ನಿಮ್ಮ ಪ್ರತಿಯೊಂದು ಖರ್ಚಿನ ಮೇಲೆ Income Tax ಇಲಾಖೆಯ ಕಣ್ಣು, ಟ್ಯಾಕ್ಸ್ ಕಳ್ಳತನ ಇನ್ಮುಂದೆ ದುಬಾರಿಯಾಗಲಿದೆ
ತೆರಿಗೆ ವ್ಯವಸ್ಥೆಯನ್ನು ಪಾರದರ್ಶಕವಾಗಿಸಲು ಪ್ರಧಾನಿ ನರೇಂದ್ರ ಮೋದಿ ತೆರಿಗೆದಾರರ ಚಾರ್ಟರ್ ಘೋಷಿಸಿದ್ದಾರೆ. ಇದಕ್ಕಾಗಿ ಅವರು `ಪಾರದರ್ಶಕ ತೆರಿಗೆ - ಪ್ರಾಮಾಣಿಕರ ಗೌರವ` ವೇದಿಕೆಯನ್ನು ಪ್ರಾರಂಭಿಸಿದ್ದಾರೆ.
ನವದೆಹಲಿ: ತೆರಿಗೆ ವ್ಯವಸ್ಥೆಯನ್ನು ಪಾರದರ್ಶಕವಾಗಿಸಲು ಪ್ರಧಾನಿ ನರೇಂದ್ರ ಮೋದಿ(PM NARENDRA MODI) ತೆರಿಗೆದಾರರ ಚಾರ್ಟರ್ ಘೋಷಿಸಿದ್ದಾರೆ. ಇದಕ್ಕಾಗಿ ಅವರು 'ಪಾರದರ್ಶಕ ತೆರಿಗೆ - ಪ್ರಾಮಾಣಿಕರ ಗೌರವ' ವೇದಿಕೆಯನ್ನು ಪ್ರಾರಂಭಿಸಿದ್ದಾರೆ. ತೆರಿಗೆ ಅನುಸರಣೆ ಸುಲಭ ಮತ್ತು ಪಾರದರ್ಶಕವಾಗಿಸಲು ಆದಾಯ ತೆರಿಗೆದಾರರಿಗೆ ಅನೇಕ ರೀತಿಯ ಸೌಲಭ್ಯಗಳನ್ನು ಘೋಷಿಸಲಾಗಿದೆ. ಆದರೆ ತೆರಿಗೆ ಪಾವತಿದಾರರು ಸೌಲಭ್ಯಗಳನ್ನು ತೆಗೆದುಕೊಳ್ಳುವ ಮೂಲಕ ತಮ್ಮ ಜವಾಬ್ದಾರಿಗಳಿಂದ ಮುಕ್ತರಾಗಿದ್ದಾರೆ ಎಂದು ನೀವು ಭಾವಿಸಿದರೆ, ದಯವಿಟ್ಟು ಜಾಗರೂಕರಾಗಿರಿ.
ಇದರಿಂದ ತೆರಿಗೆ ಪಾವತಿದಾರರು ಪ್ರಾಮಾಣಿಕವಾಗಿ ತೆರಿಕೆ ಪಾವತಿಸುವ, ಎಲ್ಲ ಮಾಹಿತಿಗಳನ್ನು ತೆರಿಗೆ ಇಲಾಖೆಯ ಜೊತೆಗೆ ಹಂಚಿಕೊಳ್ಳುವ ಜವಾಬ್ದಾರಿ ಕೂಡ ತೆರಿಗೆ ಪಾವತಿದಾರರ ಮೇಲೆ ಇರಲಿದೆ. ತೆರಿಗೆ ಪಾವತಿದಾರರು ತಾವು ಮಾಡುವ ಖರ್ಚಿನಲ್ಲಿ ಯಾವುದೇ ರೀತಿಯ ಹೇರಾಫೇರಿ ನಡೆಸಬಾರದು ಹಾಗೂ ಟ್ಯಾಕ್ಸ್ ಕಳ್ಳತನದಂತಹ ಅಪರಾಧಗಳಿಂದ ದೂರವಿಡುವ ಎಲ್ಲಾ ರೀತಿಯ ಸಿದ್ಧತೆಗಳನ್ನು ಸರ್ಕಾರ ಕೈಗೊಂಡಿದೆ. ಇದಕ್ಕಾಗಿ ಸರ್ಕಾರ ನಿಯಮಾವಳಿಗಳನ್ನು ಸಿದ್ಧಪಡಿಸಿದೆ. ಇವುಗಳನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. Expansion of scope of Reporting of transaction ಅಡಿ ಬಿಡುಗಡೆ ಮಾಡಲಾಗಿರುವ ಈ ನಿಯಮಾವಳಿಗಳ ಅನುಸಾರ ನೀವು ಮಾಡುವ ಯಾವುದೇ ದೊಡ್ಡ ಖರ್ಚು ನಿಮ್ಮ ಆದಾಯ ತೆರಿಗೆ ಫಾರ್ಮ್ 26AS ನಲ್ಲಿ ಕಾಣಿಸಿಕೊಳ್ಳಲಿದೆ. ಇದನ್ನು ನೀವು ಕೇವಲ 12 ಪಾಯಿಂಟ್ ಗಳ ಆಧಾರದ ಮೇಲೆ ತಿಳಿದುಕೊಳ್ಳಬಹುದಾಗಿದೆ.
1. ಒಂದು ವೇಳೆ ತೆರಿಗೆ ಪಾವತಿದಾರ ವರ್ಷದಲ್ಲಿ ಒಂದು ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಶಾಲಾ ಶುಲ್ಕವನ್ನು ಅಥವಾ ಡೊನೇಶನ್ ಪಾವತಿಸಿದ್ದರೆ, ಅದರ ಮಾಹಿತಿ ಸರ್ಕಾರಕ್ಕೆ ಸಿಗಲಿದೆ.
2.ಒಂದು ವೇಳೆ ನೀವು ಒಂದು ಲಕ್ಷಕ್ಕಿಂತ ಅಧಿಕ ಮೊತ್ತದ ವಿದ್ಯುತ್ಶಕ್ತಿ ಬಿಲ್ ಪಾವತಿಸಿದ್ದಾರೆ ಅದೂ ಕೂಡ ಫಾರ್ಮ್ 26ASನಲ್ಲಿ ಕಾಣಿಸಿಕೊಳ್ಳಲಿದೆ.
3. ನೀವು ದೇಶೀಯ ಅಥವಾ ಅಂತರರಾಷ್ಟ್ರೀಯ ಪ್ರವಾಸಗಳನ್ನು ನಡೆಸಿದರು ಕೂಡ ಅದರ ಮಾಹಿತಿ ಆದಾಯ ತೆರಿಗೆ ಇಲಾಖೆಗೆ ಸಿಗಲಿದೆ.
4- ನೀವು ಯಾವುದೇ ಹೋಟೆಲ್‌ಗಳಲ್ಲಿ ಉಳಿದು 20 ಸಾವಿರ ರೂಪಾಯಿಗಳಿಗಿಂತ ಹೆಚ್ಚು ಖರ್ಚು ಮಾಡಿದರೂ ಕೂಡ ಆದಾಯ ತೆರಿಗೆ ಇಲಾಖೆಯ ಕಣ್ಣು ನಿಮ್ಮ ಮೇಲೆ ಬೀಳಲಿದೆ.
5- ನೀವು ಒಂದು ವರ್ಷದಲ್ಲಿ ಆಭರಣ,ವಾಶಿಂಗ್ ಮಶೀನ್, ಫ್ರಿಜ್, ಪೇಂಟಿಂಗ್, ಮಾರ್ಬಲ್ ಇತ್ಯಾದಿಗಳಿಗಾಗಿ ಒಂದು ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಖರ್ಚು ಮಾಡಿದರೆ ಜಾಗರೂಕರಾಗಿರಿ, ಏಕೆಂದರೆ ಸರ್ಕಾರಕ್ಕೆ ಇದೆಲ್ಲದರ ಮಾಹಿತಿ ಸಿಗಲಿದೆ.
6- ಚಾಲ್ತಿ ಖಾತೆಯಲ್ಲಿ 50 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆದರೆ, 26 ಎಎಸ್‌ನಲ್ಲಿ ಈ ಕುರಿತು ವರದಿಯಾಗಲಿದೆ.
7- ಚಾಲ್ತಿ ಅಲ್ಲದ ಖಾತೆಯಲ್ಲಿ 25 ಲಕ್ಷಕ್ಕೂ ಹೆಚ್ಚಿನ ವಹಿವಾಟು ನಡೆದರೂ ಕೂಡ ಆದಾಯ ತೆರಿಗೆ ಇಲಾಖೆಯ ಕಣ್ಣು ನಿಮ್ಮ ಮೇಲೆ ಬೀಳಲಿದೆ.
8- ವಾರ್ಷಿಕವಾಗಿ 20 ಸಾವಿರ ರೂಪಾಯಿ ಆಸ್ತಿ ಶುಲ್ಕ ಪಾವತಿಸುವವರು ಕೂಡ ಜಾಗರೂಕರಾಗುವ ಅವಶ್ಯಕತೆ ಇದೆ. ಏಕೆಂದರೆ ಈ ಎಲ್ಲಾ ಮಾಹಿತಿಯು ಸರ್ಕಾರದ ಬಳಿ ಇರಲಿದೆ.
9- ಜೀವ ವಿಮಾ ಪ್ರೀಮಿಯಂ 50 ಸಾವಿರಕ್ಕಿಂತ ಹೆಚ್ಚಿದ್ದರೆ ಮತ್ತು ಆರೋಗ್ಯ ವಿಮಾ ಪ್ರೀಮಿಯಂ 20 ಸಾವಿರಕ್ಕಿಂತ ಹೆಚ್ಚಿದ್ದರೆ, ಅದು ಫಾರ್ಮ್ 26 ಎಎಸ್‌ನಲ್ಲಿ ಕಾಣಿಸಲಿದೆ.
10- ಆದಾಯ ತೆರಿಗೆ ಇಲಾಖೆಯು ಡಿಮ್ಯಾಟ್ ಖಾತೆ, ಷೇರು ವಹಿವಾಟು, ಬ್ಯಾಂಕ್ ಲಾಕರ್‌ಗಳ ಬಗ್ಗೆಯೂ ಮಾಹಿತಿ ಪಡೆಯಲಿದೆ.
11- ಒಬ್ಬ ವ್ಯಕ್ತಿಯು ಬ್ಯಾಂಕಿನಿಂದ 30 ಲಕ್ಷ ರೂಪಾಯಿಗಳ ವಹಿವಾಟು ನಡೆಸಿದರೆ, ಆತ ಈ ಕುರಿತು ಟ್ಯಾಕ್ಸ್ ರಿಟರ್ನ್ ಸಲ್ಲಿಸಬೇಕು. ಆತ ವರದಿ ಮಾಡಿದ್ದರೂ ಸರಿ ಮಾಡದೆ ಇದ್ದರೂ ಸರಿ ಈ ಕುರಿತು ಮಾಹಿತಿ ನೀಡುವುದು ಅನಿವಾರ್ಯವಾಗಿದೆ.
12- ಎಲ್ಲಾ ವೃತ್ತಿಪರರು, ಉದ್ಯಮಿಗಳು, ಅವರ ವಹಿವಾಟು 50 ಲಕ್ಷ ರೂ.ಗಿಂತ ಹೆಚ್ಚಿದ್ದರೆ, ರಿಟರ್ನ್ಸ್ ಸಲ್ಲಿಸುವ ಅಗತ್ಯವಿರುತ್ತದೆ.
ಇದರಲ್ಲಿನ ಹಲವು ಸಂಗತಿಗಳ ಕುರಿತು ಸಾಮಾನ್ಯ ಬಜೆಟ್ ನಲ್ಲಿ ಘೋಷಿಸಲಾಗಿದೆ. ಪ್ರಸ್ತುತ ಈ ಕುರಿತು ಔಪಚಾರಿಕ ಘೋಷಣೆ ಮಾಡಲಾಗಿದೆ. ಮೊದಲು ಈ ಎಲ್ಲ ನಿಯಮಗಳು ಕೇವಲ ಬ್ಯಾಂಕ್ ಗಳು, ಕಂಪನಿಗಳು ಹಾಗೂ ವ್ಯಾಪಾರಿಗಳಿಗೆ ಮಾತ್ರ ಅನ್ವಯಿಸುತ್ತಿದ್ದವು. ಆದರೆ, ಇದೀಗ ದೇಶದ ಪ್ರತಿಯೊಬ್ಬ ನಾಗರಿಕ ಆದಾಯ ತೆರಿಗೆ ಇಲಾಖೆಯ ರೇಡಾರ್ ಗೆ ಒಳಗಾಗಲಿದ್ದಾರೆ.