ಅಂತರ್ಜಾತಿ ವಿವಾಹವಾದ ದಂಪತಿಯ ಬರ್ಬರ ಹತ್ಯೆ
ಮೃತ ದಂಪತಿಯನ್ನು ಟಿ.ಸೋಲೈರಾಜ್(23) ಮತ್ತು ಎ.ಜ್ಯೋತಿ(23) ಎಂದು ಗುರುತಿಸಲಾಗಿದ್ದು, ಇಬ್ಬರೂ ಕೆಲ ತಿಂಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು ಎನ್ನಲಾಗಿದೆ.
ಮಧುರೈ: ಪೋಷಕರ ಇಷ್ಟಕ್ಕೆ ವಿರುದ್ಧವಾಗಿ ಆಟರ್ಜಾತಿ ವಿವಾಹವಾಗಿದ್ದ ದಂಪತಿಯನ್ನು ಬರ್ಬರವಾಗಿ ಕಡಿದು ಹತ್ಯೆ ಮಾಡಿರುವ ಅಮಾನವೀಯ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯ ತಾಂತೈ ಪೆರಿಯಾರ್ ನಗರ ಎಂಬಲ್ಲಿ ಗುರುವಾರ ನಡೆದಿದೆ. ಮೃತ ಮಹಿಳೆ 3 ತಿಂಗಳ ಗರ್ಭಿಣಿಯಾಗಿದ್ದಳು ಎಂದು ತಿಳಿದುಬಂದಿದೆ.
ಮೃತ ದಂಪತಿಯನ್ನು ಟಿ.ಸೋಲೈರಾಜ್(23) ಮತ್ತು ಎ.ಜ್ಯೋತಿ(23) ಎಂದು ಗುರುತಿಸಲಾಗಿದ್ದು, ಇಬ್ಬರೂ ಕೆಲ ತಿಂಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು ಎನ್ನಲಾಗಿದೆ. ಇಬ್ಬರೂ ಸಾಲ್ಟ್ ಕಂಪನಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದು, ಕೆಳ ಜಾತಿಯ ಯುವಕ ಎಂಬ ಕಾರಣಕ್ಕೆ ಜ್ಯೋತಿ ಮನೆಯವರ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿರೋಧದ ನಡುವೆಯೂ ಸೋಲೈರಾಜ್ ಮನೆಯವರ ಬೆಂಬದೊಂದಿಗೆ ವಿವಾಹವಾಗಿ ಪ್ರತ್ಯೇಕ ಮನೆಯಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದ ಎನ್ನಲಾಗಿದೆ.
ಸದ್ಯ ಪೊಲೀಸರು ಜ್ಯೋತಿಯ ತಂದೆಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.