ಅಲೀಗಢ: ಹಿಂದೂ-ಮುಸ್ಲಿಂ ಬಾಂಧ್ಯವದ ಸಂಕೇತವಾಗಿರುವ ಅಲಿಗಢದ ಮದರಸಾ ಜಗತ್ತಿಗೆ ಒಂದು ಉದಾಹರಣೆಯಾಗಿದೆ. ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಪತ್ನಿ ಸಲ್ಮಾ ಅನ್ಸಾರಿ ಅಲನೂರ್ ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿ ನಡೆಸುತ್ತಿರುವ ಈ ಮದರಸಾದಲ್ಲಿ ಹಿಂದೂ ಮತ್ತು ಮುಸ್ಲಿಂ ಮಕ್ಕಳು ಒಂದೇ ಕೊಠಡಿಯಲ್ಲಿ ಪೂಜೆ ಸಲ್ಲಿಸಿ ಮತ್ತು ನಮಾಜ್ ಮಾಡುತ್ತಾರೆ. ಈ ಮದರಸಾದ ಹೆಸರು "ಚಾಚಾ ನೆಹರು ಮದರಸಾ".


COMMERCIAL BREAK
SCROLL TO CONTINUE READING

ಚಾಚಾ ನೆಹರು ಮದರಸಾದಲ್ಲಿ ಹಿಂದೂ-ಮುಸ್ಲಿಂ ಧರ್ಮದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಎರಡೂ ಧರ್ಮದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮದರಸಾದಲ್ಲಿ ದೇವಸ್ಥಾನ ಮತ್ತು ಮಸೀದಿ ನಿರ್ಮಾಣಕ್ಕೆ ಸಲ್ಮಾ ಅನ್ಸಾರಿ ಮುಂದಾಗಿದ್ದಾರೆ. ಈ ಮದರಸಾದಲ್ಲಿ 4 ಸಾವಿರ ವಿದ್ಯಾರ್ಥಿಗಳು ಅಭ್ಯಾಸ ಮಾಡಿದ್ದಾರೆ.


ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಲ್ಮಾ ಅನ್ಸಾರಿ, ನಮ್ಮ ಮದರಸಾದಲ್ಲಿ ಹಿಂದೂ-ಮುಸ್ಲಿಂ ಎರಡೂ ಧರ್ಮದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಪ್ರಾರ್ಥನೆಗಾಗಿ ದೇವಾಲಯಕ್ಕೋ ಅಥವಾ ಮಸೀದಿಗೋ ಹೋದಾಗ ಅಹಿತಕರ ಘಟನೆಗಳು ನಡೆದರೆ ಅದಕ್ಕೆ ನಾವು ಜವಾಬ್ದಾರರಾಗುತ್ತೇವೆ. ಹಾಗಾಗಿ ಮಕ್ಕಳ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಮದರಸಾದ ಒಳಗೇ ಮಸೀದಿ ಹಾಗೂ ದೇಗುಲ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.



ಚಾಚಾ ನೆಹರು ಮದರಸಾದಲ್ಲಿ ಪ್ರಸ್ತುತ ಒಂದೇ ಕೋಣೆಯಲ್ಲಿ, ಹಿಂದೂ ಮಕ್ಕಳಿಗಾಗಿ ಸರಸ್ವತಿಯ ಪ್ರತಿಮೆಯೊಂದಿಗೆ ಹನುಮಾನ್ ಮತ್ತು ಶಿವನ ಚಿತ್ರವನ್ನು ಇರಿಸಿ ಪೂಜೆಗೆ ಅವಕಾಶ ಕಲ್ಪಿಸಲಾಗಿದೆ. ಅದೇ ಕೊಠಡಿಯಲ್ಲಿ ಮುಸ್ಲಿಂ ಮಕ್ಕಳು ಕುರಾನ್ ಓದುತ್ತಾರೆ. ಸೆಮಿನರಿ ಕ್ಯಾಂಪಸ್‌ನಲ್ಲಿ ದೇವಾಲಯ ಮತ್ತು ಮಸೀದಿಯನ್ನು ನಿರ್ಮಿಸುವವರೆಗೆ ಮಕ್ಕಳು ಈ ಕೋಣೆಯಲ್ಲೇ ಪೂಜೆ ಸಲ್ಲಿಸುತ್ತಾರೆ ಮತ್ತು ನಮಾಜ್ ಓದುತ್ತಾರೆ.


ಜೀ ನ್ಯೂಸ್ ಚಾಚಾ ನೆಹರು ಮದರಸಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಮದರಸಾದಲ್ಲಿ ಕೋಮು ಸೌಹಾರ್ದತೆಯ ವಾತಾವರಣ ಕಂಡು ಬಂದಿತು. ಒಂದು ಕಡೆ ಹಿಂದೂ ಮಕ್ಕಳು ದೀಪ ಬೆಳಗಿಸಿ ಸರಸ್ವತಿಯನ್ನು ಪೂಜಿಸುತ್ತಿದ್ದರು ಮತ್ತು ಮತ್ತೊಂದೆಡೆ ಮುಸ್ಲಿಂ ಮಕ್ಕಳು ನಮಾಜ್ ಪ್ರಾರ್ಥನೆಯಲ್ಲಿ ತೊಡಗಿದ್ದರು. ಈ ವ್ಯವಸ್ಥೆಯಿಂದ ಮಕ್ಕಳು ಕೂಡ ಸಂತೋಷವಾಗಿದ್ದಾರೆ.