ಅವಶ್ಯಕತೆಗಳು: ಪಟ್ಟಿಮಾಡಿದ ಕಂಪನಿಗಳಿಂದ ಹೆಚ್ಚು ವಿವರವಾದ ಮತ್ತು ಪಾರದರ್ಶಕ ಹಣಕಾಸು ವರದಿಯನ್ನು ಕಡ್ಡಾಯಗೊಳಿಸುವುದು.


ಸ್ವತಂತ್ರ ಲೆಕ್ಕ ಪರಿಶೀಲನೆ: ಲೆಕ್ಕಪರಿಶೋಧಕರ ಪಾತ್ರವನ್ನು ಬಲಪಡಿಸುವುದು ಮತ್ತು ದುಷ್ಕೃತ್ಯಕ್ಕಾಗಿ ಕಠಿಣ ದಂಡವನ್ನು ವಿಧಿಸುವುದು.


ಹೂಡಿಕೆದಾರರ ಶಿಕ್ಷಣ ಮತ್ತು ಜಾಗೃತಿ: ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೂಡಿಕೆದಾರರಿಗೆ ಆರ್ಥಿಕ ಸಾಕ್ಷರತೆಯೊಂದಿಗೆ ಅಧಿಕಾರ ನೀಡುವುದು.


ಹೂಡಿಕೆದಾರರ ಪರಿಹಾರ ನಿಧಿಗಳು: ವಂಚನೆ ಅಥವಾ ಮಾರುಕಟ್ಟೆ ಕುಶಲತೆಯ ಪ್ರಕರಣಗಳಲ್ಲಿ ಹೂಡಿಕೆದಾರರನ್ನು ಸರಿದೂಗಿಸಲು ಕಾರ್ಯವಿಧಾನವನ್ನು ಸ್ಥಾಪಿಸುವುದು


ಬಲವರ್ಧಿತ ನಿಯಂತ್ರಕ ಅಧಿಕಾರಗಳು: ಮಾರುಕಟ್ಟೆಯ ದುಷ್ಕೃತ್ಯವನ್ನು ತನಿಖೆ ಮಾಡಲು ಮತ್ತು ದಂಡ ವಿಧಿಸಲು ನಿಯಂತ್ರಕ ಸಂಸ್ಥೆಗಳಿಗೆ ವ್ಯಾಪಕ ಅಧಿಕಾರವನ್ನು ನೀಡುವುದು.


ಮಾರುಕಟ್ಟೆ ನಿರ್ವಹಣಾ ವ್ಯವಸ್ಥೆ : ಹೂಡಿಕೆದಾರರ ಭೀತಿಯನ್ನು ಕಡಿಮೆ ಮಾಡಲು ಮಾರುಕಟ್ಟೆ ಬಿಕ್ಕಟ್ಟುಗಳನ್ನು ನಿಭಾಯಿಸಲು ಸ್ಪಷ್ಟ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸುವುದು.


ಸೆಬಿ ಅಧ್ಯಕ್ಷರ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ:


ಸೆಬಿ ಅಧ್ಯಕ್ಷೆ ಮಾಧಬಿ ಬುಚ್ ವಿರುದ್ಧದ ಆರೋಪವನ್ನು ಕಾಂಗ್ರೆಸ್ ಉಲ್ಲೇಖಿಸಿ ಬಂಡವಾಳ ಮಾರುಕಟ್ಟೆ ನಿಯಂತ್ರಕ ಮುಖ್ಯಸ್ಥರಾಗಿ ಅವರ ಮುಂದುವರಿಕೆ ಸಮರ್ಥನೀಯವಲ್ಲ ಎಂದು ಹೇಳಿದೆ.ಬಚ್ ಅವರು ರಾಜೀನಾಮೆ ನೀಡಬೇಕು ಮತ್ತು ಅದಾನಿ ಮೆಗಾ ಹಗರಣದ ಕುರಿತು ಸಂಪೂರ್ಣ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಹೇಳಿದೆ.


ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂವಹನಗಳ ಉಸ್ತುವಾರಿ ಜೈರಾಮ್ ರಮೇಶ್ ಅವರು ದಿ ಮಾರ್ನಿಂಗ್ ಕಾಂಟೆಕ್ಸ್ಟ್‌ನ ಲೇಖನವನ್ನು ಉಲ್ಲೇಖಿಸಿ ಇದು ಬುಚ್ ಅವರ ಹಿತಾಸಕ್ತಿ ಸಂಘರ್ಷಗಳ ಸಮಸ್ಯೆಗಳನ್ನು ಎತ್ತುತ್ತದೆ ಎಂದು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.