ಆಗ್ರಾ: ''ನನ್ನ ಚಳವಳಿಯಿಂದ ಮತ್ತೋರ್ವ ಅರವಿಂದ್ ಕೇಜ್ರಿವಾಲ್ ಹುಟ್ಟಿ ಬರದಿದ್ದರೆ ಸಾಕು'' ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಾರ್ಟಿ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು 2011 ರಲ್ಲಿ ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಪಾಲ್ಗೊಂಡಿದ್ದರು. ತರುವಾಯ, ಅವರು ಸಾಮಾಜಿಕ ಕಾರ್ಯಕಾರ್ಯಗಳಲ್ಲಿ ತೊಡಗಿ ತಮ್ಮದೇ ಸ್ವಂತ ರಾಜಕೀಯ ಪಕ್ಷವನ್ನು ಪ್ರಾರಂಭಿಸಿದರು.


ಆಗ್ರಾದ ಶಾಹಿದ್ ಸ್ಮಾರಕ್ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಹಜಾರೆ, ಮಾರ್ಚ್ 23 ರಂದು ರಾಷ್ಟ್ರೀಯ ರಾಜಧಾನಿಯಲ್ಲಿ ದೊಡ್ಡ ರ್ಯಾಲಿಯನ್ನು ಹಮ್ಮಿಕೊಳ್ಳಲಿದ್ದು, ರೈತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿಸುವಂತೆ ಕೋರಿದರು. 


ಇದೇ ವೇಳೆ ಜನ ಲೋಕಪಾಲ ಮಸೂದೆಯನ್ನು ಜಾರಿಗೊಳಿಸುವಲ್ಲಿ ಹಿಂದಿನ ಯುಪಿಎ ಸರ್ಕಾರ ವಿಫಲವಾಯಿತು ಎಂದು ಅವರು ಆರೋಪಿಸಿದರು. 


'' ನಂತರ ಅಧಿಕಾರಕ್ಕೆ ಬಂದ ಮೂಡಿ ಸರ್ಕಾರ ಜನ ಲೋಕಪಾಲ ಮಸೂದೆಯ ನಿಬಂಧನೆಗಳನ್ನು ದುರ್ಬಲಗೊಳಿಸಿದೆ. ಈ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳೆರಡೂ ತಪ್ಪಿತಸ್ಥರಾಗಿದ್ದಾರೆ'' ಎಂದು ಹಜಾರೆ ಆರೋಪಿಸಿದರು. 


ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ನೈಜ ಪ್ರಜಾಪ್ರಭುತ್ವವು ಭಾರತಕ್ಕೆ ಬಂದಿಲ್ಲ ಎಂದು ಹೇಳಿದ ಅವರು, "ನಾವು ಬಂಡವಾಳಶಾಹಿಗಳ ಸರ್ಕಾರವನ್ನು ಬಯಸುವುದಿಲ್ಲ, ಮೋದಿ ಅಥವಾ ರಾಹುಲ್ ಗಾಂಧಿ ಯಾರೇ ಆಗಿರಲಿ ರೈತರ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುವ ಸರ್ಕಾರವನ್ನು ನಾವು ಬಯಸುತ್ತೇವೆ. " ಹಜಾರೆ ಹೇಳಿದರು.