ನವದೆಹಲಿ: ಯಾವುದೇ ರೀತಿಯ ಧೃಡಿಕರಣವಿಲ್ಲದೆ ಗೂಗಲ್ ಪೇ ಕಾರ್ಯನಿರ್ವಹಿಸುವುದಾದರು ಹೇಗೆ? ಎಂದು ದೆಹಲಿ ಹೈಕೋರ್ಟ್ ಬುಧವಾರದಂದು ಆರ್ಬಿಐಯನ್ನು ಪ್ರಶ್ನಿಸಿದೆ.


COMMERCIAL BREAK
SCROLL TO CONTINUE READING

ದೆಹಲಿ ಹೈಕೋರ್ಟ್ ನಲ್ಲಿ ಈ ವಿಚಾರವಾಗಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ಮತ್ತು ಎಜೆ ಬಂಬಾನಿ ಅವರನ್ನೊಳಗೊಂಡ ಪೀಠ, ಗೂಗಲ್ ಪೇ ಪಾವತಿ ಹಾಗೂ ಸೆಟಲ್ಮೆಂಟ್ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ರಿಸರ್ವ್ ಬ್ಯಾಂಕ್ ನಿಂದ ಈ ವಿಚಾರವಾಗಿ ಯಾವುದೇ ಅಧಿಕೃತ ಮಾನ್ಯತೆ ಯನ್ನು ಹೊಂದಿಲ್ಲ ಎಂದು ತನ್ನ ಅರ್ಜಿಯಲ್ಲಿ ವಾದಿಸಿದೆ.


ವಿಚಾರಣೆ ವೇಳೆಯಲ್ಲಿ ಅರ್ಜಿಯನ್ನು ಆಲಿಸಿದ ಪೀಠವು ರಿಸರ್ವ್ ಬ್ಯಾಂಕ್ ಹಾಗೂ ಗೂಗಲ್ ಇಂಡಿಯಾಗೆ ಸೂಚನೆ ನೀಡಿದೆ. ಅಲ್ಲದೆ ಅಭಿಜಿತ್ ಮಿಶ್ರಾ ಎನ್ನುವವರು ಪಿಐಎಲ್ ಮೂಲಕ ಎತ್ತಿರುವ ಪ್ರಶ್ನೆಯ ವಿಚಾರವಾಗಿ ತಮ್ಮ ನಿಲುವನ್ನು ತಿಳಿಸಬೇಕೆಂದು ಕೋರ್ಟ್ ಆದೇಶಿಸಿದೆ. ರಿಸರ್ವ್ ಬ್ಯಾಂಕ್ ಮಾರ್ಚ್ 20, 2019ರಂದು ಬಿಡುಗಡೆ ಮಾಡಿದ ಅಧಿಕೃತ ಪಾವತಿ ಸಿಸ್ಟಂ ಆಪರೇಟರ್ ಪಟ್ಟಿಯಲ್ಲಿ ಗೂಗಲ್ ಪೇ ಸ್ಥಾನ ಪಡೆಯದಿರುವ ಹಿನ್ನಲೆಯಲ್ಲಿ ಅವರು ಸಾರ್ವಜನಿಕ ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.