ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆ ಮತ್ತೊಮ್ಮೆ ಭಯೋತ್ಪಾದಕ ಮುಕ್ತವಾಗಿದೆ. ಸೋಮವಾರ ಬೆಳಿಗ್ಗೆ ಅನಂತ್‌ನಾಗ್ (Anantnag)  ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ದೋಡಾ ನಿವಾಸಿ ಹಿಜ್ಬುಲ್ ಕಮಾಂಡರ್ ಮಸೂದ್ ಸಾವನ್ನಪ್ಪಿದ್ದಾರೆ. ಮಸೂದ್ ದೋಡಾ ಜಿಲ್ಲೆಯಲ್ಲಿ ಜೀವಂತವಾಗಿ ಉಳಿದಿದ್ದ ಕೊನೆಯ ಭಯೋತ್ಪಾದಕನಾಗಿದ್ದು ಆತನ ನಿರ್ಮೂಲನೆಯೊಂದಿಗೆ, ದೋಡಾ ಜಿಲ್ಲೆಯಲ್ಲಿ ಭಯೋತ್ಪಾದಕರು ಕೊನೆಗೊಂಡಿದ್ದಾರೆ. ಮಸೂದ್‌ನಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.


COMMERCIAL BREAK
SCROLL TO CONTINUE READING

ವಾಸ್ತವವಾಗಿ ಇಂದು ಬೆಳಿಗ್ಗೆ  ಜಮ್ಮು ಮತ್ತು ಕಾಶ್ಮೀರ (Jammu and Kashmir)ದ ಅನಂತ್‌ನಾಗ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಹತ್ಯೆಗೀಡಾದ ಮೂವರು ಭಯೋತ್ಪಾದಕರನ್ನು ಇನ್ನೂ ಗುರುತಿಸಲಾಗಿಲ್ಲ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆ ನಿನ್ನೆ ರಾತ್ರಿ 11 ಗಂಟೆಗೆ ಪ್ರಾರಂಭವಾಯಿತು. ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ಮೂವರು ಉಗ್ರರಿಂದ ಎಕೆ -47 ವಶಪಡಿಸಿಕೊಳ್ಳಲಾಗಿದೆ. ಭಯೋತ್ಪಾದಕರಿಂದ ಎರಡು ಪಿಸ್ತೂಲ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. 


ಹತ್ಯೆಗೀಡಾದ ಭಯೋತ್ಪಾದಕರಲ್ಲಿ ಹಿಜ್ಬುಲ್ ಕಮಾಂಡರ್ ಮಸೂದ್ ಮತ್ತು ಇಬ್ಬರು ಲಷ್ಕರ್ ಭಯೋತ್ಪಾದಕರು ಸೇರಿದ್ದಾರೆ. ಮಸೂದ್ ದೋಡ ನಿವಾಸಿಯಾಗಿದ್ದು ಈತನ ಹತ್ಯೆ ಬಳಿಕ ಟ್ರಾಲ್ ನಂತರ, ಈಗ ದೋಡಾ ಕೂಡ ಭಯೋತ್ಪಾದಕ ಮುಕ್ತವಾಗಿದೆ. ಇದರಿಂದಾಗಿ ಈ ವರ್ಷದ ಜನವರಿಯಿಂದ  116 ಭಯೋತ್ಪಾದಕರು ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದಾರೆ.


ಈ ವರ್ಷ ಕಣಿವೆಯಲ್ಲಿ ಈ ಮೂವರು ಭಯೋತ್ಪಾದಕರ ಹತ್ಯೆಯೊಂದಿಗೆ, ಇಲ್ಲಿಯವರೆಗೆ ಕೊಲ್ಲಲ್ಪಟ್ಟ ಅಧಿಕೃತ ಭಯೋತ್ಪಾದಕರ ಸಂಖ್ಯೆ 116 ಕ್ಕೆ ಏರಿದೆ, ಇದರಲ್ಲಿ ಇಲ್ಲಿಯವರೆಗೆ ಎಲ್ಲಾ ವಿವಿಧ ಭಯೋತ್ಪಾದಕ ಸಂಘಟನೆಗಳ 7 ಕಾರ್ಯಾಚರಣಾ ಕಮಾಂಡರ್‌ಗಳು ಸೇರಿದ್ದಾರೆ. ಇದು ಜೂನ್ ತಿಂಗಳಲ್ಲಿ ನಡೆದ 13 ನೇ  ಎನ್‌ಕೌಂಟರ್‌ (Encounter)  ಆಗಿದ್ದು, ಭದ್ರತಾ ಪಡೆಗಳು ಕಣಿವೆಯಲ್ಲಿ 40 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಂದಿರುವುದಾಗಿ ಅಂಕಿ-ಅಂಶಗಳಿಂದ ತಿಳಿದುಬಂದಿದೆ.