ಸಿಧು ರ್ಯಾಲಿ ವೊಂದರಲ್ಲಿನ ಪಾಕಿಸ್ತಾನ ಜಿಂದಾಬಾದ್ ಘೋಷಣೆಯನ್ನು ಪಾಕ್ ಮಾಧ್ಯಮಗಳು ಕವರ್ ಮಾಡಿದ್ದೇಗೆ ಗೊತ್ತಾ..
ಪಂಜಾಬ್ ಮಂತ್ರಿ ಮತ್ತು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರ ರ್ಯಾಲಿಯೊಂದರಲ್ಲಿ ಪಾಕಿಸ್ತಾನ ಪರವಾದ ಘೋಷಣೆಗಳು ಪಾಕ್ ಮಾಧ್ಯಮಗಳಿಗೆ ಆಹಾರವಾಗಿವೆ. ಜೀ ನ್ಯೂ ಝೀ ನ್ಯೂಸ್ ಅಲ್ವಾರ್ ರ್ಯಾಲಿಯಲ್ಲಿನ ಪಾಕಿಸ್ತಾನ ಜಿಂದಾಬಾದ್ ಘೋಷನೆಗಳನ್ನೋಳಗೊಂಡ ವಿಡಿಯೋವನ್ನು ಪ್ರಸಾರ ಮಾಡಿದ ನಂತರ ಪಾಕಿಸ್ತಾನದ ಕೆಲವು ಸುದ್ದಿ ಚಾನಲ್ಗಳು ಅದನ್ನು ಪ್ರಸಾರ ಮಾಡಿದ್ದವು ಎಂದು ತಿಳಿದುಬಂದಿದೆ.
ನವದೆಹಲಿ: ಪಂಜಾಬ್ ಮಂತ್ರಿ ಮತ್ತು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರ ರ್ಯಾಲಿಯೊಂದರಲ್ಲಿ ಪಾಕಿಸ್ತಾನ ಪರವಾದ ಘೋಷಣೆಗಳು ಪಾಕ್ ಮಾಧ್ಯಮಗಳಿಗೆ ಆಹಾರವಾಗಿವೆ. ಜೀ ನ್ಯೂ ಝೀ ನ್ಯೂಸ್ ಅಲ್ವಾರ್ ರ್ಯಾಲಿಯಲ್ಲಿನ ಪಾಕಿಸ್ತಾನ ಜಿಂದಾಬಾದ್ ಘೋಷನೆಗಳನ್ನೋಳಗೊಂಡ ವಿಡಿಯೋವನ್ನು ಪ್ರಸಾರ ಮಾಡಿದ ನಂತರ ಪಾಕಿಸ್ತಾನದ ಕೆಲವು ಸುದ್ದಿ ಚಾನಲ್ಗಳು ಅದನ್ನು ಪ್ರಸಾರ ಮಾಡಿದ್ದವು ಎಂದು ತಿಳಿದುಬಂದಿದೆ.
ಈ ವಿಡಿಯೋವನ್ನು ಪಾಕಿಸ್ತಾನದ ಸುದ್ದಿ ಚಾನಲ್ ಗಳು ಪ್ರಸಾರ ಮಾಡುತ್ತಾ ಭಾರತದ ಸಾಮಾನ್ಯ ಜನರು ನೆರೆಹೊರೆಯ ದೇಶಗಳೊಂದಿಗೆ ಸೌಹಾರ್ದ ಸಂಬಂಧವನ್ನು ಬಯಸುತ್ತಾರೆಯೆಂದು ತಿಳಿಸಿವೆ. ಪಾಕಿಸ್ತಾನ ಸುದ್ದಿ ನಿರ್ವಾಹಕರು ಮತ್ತು ಪತ್ರಕರ್ತರು ಹೇಳುವಂತೆ ಭಾರತದ ಸರ್ಕಾರದ ಮತ್ತು ಅಲ್ಲಿನ ಮಾಧ್ಯಮಗಳಿಗೆ ಎರಡು ನೆರೆ ರಾಷ್ಟ್ರಗಳ ಸಂಬಂಧ ಉತ್ತಮವಾಗಿರುವುದು ಬೇಕಾಗಿಲ್ಲ ಎಂದು ತಿಳಿಸಿದ್ದಾರೆ.
ರಾಜಸ್ಥಾನ ವಿಧಾನಸಭಾ ಚುನಾವಣೆ 2018ರ ಅಭಿಯಾನದ ಸಂದರ್ಭದಲ್ಲಿ ಅಲ್ವಾರ್ನಲ್ಲಿನ ರ್ಯಾಲಿಯಲ್ಲಿ "ಪಾಕಿಸ್ತಾನ ಝಿಂದಾಬಾದ್" ಎನ್ನುವ ಘೋಷಣೆಯ ವಿಚಾರವಾಗಿ ಸಿಧು ಮತ್ತು ಕಾಂಗ್ರೆಸ್ ಪಕ್ಷದ ನಿಲುವನ್ನು ಜೀ ನ್ಯೂಸ್ ಪ್ರಶ್ನಿಸಿದೆ. ಇತ್ತ ಝೀ ನ್ಯೂಸ್ ಕೂಡ ಕಾಂಗ್ರೆಸ್ ನ ವೀಡಿಯೋ ತಿರುಚುವಿಕೆ ಆರೋಪವನ್ನು ಅಲ್ಲಗಳೆದಿದೆ. ಕಾಂಗ್ರೆಸ್ ಪಕ್ಷದ ಸದಸ್ಯರು ಈ ವಿಚಾರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವನ್ನು ಪ್ರಾರಂಭಿಸಿದ್ದಾರೆ.
ವೀಡಿಯೊದ ದೃಢೀಕರಣವನ್ನು ದೃಢೀಕರಿಸಲು ಜೀ ನ್ಯೂಸ್ ತಂಡವು ಜನ ಸಾಮಾನ್ಯರು ಮತ್ತು ಪತ್ರಕರ್ತರು ಸಿಧು ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪತ್ರಕರ್ತರನ್ನು ಸಂಪರ್ಕಿಸಿ ಅಲ್ಲಿ ರಿಕಾರ್ಡ್ ಮಾಡಿದ್ದ ಒಟ್ಟು ಏಳು ವಿಡಿಯೋಗಳನ್ನು ಕಲೆ ಹಾಕಿತ್ತು.ಅಲ್ಲಿ ಒಬ್ಬ ಸ್ಥಳೀಯ ಪತ್ರಕರ್ತ ಸಿಧು ರ್ರ್ಯಾಲಿಯೊಂದರಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎನ್ನುವ ಘೋಷಣೆಯನ್ನು ಕೂಗಿರುವ ವಿಚಾರವನ್ನು ಸ್ಪಷ್ಟಪಡಿಸಿದ್ದನು.
ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸರ್ಜೆವಾಲಾ ರ್ಯಾಲಿಯಲ್ಲಿ ಘೋಷಣೆಗಳು ಸತ್ ಶ್ರೀ ಅಕಲ್ ಎಂದು ಸ್ಪಷ್ಟಪಡಿಸಿದ್ದರು.ಈ ವಿಚಾರವಾಗಿ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಜೀ ನ್ಯೂಸ್ ವಿರುದ್ದ ಮಾನಹಾನಿ ಕೇಸ್ ದಾಖಲಿಸುವ ಬೆದರಿಕೆಯನ್ನು ಒಡ್ಡಿದ್ದರು.