ನವದೆಹಲಿ: ಅಯೋಧ್ಯೆ ರಾಮ ಮಂದಿರ ವಿವಾದವು ಭಾರತದಲ್ಲಿ ರಾಜಕೀಯ, ಐತಿಹಾಸಿಕ ಮತ್ತು ಸಾಮಾಜಿಕ-ಧಾರ್ಮಿಕ ಚರ್ಚೆಯ ಕೇಂದ್ರವಾಗಿದೆ. ಉತ್ತರಪ್ರದೇಶದ ಫೈಜಾಬಾದ್ ಜಿಲ್ಲೆಯಲ್ಲಿರುವ ಅಯೋಧ್ಯಾ ನಗರವು ಈ ವಿವಾದದ ಕೇಂದ್ರ ಬಿಂದು. ಬಾಬ್ರಿ ಮಸೀದಿಯ ಇದ್ದ ಜಾಗದಲ್ಲಿ ಶ್ರೀರಾಮನು ಜನಿಸಿದ್ದು ಆದರೆ ಮಸೀದಿ ನಿರ್ಮಿಸಲು ಈ ಜಾಗದಲ್ಲಿನ  ಹಿಂದು ದೇವಾಲಯವನ್ನು ತೆರವುಗೊಳಿಸಲಾಗಿತ್ತು ಎಂದು ಎನ್ನುವ ವಾದವಿದೆ.


COMMERCIAL BREAK
SCROLL TO CONTINUE READING

ಡಿಸೆಂಬರ್ 6, 1992 ರಂದು ಬಾಬ್ರಿ ಮಸಿದಿಯನ್ನು ಧ್ವಂಸಗೊಳಿಸಿದ ಫಲವಾಗಿ ಅದು ಗಲಭೆಯಾಗಿ ಮಾರ್ಪಟ್ಟಿತು. ಇದಾದ ನಂತರ ನಂತರದ ಅಯೋಧ್ಯೆ ಜಾಗದ ವಿಚಾರವಾಗಿ   ಅಲಹಾಬಾದ್ ಹೈಕೋರ್ಟ್ 30 ಸೆಪ್ಟೆಂಬರ್ 2010 ರಂದು ತೀರ್ಪನ್ನು ನೀಡಿತ್ತು ಈ ತೀರ್ಪಿನನ್ವಯ ಅಯೋಧ್ಯೆಯ 2.77 ಎಕರೆ (1.12 ಹೆ) ಅಯೋಧ್ಯಾ ಭೂಮಿಯನ್ನು 3 ಭಾಗಗಳಾಗಿ ವಿಂಗಡಿಸಿತ್ತು. ಅದರಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಹಿಂದೂ ಮಹಾ ಸಭೆ ಪ್ರತಿನಿಧಿಸಿದ ರಾಮ್ ಲಾಲ್ಲಾ ಅಥವಾ ಶಿಶು ರಾಮಕ್ಕೆ 1/3 ಎ, 1/3 ಇಸ್ಲಾಮಿಕ್ ಸುನ್ನಿ ವಕ್ಫ್ ಬೋರ್ಡ್ ಮತ್ತು ಉಳಿದ 1/3 ಹಿಂದೂ ಧಾರ್ಮಿಕ ಪಂಥದ ನಿರ್ಮೋಹಿ ಅಖಾರಾಗೆ ವಿಂಗಡಿಸಿತ್ತು.


1994 ರಲ್ಲಿ  ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಅವರ ನೇತೃತ್ವದ ಪೀಠವು ನಮಾಜ್ ಅಥವಾ ಪ್ರಾರ್ಥನೆಯನ್ನು ಸಲ್ಲಿಸಲು ಮಸೀದಿಯ ಅವಶ್ಯಕತೆ ಇಲ್ಲ ಯಾವುದೇ ಸ್ಥಳದಲ್ಲಿಯೂ ಕೂಡ ಪ್ರಾರ್ಥನೆಯನ್ನು ಸಲ್ಲಿಸಬಹುದು. 


ಮಸೀದಿಯು ಇಸ್ಲಾಮ್ ನ ಅವಿಭಾಜ್ಯ ಅಂಗವಾಗಿಲ್ಲ ಎಂದಿದ್ದ ಇಸ್ಮಾಯಿಲ್ ಫಾರೂಕಿ ತೀರ್ಪನ್ನು ಪರಿಶೀಲನೆಗಾಗಿ ದೊಡ್ಡ ಸಂವಿಧಾನಿಕ ಪೀಠಕ್ಕೆ ಹಸ್ತಾಂತರಿಸಬೇಕೆ ಅಥವಾ ಬೇಡವೆ ಎನ್ನುವ ಕುರಿತು ಸಹ ಸುಪ್ರೀಂಕೋರ್ಟ್ ತೀರ್ಪು ನೀಡಲಿದೆ.1994 ರಲ್ಲಿ  ಸುಪ್ರೀಂ 'ಮಸೀದಿಗಳಲ್ಲಿ ನಮಾಜ್ ಮಾಡುವುದು ಇಸ್ಲಾಂನ ಅವಿಭಾಜ್ಯ ಭಾಗವಲ್ಲ'  ಎನ್ನುವ ಆದೇಶವನ್ನು ನೀಡಿತ್ತು ಈಗ ಅದರ  ಪರಿಶೀಲನೆಗಾಗಿ ಸಾವಿಧಾನಿಕ ಪೀಠಕ್ಕೆ ಹಸ್ತಾಂತರ ಮಾಡಬೇಕೆ ಅಥವಾ ಬೇಡವೇ ಎನ್ನುವುದನ್ನು ನಿರ್ಧರಿಸಲಿದೆ.


2010ರಲ್ಲಿ ಅಲಹಾಬಾದ್ ಹೈಕೋರ್ಟ್ ಅಯೋಧ್ಯೆಯ ವಿವಾದಿತ ಪ್ರದೇಶವನ್ನು ಮೂರು ಭಾಗಗಳಾಗಿ ವಿಂಗಡಿಸಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ಅಂತಿಮ ತೀರ್ಪನ್ನು ಇಂದು ಸುಪ್ರಿಂಕೋರ್ಟ್ ನೀಡಲಿದೆ.