ರಾಜನ ತೆರಿಗೆ ವಿರೋಧಿಸಿ ತಮ್ಮ ಸ್ತನವನ್ನೇ ಕತ್ತರಿಸಿದ್ದ ನಂಗೇಲಿ ಮಹಿಳೆಯ ಬಗ್ಗೆ ನಿಮಗೆಷ್ಟು ಗೊತ್ತು?
ಇಂತಹ ಪಿತೃಪ್ರಧಾನ ವ್ಯವಸ್ಥೆಯು ಈ ಹಿಂದೆ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಸ್ತನ ತೆರಿಗೆಯನ್ನು ವಿಧಿಸುತ್ತಿತ್ತು ಎಂದರೆ ನೀವು ನಂಬುತ್ತೀರಾ? ಹೌದು, ಇದನ್ನು ನೀವು ನಂಬಲೇಬೇಕು ಅಚ್ಚರಿ ಎಂದರೆ ಈ ಹಿಂದೆ ಕೆಳ ಜಾತಿಯ ಮಹಿಳೆಯರು ತಮ್ಮ ಸ್ತನಗಳ ಗಾತ್ರದ ಆಧಾರದ ಮೇಲೆ ತೆರಿಗೆಯನ್ನು ವಿಧಿಸಬೇಕಾಗಿತ್ತು.ಇಂತಹ ಸಂದರ್ಭದಲ್ಲಿ ಇಂತಹ ಅನಿಷ್ಟ ಆಚರಣೆಯ ವಿರುದ್ಧ ಸಿಡಿದೆದ್ದ ಧಿಟ್ಟ ಮಹಿಳೆ ಹೋರಾಟದ ಕಥನವನ್ನು ನಾವು ಈಗ ಇಲ್ಲಿ ಹೇಳಲು ಹೊರಟಿದ್ದೇವೆ.
ನವದೆಹಲಿ: ಪಿತೃಪ್ರಧಾನ ಜಗತ್ತಿನಲ್ಲಿ ಮಹಿಳಾ ಕೇಂದ್ರಿತ ಕಟ್ಟಪ್ಪಣೆಗಳನ್ನು ಇಂದಿಗೂ ಕೂಡ ನಾವು ನೋಡಬಹುದಾಗಿದೆ.ಆ ಮೂಲಕ ಮಹಿಳೆಯು ಇಂದಿಗೂ ಕೂಡ ಧಾರ್ಮಿಕ ಕಟ್ಟುಪಾಡುಗಳಿಗೆ ಅನಿವಾರ್ಯವಾಗಿ ಒಳಗಾಗುತ್ತಿದ್ದಾಳೆ.
ಇಂತಹ ಪಿತೃಪ್ರಧಾನ ವ್ಯವಸ್ಥೆಯು ಈ ಹಿಂದೆ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಸ್ತನ ತೆರಿಗೆಯನ್ನು ವಿಧಿಸುತ್ತಿತ್ತು ಎಂದರೆ ನೀವು ನಂಬುತ್ತೀರಾ? ಹೌದು, ಇದನ್ನು ನೀವು ನಂಬಲೇಬೇಕು ಅಚ್ಚರಿ ಎಂದರೆ ಈ ಹಿಂದೆ ಕೆಳ ಜಾತಿಯ ಮಹಿಳೆಯರು ತಮ್ಮ ಸ್ತನಗಳ ಗಾತ್ರದ ಆಧಾರದ ಮೇಲೆ ತೆರಿಗೆಯನ್ನು ವಿಧಿಸಬೇಕಾಗಿತ್ತು.ಇಂತಹ ಸಂದರ್ಭದಲ್ಲಿ ಇಂತಹ ಅನಿಷ್ಟ ಆಚರಣೆಯ ವಿರುದ್ಧ ಸಿಡಿದೆದ್ದ ಧಿಟ್ಟ ಮಹಿಳೆ ಹೋರಾಟದ ಕಥನವನ್ನು ನಾವು ಈಗ ಇಲ್ಲಿ ಹೇಳಲು ಹೊರಟಿದ್ದೇವೆ.
ಸಾಮಾನ್ಯವಾಗಿ ಸಮಾಜದಲ್ಲಿ ಕೆಲವು ಆಚರಣೆಗಳನ್ನು ಮಹಿಳೆಯರು ಅನಿವಾರ್ಯವಾಗಿ ಒಪ್ಪಿಕೊಳ್ಳುತ್ತಾ ಅವುಗಳಿಗೆ ಸಹಮತವನ್ನು ನೀಡುತ್ತಾ ಬಂದಿರುತ್ತಾರೆ, ಆದರೆ ಕೆಲವೇ ಕೆಲವು ಮಹಿಳೆಯರು ಮಾತ್ರ ಇಂತಹ ಆಚರಣೆಗಳ ವಿರುದ್ಧ ನಿಲ್ಲುವಷ್ಟು ಧೈರ್ಯವನ್ನು ತೋರುತ್ತಾರೆ.ಅಂತಹ ಮಹಿಳೆಯರಲ್ಲಿ ನಂಗೇಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ .ಕೇರಳದ ಚೇರ್ತಲಾಕ್ಕೆ ಸೇರಿದ ನಂಗೇಲಿ, 1800 ರ ದಶಕದಲ್ಲಿ ರಾಜ್ಯದಲ್ಲಿ ಕೆಳವರ್ಗದವರಿಗೆ ವಿಧಿಸಲಾಗುತ್ತಿದ್ದ ಸ್ತನ ತೆರಿಗೆ ಅಥವಾ ಮುಲಕ್ಕರಂ ವಿರುದ್ಧ ಪ್ರತಿಭಟಿಸಿದರು.ಮೂಲತಃ ಕೇರಳದ ಈಜವ ಜಾತಿಗೆ ಸೇರಿದ ನಂಗೇಲಿ, ಸ್ತನ ತೆರಿಗೆ ವಿರೋಧಿಸಲಿಕ್ಕಾಗಿ ಅವರು ತಮ್ಮ ಜೀವವನ್ನೇ ತ್ಯಾಗ ಮಾಡಿದರು .ಸಾಂಪ್ರದಾಯಿಕ ಕ್ರೂರ ವ್ಯವಸ್ಥೆಯನ್ನು ನಂಗೇಲಿ ಒಪ್ಪಿಕೊಳ್ಳದೆ ಅಂತಿಮವಾಗಿ ತೆರಿಗೆ ಪದ್ಧತಿ ವಿರುದ್ಧ ಸ್ತನಗಳನ್ನು ಕತ್ತರಿಸುವ ಮೂಲಕ ಬಂಡಾಯವೆದ್ದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.