Rahul Gandhi, : ಪಿಎಂ ಮೋದಿಯವರಿಗೆ Daily To Do List ನೀಡಿದ ರಾಹುಲ್ ಗಾಂಧಿ!
ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರತಿ ದಿನ ಏನು ಮಾಡಬೇಕು ಎಂಬ ಸಲಹೆ ನೀಡಿದ್ದಾರೆ.
ನವದೆಹಲಿ : ಕಳೆದ 9 ದಿನಗಳಲ್ಲಿ 8 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಮಾರ್ಚ್ 22 ರಿಂದ ಇಲ್ಲಿಯವರೆಗೆ, ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 5.60 ರೂ.ಗಳಷ್ಟು ದುಬಾರಿಯಾಗಿದೆ. ಈ ಬಗ್ಗೆ ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರತಿ ದಿನ ಏನು ಮಾಡಬೇಕು ಎಂಬ ಸಲಹೆ ನೀಡಿದ್ದಾರೆ.
ಪ್ರಧಾನಿ ಮೋದಿಯವರ ದೈನಂದಿನ ಪಟ್ಟಿ ಹಂಚಿಕೊಂಡ ರಾಹುಲ್
ಅಷ್ಟೇ ಅಲ್ಲ ಯುವಕರಿಗೆ ಉದ್ಯೋಗ, ಖಾಸಗೀಕರಣ, ರೈತರ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಸುತ್ತುವರಿದಿದ್ದಾರೆ. ರಾಹುಲ್(Rahul Gandhi) ಟ್ವೀಟ್ ಮೂಲಕ, ಪ್ರಧಾನಿ ಮೋದಿಯವರು ದೈನಂದಿನ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ರಾಹುಲ್ ಗಾಂಧಿ ಟ್ವೀಟ್ ನಲ್ಲಿ, 'ಪ್ರಧಾನಿಯವರ ಪ್ರತಿ ದಿನ ಏನು ಮಾಡಬೇಕು ಪಟ್ಟಿ.
Uttar Pradesh: 24 ಜಿಲ್ಲೆಗಳಲ್ಲಿ 12ನೇ ತರಗತಿ ಇಂಗ್ಲಿಷ್ ಪರೀಕ್ಷೆ ರದ್ದು!
1. ಪೆಟ್ರೋಲ್-ಡೀಸೆಲ್-ಗ್ಯಾಸ್ ದರವನ್ನು ಎಷ್ಟು ಹೆಚ್ಚಿಸಬೇಕು.
2. ಜನರ ‘ಖರ್ಚೆ ಪೇ ಚರ್ಚಾ’ ನಿಲ್ಲಿಸುವುದು ಹೇಗೆ?
3. ಯುವಕರಿಗೆ ಉದ್ಯೋಗದ ಪೊಳ್ಳು ಕನಸುಗಳನ್ನು ತೋರಿಸುವುದು ಹೇಗೆ?
4. ನಾನು ಇಂದು ಯಾವ ಸರ್ಕಾರಿ ಕಂಪನಿಯನ್ನು ಮಾರಾಟ ಮಾಡಲಿ? ಮತ್ತು
5. ರೈತರನ್ನ ಅಸಹಾಯಕರಾಗಿ ಹೇಗೆ ಮಾಡುವುದು?
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ(Fuel Price) ಇಳಿಕೆಯಾಗಿದ್ದರೂ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿರುವುದು ಅಚ್ಚರಿಯ ಸಂಗತಿ. ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎರಡರ ಬೆಲೆಯಲ್ಲಿ ಲೀಟರ್‌ಗೆ 80-80 ಪೈಸೆ ಏರಿಕೆಯಾಗಿದ್ದು, ಇದೀಗ ಪೆಟ್ರೋಲ್ ಲೀಟರ್‌ಗೆ 101 ರೂಪಾಯಿ ದಾಟಿದೆ.
ಇದನ್ನೂ ಓದಿ : ನಿಮ್ಮ PF ಬ್ಯಾಲೆನ್ಸ್ ಪರಿಶೀಲಿಸಬೇಕಾ? ಹಾಗಿದ್ರೆ, ಈ ಕೆಲಸ ಮಾಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಹಾಗೂ YouTube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.