ನವದೆಹಲಿ: ರಾಜ್ಯಸಭಾ ಸದಸ್ಯರಾಗಿ ಮನಮೋಹನ್ ಸಿಂಗ್ ಅವರ ಸುಮಾರು 30 ವರ್ಷಗಳ ಅಧಿಕಾರಾವಧಿ ಶುಕ್ರವಾರ ಮುಕ್ತಾಯಗೊಂಡಿದ್ದರಿಂದ ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಎಚ್‌.ಡಿ ದೇವೇಗೌಡ ತುಮಕೂರು ಕ್ಷೇತ್ರದಿಂದ ಸೋತಿದ್ದರಿಂದ, ಮುಂಬರುವ ಬಜೆಟ್ ಅಧಿವೇಶನದಲ್ಲಿ ಯಾವುದೇ ಮಾಜಿ ಪ್ರಧಾನಿ ಹಾಜರಾಗುವುದಿಲ್ಲ.


COMMERCIAL BREAK
SCROLL TO CONTINUE READING

ಕೇಂದ್ರದಲ್ಲಿ ಹೊಸ ಸರಕಾರದ ರಚನೆ ನಂತರ ಸಂಸತ್ತಿನ ಮೊದಲ ಬಜೆಟ್ ಅಧಿವೇಶನವು ಜೂನ್ 17 ರಂದು ಆರಂಭವಾಗಲಿದೆ.ಜೂನ್ 1996 ರಿಂದ 1997 ರ ಏಪ್ರಿಲ್ ವರೆಗೆ ಭಾರತದ 11 ನೇ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ದೇವೇಗೌಡ, ತುಮಕೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಜಿ.ಎಸ್ ಬಸವರಾಜ್ ವಿರುದ್ಧ 13,000 ಮತಗಳಿಂದ ಸೋಲನ್ನು ಅನುಭವಿಸಿದ್ದರು.


ದೇವೇಗೌಡ ನಿರಂತರವಾಗಿ ಹಾಸನ  ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರು. ಆದರೆ, ಅಲ್ಲಿಂದ ತನ್ನ ಮೊಮ್ಮಗ ಪ್ರಜ್ವಲ್ ರೇವಣ್ಣನನ್ನು ಕಣಕ್ಕಿಳಿಸಲು ಅವರು ತಮ್ಮ ಸ್ಥಾನವನ್ನು ಖಾಲಿ ಮಾಡಿದ್ದರು.ಮೇ 23 ರಂದು ಲೋಕಸಭಾ ಫಲಿತಾಂಶದ ಪ್ರಕಟಣೆ ಪ್ರಕಟವಾದ ಬೆನ್ನಲ್ಲೇ, ಬಿಜೆಪಿಯ ಎ ಮಂಜು ಅವರನ್ನು ಹಾಸನದಿಂದ 1.41 ಲಕ್ಷ ಮತಗಳ ಅಂತರದಿಂದ ಸೋಲಿಸಿದ  ಪ್ರಜ್ವಲ್ ರೇವಣ್ಣ, ತಮ್ಮ ಅಜ್ಜ ಮತ್ತೆ ಚುನಾಯಿತರಾಗಲು ಆ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು.


ಕಾಂಗ್ರೆಸ್ ನ  ಕಳಪೆ ಸಾಧನೆಯಿಂದಾಗಿ, 2004 ರಿಂದ 2014 ರವರೆಗೆ ಭಾರತದ ಪ್ರಧಾನ ಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಅವರು ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದಲ್ಲಿ ತಪ್ಪಿಸಿಕೊಳ್ಳಲಿದ್ದು, ರಾಜ್ಯಸಭಾ ಸದಸ್ಯರಾಗಿ ಅವರ ಸುಮಾರು 30 ವರ್ಷಗಳ ಅಧಿಕಾರಾವಧಿಯು ಶುಕ್ರವಾರ ಕೊನೆಗೊಂಡಿದೆ .


ಕಾಂಗ್ರೆಸ್ ಪಕ್ಷವು ರಾಜ್ಯ ವಿಧಾನಸಭೆಯಲ್ಲಿ ಕಳಪೆ ಪ್ರದರ್ಶನ ತೋರಿದ್ದರಿಂದ 1991 ರಲ್ಲಿ ಅಸ್ಸಾಂನಿಂದ ನಿರಂತರವಾಗಿ ಪ್ರತಿನಿಧಿಸುತ್ತಿದ್ದ  ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ  ಈ ಬಾರಿ ಸಂಖ್ಯಾ ಬಲದ ಕೊರತೆ ಇರುವ ಹಿನ್ನಲೆಯಲ್ಲಿ ರಾಜ್ಯಸಭೆಗೆ ಪುನರ್ ಆಯ್ಕೆಯಾಗಲು ಸಾಧ್ಯವಾಗಿಲ್ಲ.