ಬೆಂಗಳೂರು: ವಿವಾದಾತ್ಮಾಕ ಹೇಳಿಕೆಯಿಂದಲೇ ಆಗಾಗ ಸುದ್ದಿಯಲ್ಲಿರುವ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಈಗ ರಾಹುಲ್ ಗಾಂಧಿಯನ್ನು ಟೀಕಿಸುತ್ತಾ ಅದೇಗೆ ಮುಸ್ಲಿಂನೊಬ್ಬನ ಮಗ ಬ್ರಾಹ್ಮಣನಾದ ಎಂದು ಪ್ರಶ್ನಿಸಿದ್ದಾರೆ. 



COMMERCIAL BREAK
SCROLL TO CONTINUE READING

ಶಿರಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ "ಈ ಮುಸ್ಲಿಂ ವ್ಯಕ್ತಿ ತನ್ನನ್ನು ಜನಿಯೋಧಾರಿ ಹಿಂದು ಎಂದು ಕರೆದುಕೊಳ್ಳುತ್ತಾನೆ.ಹಾಗೆ ಕರೆದುಕೊಳ್ಳಲು ಯಾವುದಾದರು ಪ್ರೂಫ್ ಇದೆಯಾ ಎಂದು ಪ್ರಶ್ನಿಸಿದರು. ಮುಸ್ಲಿಂನ ಮಗ ಆತನ ತಾಯಿ ಕ್ರಿಶ್ಚಿಯನ್  ದಕ್ಕೆ ಯಾವುದಾದರು ಸಾಕ್ಷಿ ಇದೆಯೇ? ನಾನು ಜೋಕ್ ಮಾಡುತ್ತಿಲ್ಲ  ಎಂದು ಮಾರ್ಚ್ 9 ರಂದು ವೈರಲ್ ಆಗಿರುವ ವಿಡಿಯೋದಲ್ಲಿ ಹೇಳಿದ್ದಾರೆ.



ಹೆಗಡೆ ತಮ್ಮ ಭಾಷಣದಲ್ಲಿ ರಾಹುಲ್ ಗಾಂಧಿ ತಂದೆ ರಾಜೀವ್ ಗಾಂಧಿ ಯನ್ನು ಅವರು ಮುಸ್ಲಿಂ ಎಂದು ಹೇಳಿದ್ದಾರೆ.ಇದೇ ವೇಳೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.