ಏಪ್ರಿಲ್ 5 ರಂದು ಆ ಒಂಬತ್ತು ನಿಮಿಷಗಳಲ್ಲಿ ಎಷ್ಟು ವಿದ್ಯುತ್ ಉಳಿತಾಯವಾಗುತ್ತೆ ಗೊತ್ತಾ!
ಈ ದಿನಗಳಲ್ಲಿ ಲಾಕ್‌ಡೌನ್ ಕಾರಣದಿಂದಾಗಿ ಇಡೀ ದೇಶದಲ್ಲಿ ಗರಿಷ್ಠ ಗಂಟೆ (Peak Hour) ಬೇಡಿಕೆ ಹಿಂದಿನ ವರ್ಷಕ್ಕಿಂತ 43 ಸಾವಿರ ಮೆಗಾವ್ಯಾಟ್ ಕಡಿಮೆಯಾಗಿದೆ.
ನವದೆಹಲಿ: ಕರೋನಾವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಎಪ್ರಿಲ್ 5 ರಂದು ದೇಶಾದ್ಯಂತ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಮನೆಯ ಎಲ್ಲಾ ಲೈಟ್ ಗಳನ್ನೂ ಆಫ್ ಮಾಡಿ ಮೇಣದ ಬತ್ತಿ ಅಥವಾ ಟಾರ್ಚ್ ಲೈಟ್ ಬೆಳಗಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಹಠಾತ್ ಆಗಿ ಬೇಡಿಕೆ ಕಡಿಮೆಯಾದ ಕಾರಣ ಏಪ್ರಿಲ್ 5ರಂದು ಪವರ್ ಗ್ರಿಡ್ ಕಾರ್ಯಾಚರಣೆಗಳು ಸ್ಥಗಿತಗೊಳ್ಳಬಹುದು ಎಂಬ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳು ಹಬ್ಬಲು ಆರಂಭಿಸಿವೆ. ಇದರ ಹಿಂದಿನ ಸತ್ಯಾಸತ್ಯತೆ ಏನು ಮತ್ತು 9 ನಿಮಿಷಗಳ ಕಾಲ ದೇಶಾದ್ಯಂತ ವಿದ್ಯುತ್ ದೀಪಗಳನ್ನು ಆಫ್ ಮಾಡುವುದರಿಂದ ಎಷ್ಟು ವಿದ್ಯುತ್ ಉಳಿಸಬಹುದು ಎಂಬುದನ್ನು ತಿಳಿಯಿರಿ.
ಪ್ರಧಾನಿ ಮೋದಿ ವಿಡಿಯೋ ಸಂದೇಶ : ಕರೋನಾ ವಿರುದ್ಧದ ಹೋರಾಟಕ್ಕೆ ಇದೊಂದೇ 'ರಾಮಬಾಣ'
ವಿದ್ಯುತ್ ಸಚಿವಾಲಯದ ದತ್ತಾಂಶಗಳ ಪ್ರಕಾರ ಈಗ ದೇಶದಲ್ಲಿ ವಿದ್ಯುತ್‌ನ ಗರಿಷ್ಠ ಬೇಡಿಕೆ ಸುಮಾರು 1,25,817 ಮೆಗಾವ್ಯಾಟ್ ಇದೆ (2 ಏಪ್ರಿಲ್ 2020ರ ಮಾಹಿತಿಯ ಪ್ರಕಾರ). ಇದೇ ವೇಳೆ ಏಪ್ರಿಲ್ 5ರಂದು ಮನೆಗಳ ವಿದ್ಯುತ್ ದೀಪಗಳು 9 ನಿಮಿಷಗಳ ಕಾಲ ಬೆಳಗದಿದ್ದಾಗ ಈ ಬೇಡಿಕೆ 90 ಸಾವಿರ ಮೆಗಾವ್ಯಾಟ್‌ನಿಂದ 1 ಲಕ್ಷ ಮೆಗಾವ್ಯಾಟ್‌ಗೆ ಇಳಿಯಬಹುದು ಎಂದು ಗ್ರಿಡ್ ತಜ್ಞರು ಹೇಳುತ್ತಾರೆ. ಅಂದರೆ ಆ ಸಮಯದಲ್ಲಿ 25ರಿಂದ 35 ಸಾವಿರ ಮೆಗಾವ್ಯಾಟ್ ವಿದ್ಯುತ್ ಬಳಕೆ ಕಡಿಮೆ ಆಗಲಿದೆ.
Lockdown: ಅಗತ್ಯ ವಸ್ತುಗಳನ್ನು ನಿಮ್ಮ ಮನೆ ಬಾಗಿಲಿದೆ ತರಲಿದೆ Uber
ವಿದ್ಯುತ್ ಬಳಕೆಯ ಮೇಲೆ ಲಾಕ್‌ಡೌನ್ ಪರಿಣಾಮ:
ಲಾಕ್‌ಡೌನ್ ಕಾರಣದಿಂದಾಗಿ ಇಡೀ ದೇಶದಲ್ಲಿ Peak Hour ಬೇಡಿಕೆ ಹಿಂದಿನ ವರ್ಷಕ್ಕಿಂತ 43 ಸಾವಿರ ಮೆಗಾವ್ಯಾಟ್ ಕಡಿಮೆಯಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಇದು ಸುಮಾರು 1,68,500 ಮೆಗಾವ್ಯಾಟ್ ಇತ್ತು.
ಇಂಧನ ಸಚಿವಾಲಯ ಏನು ಹೇಳಿದೆ?
ಸಾಮಾಜಿಕ ಜಾಲತಾಣದಲ್ಲಿ ಹರಡಿರುವ ವದಂತಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ವಿದ್ಯುತ್ ಸಚಿವಾಲಯದ ಅಧಿಕಾರಿಗಳು, ಗ್ರಿಡ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಅಥವಾ ಮನೆಯ ದೀಪಗಳನ್ನು 9 ನಿಮಿಷಗಳ ಕಾಲ ಆಫ್ ಮಾಡುವುದರಿಂದ ವಿದ್ಯುತ್ ಸ್ಥಾವರಗಳನ್ನು ಬಂದ್ ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ.
ಗುಡ್ ನ್ಯೂಸ್: ಇ-ರಿಕ್ಷಾ, ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಸಿಗಲಿದೆ ₹ 5000
ಮಹಾರಾಷ್ಟ್ರ ವಿದ್ಯುತ್ ಸಚಿವರ ಅಸಂಬದ್ಧ ಹೇಳಿಕೆ:
ಸೋಷಿಯಲ್ ಮೀಡಿಯಾದಲ್ಲಿ ವದಂತಿಗಳು ಹರಡಿರುವುದರ ಜೊತೆಗೆ 'ವಿದ್ಯುತ್ ವೈಫಲ್ಯದಿಂದಾಗಿ ಪವರ್ ಗ್ರಿಡ್‌ಗೆ ಬೆದರಿಕೆ ಎದುರಾಗಬಹುದು, ಈ ಹಿನ್ನೆಲೆಯಲ್ಲಿ 9 ನಿಮಿಷಗಳ ಕಾಲ ವಿದ್ಯುತ್ ದೀಪಗಳನ್ನು ಆರಿಸಬೇಡಿ' ಎಂದು ಮಹಾರಾಷ್ಟ್ರ ವಿದ್ಯುತ್ ಸಚಿವ ನಿತಿನ್ ರೌತ್ ರಾಜ್ಯದ ಜನರಿಗೆ ಮನವಿ ಮಾಡಿದ್ದಾರೆ.