ಅಟಲ್ ಜೀ ಅವರ `6 A ಕೃಷ್ಣಮೆನನ್ ಮಾರ್ಗ್` ನಿವಾಸ ಈಗ `ಅಮಿತ್ ಶಾ`ರ ಹೊಸ ವಿಳಾಸ!
ಅಟಲ್ ಬಿಹಾರಿ ವಾಜಪೇಯಿ ಅವರು 2004 ರಿಂದ ಕಳೆದ ವರ್ಷದವರೆಗೆ ಕೇಂದ್ರ ದೆಹಲಿಯ 6-ಎ ಕೃಷ್ಣ ಮೆನನ್ ಮಾರ್ಗ್ನಲ್ಲಿ ನೆಲೆಸಿದ್ದರು.
ನವದೆಹಲಿ: ಕೇಂದ್ರ ಗೃಹ ಸಚಿವರಾಗಿ ನೂತನವಾಗಿ ಅಧಿಕಾರ ಸ್ವೀಕರಿಸಿರುವ ಅಮಿತ್ ಶಾ ಅವರಿಗೆ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ '6 A ಕೃಷ್ಣಮೆನನ್ ಮಾರ್ಗ್' ನಿವಾಸವನ್ನು ಅಲಾಟ್ ಮಾಡುವ ಸಾಧ್ಯತೆ ಇದೇ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.
ಅಟಲ್ ಬಿಹಾರಿ ವಾಜಪೇಯಿ ಅವರು 2004 ರಿಂದ ಕಳೆದ ವರ್ಷದವರೆಗೆ ಕೇಂದ್ರ ದೆಹಲಿಯ 6-ಎ ಕೃಷ್ಣ ಮೆನನ್ ಮಾರ್ಗ್ನಲ್ಲಿ ನೆಲೆಸಿದ್ದರು. ಅಟಲ್ ಜೀ ಅವರ ನಿಧನದ ಬಳಿಕ ಕಳೆದ ವರ್ಷ ನವೆಂಬರ್ ನಲ್ಲಿ ಅವರ ಕುಟುಂಬ ಈ ಬಂಗಲೆಯಿಂದ ಸ್ಥಳಾಂತರಗೊಂಡಿದೆ.
ಗೃಹ ಸಚಿವ ಅಮಿತ್ ಶಾ ಅವರ ಅಗತ್ಯತೆಗಳ ಪ್ರಕಾರ ಮುಂದಿನ ತಿಂಗಳಲ್ಲಿ ಈ ಬಂಗಲೆಯನ್ನು ಸಿದ್ದಪಡಿಸಲಾಗುವುದು ಎಂದು ಅಧಿಕಾರಿಗಳು ಗುರುವಾರ ದೃಢಪಡಿಸಿದ್ದಾರೆ. ಹದಿನೇಳನೇ ಲೋಕಸಭೆ ರಚನೆಯ ನಂತರ, ಈ ಬಂಗಲೆವನ್ನು ಕೇಂದ್ರ ಸಚಿವರಾಗಿ 'ಶಾ' ಅವರಿಗೆ ನಿಗದಿಪಡಿಸಲಾಗಿದೆ. ಕೇಂದ್ರ ಮಂತ್ರಿಗಳಿಗೆ ನಿಗದಿಪಡಿಸಲಾದ 'ಟೈಟ್ 8' ವಿಭಾಗದಲ್ಲಿ ದುರಸ್ತಿ ಕೆಲಸ ನಡೆಯುತ್ತಿದೆ.
ಈ ಮೊದಲು ರಾಜ್ಯಸಭಾ ಸದಸ್ಯರಾಗಿದ್ದ ಅಮಿತ್ ಶಾ, ಪ್ರಸ್ತುತ ಅಕ್ಬರ್ ರಸ್ತೆಯ ನಂ 11 ಬಂಗಲೆಯಲ್ಲಿ ವಾಸವಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಅಮಿತ್ ಶಾ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಚುನಾಯಿತರಾಗಿದ್ದಾರೆ. ಮೋದಿ ಸರ್ಕಾರ-2ರಲ್ಲಿ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಅವಿಗೆ ಹೊಸ ಬಂಗಲೆಯನ್ನು ನೀಡಲಾಗುತ್ತಿದೆ.