ಜಮ್ಮು ಮತ್ತು ಕಾಶ್ಮೀರ(Jammu and Kashmir)ದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆ ಹಾಗೂ ಭಯೋತ್ಪಾದಕರ ನಡುವೆ ನಡೆದ ಎನ್‌ಕೌಂಟರ್ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ (ಎಚ್‌ಎಂ) ಭಯೋತ್ಪಾದಕನನ್ನು ಹತ್ಯೆಗೈಯಲಾಗಿದೆ. ಜಿಲ್ಲೆಯ ದ್ರಾಬ್ಗಾಮ್ ಪ್ರದೇಶದಲ್ಲಿ ಸೋಮವಾರ ಎನ್‌ಕೌಂಟರ್ ನಡೆದಿದ್ದು, ದಾಳಿ ನಡೆಸಲು ಹೊಂಚು ಹಾಕಿದ್ದ ಭಯೋತ್ಪಾದಕರ ಗುಂಪು ಗಸ್ತು ತಿರುಗುತ್ತಿದ್ದ ಸೇನೆಯ ಮೇಲೆ ಗುಂಡಿನ ಮಳೆಗೈದಿದೆ. ಈ ವೇಳೆ ಸೇನೆಯು ಗುಂಡು ಹಾರಿಸಿದ್ದು ಉಗ್ರನೊಬ್ಬನನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ.


COMMERCIAL BREAK
SCROLL TO CONTINUE READING

ಮೃತ ಭಯೋತ್ಪಾದಕನನ್ನು ಇರ್ಫಾನ್ ಅಹ್ಮದ್ ರಾಥರ್ ರಾಜ್‌ಪೊರಾದ ನಿವಾಸಿ ಎಂದು ಗುರುತಿಸಲಾಗಿದೆ. ಆತನನ್ನು ನವೆಂಬರ್ 2017 ರಿಂದ ವಾಂಟೆಡ್ ಕ್ಯಾಟಗರೈಸ್ಡ್ ಎಚ್‌ಎಂ ಭಯೋತ್ಪಾದಕರಾಗಿ ಪಟ್ಟಿಮಾಡಲಾಗಿತ್ತು. ಆತನ ಬಳಿ ವಶಪಡಿಸಿಕೊಂಡ ಗುರುತಿನ ಚೀಟಿಯನ್ನು ಆಧರಿಸಿ ಆತನನ್ನು ಗುರುತಿಸಲಾಗಿದೆ.


ವರದಿಗಳ ಪ್ರಕಾರ, ಕನಿಷ್ಠ 2-3 ಭಯೋತ್ಪಾದಕರು ಈ ಪ್ರದೇಶದಲ್ಲಿ ಅಡಗಿದ್ದಾರೆ ಎಂದು ನಂಬಲಾಗಿದೆ. ಅಡಗಿರುವ ಉಗ್ರರನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ಶೋಧ ಕಾರ್ಯ ಮುಂದುವರೆಸಿವೆ.


ಪುಲ್ವಾಮಾ ಪೊಲೀಸ್ ಠಾಣೆ ವ್ಯಾಪ್ತಿಯ ಪಚಾರ್‌ನಲ್ಲಿ ಎನ್‌ಕೌಂಟರ್ ನಡೆದಿದ್ದು, ಕೆಲವು ಅಪರಿಚಿತ ಭಯೋತ್ಪಾದಕರು 44 ಆರ್ಆರ್, 182/183 ಬಿಎನ್ ಸಿಆರ್‌ಪಿಎಫ್ ಮತ್ತು ಪೊಲೀಸ್ ಪುಲ್ವಾಮ ಜಂಟಿ ಗಸ್ತು ಪಕ್ಷದ ಮೇಲೆ ಗುಂಡು ಹಾರಿಸಿದರು.


ಮತ್ತೊಂದು ಬೆಳವಣಿಗೆಯಲ್ಲಿ, ಪೋಲಿಸ್ ಮತ್ತು ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆಯಲ್ಲಿ ಅನಂತ್‌ನಾಗ್‌ನ ಗ್ಯಾಸಿಗುಂಡ್‌ನಲ್ಲಿ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ವಶಪಡಿಸಿಕೊಂಡಿವೆ.


ಬಾರಾಮುಲ್ಲಾದಲ್ಲಿ, ಪೊಲೀಸರು ಮತ್ತೊಂದು ಭಯೋತ್ಪಾದಕ ಘಟಕವನ್ನು ಭೇದಿಸಿ, ಒಬ್ಬ ಭಯೋತ್ಪಾದಕ ಸಹಚರನನ್ನು ಮತ್ತು ಇತರ ಮೂವರು ಶಂಕಿತರನ್ನು ಬಂಧಿಸಿದ್ದಾರೆ. ಪ್ರದೇಶದಲ್ಲಿ ಭೀತಿ ಮತ್ತು ಉದ್ವಿಗ್ನತೆಯನ್ನು ಉಂಟುಮಾಡುವ ಉದ್ದೇಶದಿಂದ ಭಯೋತ್ಪಾದಕರಿಗೆ ಗ್ರೆನೇಡ್‌ಗಳನ್ನು ಎಸೆಯಲು ತಿಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 


ಇದಕ್ಕೂ ಮುನ್ನ ಸೋಮವಾರ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಾರಾಮುಲ್ಲಾ ಜಿಲ್ಲೆಯಲ್ಲಿ ಭಯೋತ್ಪಾದಕನನ್ನು ಬಂಧಿಸಿ ಅವರ ಬಳಿಯಿದ್ದ ಕೈ ಗ್ರೆನೇಡ್ ವಶಪಡಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ, ಅನಂತ್‌ನಾಗ್ ಜಿಲ್ಲೆಯ ಖುದ್ವಾನಿ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ -11 ರಲ್ಲಿ 25 ಕೆಜಿ ಹೆಚ್ಚಿನ ಸ್ಫೋಟಕವನ್ನು ಹೊಂದಿರುವ ಸುಧಾರಿತ ಸ್ಫೋಟಕ ಸಾಧನ (IED) ಪತ್ತೆಯಾಗಿದೆ. ನಂತರ ಇದನ್ನು ಆರ್ಮಿ ಬಾಂಬ್ ವಿಲೇವಾರಿ ತಂಡವು ಪರಿಶೀಲಿಸಿದೆ.