72 ವರ್ಷಗಳ ನಂತರ ಸಾರ್ವಜನಿಕರಿಗೆ ಮುಕ್ತವಾದ ಪಾಕ್ ಹಿಂದೂ ದೇವಾಲಯ
ಪಾಕಿಸ್ತಾನದ ಸಿಯಾಲ್ ಕೋಟ ನಲ್ಲಿರುವ ಸಾವಿರ ವರ್ಷಗಳಷ್ಟು ಪುರಾತನವಾದ ಹಿಂದೂ ದೇವಾಲಯವನ್ನು ಈಗ 72 ವರ್ಷದ ನಂತರ ಮತ್ತೆ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ
ನವದೆಹಲಿ: ಪಾಕಿಸ್ತಾನದ ಸಿಯಾಲ್ ಕೋಟ ನಲ್ಲಿರುವ ಸಾವಿರ ವರ್ಷಗಳಷ್ಟು ಪುರಾತನವಾದ ಹಿಂದೂ ದೇವಾಲಯವನ್ನು ಈಗ 72 ವರ್ಷದ ನಂತರ ಮತ್ತೆ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ
ಸರ್ದಾರ್ ತೇಜ ಸಿಂಗ್ ನಿರ್ಮಿಸಿದ ಶಾವಾಲಾ ತೇಜ ಸಿಂಗ್ ದೇವಾಲಯವನ್ನು ಭಾರತ-ಪಾಕ್ ವಿಭಜನೆಯ ಸಮಯದಲ್ಲಿ ಮುಚ್ಚಲಾಯಿತು. 1992 ರಲ್ಲಿ ಹಿಂದುಗಳು ಈ ದೇವಾಲಯಕ್ಕೆ ಭೇಟಿ ಮಾಡುವುದನ್ನು ಸ್ಥಗಿತಗೊಳಿಸಿದರು. ಆಗ ಭಾರತದಲ್ಲಿ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ ನಂತರ ಇಲ್ಲಿಗೆ ಜನರು ಭೇಟಿ ನೀದುವುದನ್ನು ನಿಲ್ಲಿಸಿದರು.
ಪ್ರಧಾನಿ ಇಮ್ರಾನ್ ಖಾನ್ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಮಾ ಸುದ್ದಿ ವರದಿ ಮಾಡಿದೆ."ಜನರು ಯಾವುದೇ ಸಮಯದಲ್ಲಿ ಭೇಟಿ ನೀಡಲು ಮುಕ್ತರಾಗಿದ್ದಾರೆ" ಎಂದು ಜಿಲ್ಲಾಧಿಕಾರಿ ಬಿಲಾಲ್ ಹೈದರ್ ಹೇಳಿದರು.ದೇವಾಲಯದ ಸಂರಕ್ಷಣೆ ಮತ್ತು ಪುನಃಸ್ಥಾಪಿಸುವ ಕಾರ್ಯ ಕೂಡ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಸರ್ಕಾರ ತಿಳಿಸಿದೆ.