ಮಹಾರಾಷ್ಟ್ರ: ಹೆತ್ತ ತಾಯಿಯನ್ನೇ ಹತ್ಯೆಗೈದು ಆಕೆಯ ಅಂಗಾಂಗಗಳನ್ನು ಬೇಯಿಸಿ ತಿಂದ ಪಾಪಿ ಪುತ್ರನಿಗೆ ಕೊಲ್ಹಾಪುರದ ಸ್ಥಳೀಯ ನ್ಯಾಯಾಲಯವು ಮರಣದಂಡನೆ ಶಿಕ್ಷೆ(Death Sentence) ವಿಧಿಸಿದೆ.


COMMERCIAL BREAK
SCROLL TO CONTINUE READING

ಈ ಘಟನೆ ಆಗಸ್ಟ್ 2017ರಲ್ಲಿ ನಡೆದಿತ್ತು. ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ 35 ವರ್ಷದ ಸುನಿಲ್ ರಾಮ್ ಕುಚ್ಕೋರವಿ ಎಂಬಾತ ತನ್ನ ಹೆತ್ತ ತಾಯಿಯನ್ನೇ ಕೊಲೆ(Murder) ಮಾಡಿದ್ದನು. ರಕ್ತದ ಮಡುವಿನಲ್ಲಿದ್ದ ತಾಯಿಯ ಮೃತದೇಹದ ಬಳಿ ಸುನಿಲ್ ರಾಮ್ ನಿಂತಿರುವುದನ್ನು ಮಗುವೊಂದು ನೋಡಿ ಜೋರಾಗಿ ಕಿರುಚಿತ್ತು. ಮಗುವಿನ ಕಿರುಚಾಟ ಕೇಳಿದ ಸ್ಥಳೀಯರು ಸ್ಥಳಕ್ಕಾಗಮಿಸಿ ಕೊಲೆ ನಡೆದಿರುವ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದರು.


ಇದನ್ನೂ ಓದಿ: PM Kisan: ಈ ತಪ್ಪುಗಳಾಗಿದ್ದರೆ ನಿಂತು ಬಿಡಬಹುದು 9 ನೇ ಕಂತು, ಈ ರೀತಿ ಸರಿಪಡಿಸಿಕೊಳ್ಳಿ


ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸ್ ಇನ್ಸ್ ಪೆಕ್ಟರ್ ಭಾವುಸಾಹೇಬ್ ಮಾಲ್ಗುಂಡೆ ಮತ್ತು ಸಿಬ್ಬಂದಿ, ರಕ್ತದ ಮಡುವಿನಲ್ಲಿದ್ದ ಶವದ ಪ್ರಾಥಮಿಕ ಪರೀಕ್ಷೆ ನಡೆಸಿದ್ದರು. ಘಟನಾ ಸ್ಥಳದಲ್ಲಿ ಒಂದು ತಟ್ಟೆಯಲ್ಲಿ ಹೃದಯ ಮತ್ತು ಎಣ್ಣೆಯಲ್ಲಿ ಬೇಯಿಸಿದ ಮೃತದೇಹದ ಕೆಲ ಅಂಗಾಂಗಗಳು ಪತ್ತೆಯಾಗಿದ್ದವು.  ಹೆತ್ತತಾಯಿಯನ್ನೇ ಕೊಂದು ಅಂಗಾಂಗಗಳನ್ನು ತುಂಡರಿಸಿದ್ದ ಪಾಪಿ ಪುತ್ರ ಕುಚ್ಕೋರವಿ ಮೇಲೆ ಕೋಪಿಸಿಗೊಂಡಿದ್ದ ಸ್ಥಳೀಯರು ಹಲ್ಲೆ ನಡೆಸಲು ಮುಂದಾಗಿದ್ದರು. ಈ ವೇಳೆ ಮಾಲ್ಗುಂಡೆ ಉದ್ರಿಕ್ತ ಜನರಿಂದ ಕುಚ್ಕೋರವಿಯನ್ನು ರಕ್ಷಿಸಿ ಪೊಲೀಸ್ ಠಾಣೆ(Police Station)ಗೆ ಕರೆದೊಯ್ದಿದ್ದರು. ಪ್ರಾಸಿಕ್ಯೂಷನ್ ಪ್ರಕಾರ, ಕುಚ್ಕೋರವಿ ಮದ್ಯದ ದಾಸನಾಗಿದ್ದ. ದಿನವೂ ಕುಡಿದುಬರುತ್ತಿದ್ದ ಆತ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸುತ್ತಿದ್ದ. ಈತನ ಕಿರುಕುಳ ತಾಳಲಾರದೆ ಪತ್ನಿ ದೂರವಾಗಿದ್ದಳು. ಬಳಿಕ ತಾಯಿ ಜೊತೆಗೆ ವಾಸಿಸುತ್ತಿದ್ದ ಕುಚ್ಕೋರವಿ ತನಗೆ ಕುಡಿಯಲು ಪಿಂಚಣಿ ಹಣ ನೀಡುವಂತೆ ಒತ್ತಾಯಿಸುತ್ತಿದ್ದ. ಕೊಡದಿದ್ದಾಗ ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದ.


ಇದನ್ನೂ ಓದಿ: Good news! ಈ ರಾಜ್ಯದ ಗುತ್ತಿಗೆ ನೌಕರರಿಗೆ 'ಬಂಪರ್ ಬೋನಸ್' ನೀಡಿದ ಸಿಎಂ


ಹೆತ್ತ ತಾಯಿಯನ್ನೇ ನಿರ್ಧಯವಾಗಿ ಕೊಂದು ಹಾಕಿದ ಪಾಪಿ ಮಗನಿಗೆ ಜೀವಾವಧಿ ಶಿಕ್ಷೆ(Death Sentence)ಯೇ ಸೂಕ್ತವೆಂದು ಕೊಲ್ಹಾಪುರದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮಹೇಶ್ ಕೃಷ್ಣಾಜಿ ಜಾಧವ್ ತೀರ್ಪು ನೀಡಿದ್ದಾರೆ. ಇದು ಅಪರೂಪದಲ್ಲೇ ಅಪರೂಪವೆನ್ನಬಹುದಾದ ಪ್ರಕರಣವಾಗಿದೆ. ಜನ್ಮಕೊಟ್ಟ ಪಾಪಕ್ಕೆ ತಾಯಿಗೆ ಪುತ್ರ ನೀಡಿದ ಹಿಂಸೆಯನ್ನು ಪದಗಳಲ್ಲಿ ಹೇಳಲಾಗದು.  ಕುಡಿತದ ದಾಸನಾಗಿ ತಾಯಿಯನ್ನೇ ಕೊಂದಿರುವ ಕುಚ್ಕೋರವಿಯನ್ನು ಸಾಯುವವರೆಗೂ ನೇತುಹಾಕಿ ಗಲ್ಲಿಗೇರಿಸಿ ಎಂದು ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.


ಈ ಘಟನೆಯು ಸಮಾಜದ ಸಾಮೂಹಿಕ ಆತ್ಮಸಾಕ್ಷಿಯನ್ನೇ ಕದಕಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿ ಕೇವಲ ಓಂದು ಕೊಲೆ(Crime) ನಡೆದಿಲ್ಲ, ಇದು ತೀವ್ರ ಕ್ರೂರತನದಿಂದ ಕೂಡಿದ ಪೈಶಾಚಿಕ ಕೃತ್ಯವಾಗಿದೆ. ತಾಯಿಯನ್ನು ನಿರ್ಧಯವಾಗಿ ಕೊಂದು ಘೋರ ಕೃತ್ಯವೆಸಗಿರುವ ಆರೋಪಿಯ ವರ್ತನೆಯಲ್ಲಿ ಯಾವುದೇ ಪಶ್ಚಾತ್ತಾಪ ಮನೋಭಾವನೆಯಿಲ್ಲ. ಹೀಗಾಗಿ ಆರೋಪಿಗೆ ಜೀವಾವಧಿ ಶಿಕ್ಷೆಯೇ ಸೂಕ್ತವೆಂದು ನ್ಯಾಯಾಧೀಶರು ತಿಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ